ಬೆಸ್ಟ್ ಪಿ.ಯು ಸೈನ್ಸ್ ಕಾಲೇಜ್ ರಾಜ್ಯಕ್ಕೆ 10ನೇ ಸ್ಥಾನ
Best PU Science College 10th place in the state
ಲೋಕದರ್ಶನ ವರದಿ
ತಾಳಿಕೋಟಿ 09: ನಗರದ ಘನಮಠೇಶ್ವರ ಶಿಕ್ಷಣ ಸಂಸ್ಥೆ ಅಡಿಯಲ್ಲಿ ನಡೆಯುತ್ತಿರುವ ಬೆಸ್ಟ್ ಪಿಯು ಸೈನ್ಸ ಕಾಲೇಜಿ ಹಾನ 2025-26 ನೇ ಸಾಲಿನಲ್ಲಿ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳು 100ಕ್ಕೆ 100ರಷ್ಟು ಫಲಿತಾಂಶ ಪಡೆದು ಸಾಧನೆಗೈದಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಒಟ್ಟು 152 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಸಿಂಚನಾ ಕಮಲಾಪುರ (589/600) ಶೇ. 98.2ಅ ಪಡೆದು ರಾಜ್ಯಕ್ಕೆ ಹತ್ತನೇ ಸ್ಥಾನ, ಜಿಲ್ಲೆಗೆ ನಾಲ್ಕನೇ ಸ್ಥಾನ ಗಳಿಸಿದ್ದಾರೆ, ಜಯಾ ಸುರೇಶ ಸಜ್ಜನ (583/600) ಶೇ.97.2ಅ. ಪಡೆದು ದ್ವಿತೀಯ ಸ್ಥಾನ ಗಳಿಸಿದ್ದಾರೆ. ಹಾಗೂ ರಾಜೇಶ್ವರಿ ಉಳ್ಳಾಗಡ್ಡಿ (573/600) 95.5ಅ ಪಡೆದು ತೃತೀಯ ಸ್ಥಾನ ಗಳಿಸಿದ್ದಾರೆ. ಭೌತಶಾಸ್ತ್ರದಲ್ಲಿ ರಾಜೇಶ್ವರಿ ಉಳ್ಳಾಗಡ್ಡಿ 100 ಕ್ಕೆ 100, ಗಣಿತದಲ್ಲಿ ಸಿಂಚನಾ ಕಮಲಾಪುರ 100 ಕ್ಕೆ 100, ಜೀವಶಾಸ್ತ್ರದಲ್ಲಿ ಪ್ರಜ್ಞಾ ಹೊನ್ನಳ್ಳಿ ಹಾಗೂ ಪೂಜಾ 100 ಕ್ಕೆ 100 ಪಡೆದು ಸಾಧನೆ ಮಾಡಿದ್ದಾನೆ.
ಒಟ್ಟು ವಿದ್ಯಾರ್ಥಿಗಳಲ್ಲಿ 21 ವಿದ್ಯಾರ್ಥಿಗಳು ಶೇ.90ಅ ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಅದರಲ್ಲಿ 42 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 60 ಪ್ರಥಮ ದರ್ಜೆ ಹಾಗೂ 50 ವಿದ್ಯಾರ್ಥಿಗಳು ದ್ವಿತಿಯ ದರ್ಜೇಯಲ್ಲಿ ಪಾಸಾಗಿದ್ದಾರೆ.
ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಸ್.ಎಮ್.ಸಜ್ಜನ, ಕಾರ್ಯದರ್ಶಿ ವಿವೇಕಾನಂದ ಸಜ್ಜನ, ಪ್ರಾಚಾರ್ಯರು ಎಮ್. ಮಾರಣ್ಣ, ಉಪನ್ಯಾಸಕ ನರೇಶ್, ರವಿಕುಮಾರ, ಉಪನ್ಯಾಸಕಿಯರಾದ ಸವಿತಾಂಜಲಿ, ಶಾಲೆಯ ಮುಖ್ಯಗುರು ಬಸವರಾಜ ಜಿ. ಸಜ್ಜನ ಮತ್ತು ಮುಖ್ಯ ಗುರುಮಾತೆ ರೇಣುಕಾ ದೇಸಾಯಿ ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ಉತ್ತೀರ್ಣ ಎಲ್ಲ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ. ಹಾಗೂ ಎಲ್ಲಾ ಸಿಬ್ಬಂದಿವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 