ಸತತ 24 ಗಂಟೆ ವರೆಗೆ ನಡೆದ ಬೆಳಗಾವಿ ಗಣೇಶ ಮೂರ್ತಿ ವಿಸರ್ಜನಾ ಕಾರ್ಯ : 1 ದಿನದ ಬಳಿಕ ಕೊನೆಯ ಗಣೇಶನಿಗೆ ಭಾವನಾತ್ಮಕ ವಿದಾಯ

ಸತತ 24 ಗಂಟೆ ವರೆಗೆ ನಡೆದ ಬೆಳಗಾವಿ ಗಣೇಶ ಮೂರ್ತಿ ವಿಸರ್ಜನಾ ಕಾರ್ಯ : 1 ದಿನದ ಬಳಿಕ ಕೊನೆಯ ಗಣೇಶನಿಗೆ ಭಾವನಾತ್ಮಕ ವಿದಾಯ

ಬೆಳಗಾವಿ, ಸೆ, 10 : ಮೈಸೂರು ದಸರಾ ಮಾದರಿ ಬೆಳಗಾವಿಯಲ್ಲಿ ಆಚರಿಸಲಾಗುತ್ತಿರುವ ಗಣೇಶ ಉತ್ಸವದ ವಿಸರ್ಜನಾ ಕಾರ್ಯವು ಸತತವಾಗಿ 24 ಗಂಟೆಗಳ ಕಾಲ ನಡೆದಿದ್ದು, ಮಳೆ ಬಿಸಿಲನ್ನು ಲೆಕ್ಕಿಸದೆ ಸಾವಿರಾರು ಭಕ್ತರು ಕುಣಿದು ಕುಪ್ಪಳಿಸಿ ಸಂಭ್ರಮಿಸಿ ಭಕ್ತಿಯಭಾವ ಪ್ರದರ್ಶಿಸಿದರೆ ಇತ್ತ ರಾತ್ರಿ ಈಡಿ ಗಣೇಶ ಮೂರ್ತಿಗಳ ದರ್ಶನ ಜೊತೆಗೆ ಲಕ್ಷಾಂತರ ಸಾರ್ವಜನಿಕರು ಗಣೇಶ ಮೂರ್ತಿಗಳ ವಿಸರ್ಜನಾ ಕಾರ್ಯ ನೋಡಲು ಸಾಕ್ಷೀಯಾದರು. ಸತತ 24 ಗಂಟೆಗಳ ಮೆರವಣಿಗೆ ಬಳಿಕ ನಗರದ ಬೆಳಗಾವಿ ಮಹಾನಗರ ಪಾಲಿಕೆ ಹಾಗೂ ಕೊನವಾಳ ಗಲ್ಲಿಯ ಸಾರ್ವಜನಿಕ ಗಣಪನಿಗೆ ಶನಿವಾರ ಸಂಜೆ 5ರ ಸುಮಾರಿಗೆ ಕಪೀಲೇಶ್ವರ ಹೊಂಡದಲ್ಲಿ ಅಂತಿಮವಾಗಿ ವಿದಾಯ ಹೇಳಲಾಯಿತು.


      ಗಡಿ ಜಿಲ್ಲೆ ಬೆಳಗಾವಿಯಲ್ಲಿ 11 ದಿನಗಳ ಕಾಲ ಆಚರಣೆ ಮಾಡಲಾಗುತ್ತಿರುವ ಗಣೇಶ ಉತ್ಸವದ ವಿಸರ್ಜನಾ ಮೆರವಣಿಗೆಗೆ ಶುಕ್ರವಾರ ಸಂಜೆ 5 ಗಂಟೆಯ ಸುಮಾರಿಗೆ ಶಾಸಕರಾದ ಅಭಯ ಪಾಟೀಲ ಮತ್ತು ಅನಿಲ ಬೆನಕೆ, ಈರಣ್ಣ ಕಡಾಡಿ, ಮಂಗಳಾ ಅಂಗಡಿ, ಮಹಾಂತೇಶ ಕವಟಗಿಮಠ ಅವರು ನಗರದ ಕಿರ್ಲೋಸ್ಕರ್ ರಸ್ತೆಯಿಂದ ಗಣೇಶ ಮೂರ್ತಿಗಳ ಮೆರವಣಿಗೆ ಗಣ್ಯರು ಚಾಲನೆ ನೀಡಿದ್ದರು. ಬೆಳಗಾವಿಯಲ್ಲಿ 75 ವರ್ಷ ಪೂರೈಸಿದ ಗಣೇಶ ಮಂಡಳಿಯ ಗಣೇಶ ಮೂರ್ತಿಗಳಿಗೆ ಪೂಜೆ ಸಲ್ಲಿಸಿ ವಿಸರ್ಜನಾ ಮೆರವಣಿಗೆಗೆ ಚಾಲನೆ ನೀಡಲಾಯಿತು.


ನಗರದಲ್ಲಿ ಲಕ್ಷಾಂತರ ಭಕ್ತರು ಗಣೇಶನ ದರ್ಶನಕ್ಕೆ ಹಾಗೂ ವಿಸರ್ಜನೆಯ ಕಾರ್ಯಕ್ರಮ ವೀಕ್ಷಿಸಲು ಆಗಮಿಸಿದ್ದ ಹಿನ್ನೆಲೆಯಲ್ಲಿ ನಗರದ ತುಂಬೆಲ್ಲಾ ಬೀಗಿಯಾದ ಪೆÇಲೀಸ್ ಭದ್ರತೆಯಲ್ಲಿ ಗಣೇಶೋತ್ಸವ ಮೆರವಣಿಗೆ ನಡೆಯಿತು. ಬೆಳಗಾವಿಯಲ್ಲಿ ಶುಕ್ರವಾರ ಸಂಜೆ 5ರ ಸುಮಾರಿಗೆ ಪ್ರಾರಂಭವಾಗಿದ್ದ ಗಣೇಶ ವಿಸರ್ಜನೆ ಕಾರ್ಯವು ಶನಿವಾರ ಸಂಜೆ 5 ಗಂಟೆಯವರೆಗೆ ಸತತ 24 ಗಂಟೆಯ ವರೆಗೆ ನಡಿಯಿತು. ಕೊನೆಯದಾಗಿ ವಿಸರ್ಜನೆಗೆ ಆಗಮಿಸಿದ್ದ ಬೆಳಗಾವಿ ಕೊನವಾಳ ಗಲ್ಲಿಯ ಸಾರ್ವಜನಿಕ ಗಣೇಶನಿಗೆ ಭಾವನಾತ್ಮಕವಾಗಿ ಅಚಿತಿಮ ವಿಧಾನ ಹೇಳಲಾಯಿತು.


      ಶನಿವಾರ ಸಂಜೆ 5 ಗಂಟೆಯ ಸುಮಾರಿಗೆ ಕೊನವಾಳ ಗಲ್ಲಿಯ ಗಣೇಶನಿಗೆ ಮಾರ್ಕೇಟ್ ಪೊಲೀಸ ಠಾಣೆಯ ಎಸಿಪಿ ನಾರಾಯಣ ಭರಮನಿ ಹಾಗೂ ಪಾಲಿಕೆ ಆಯಕ್ತ ರುದ್ರೇಶ ಘಾಳಿ ಅವರು ಪೂಜೆ ಸಲ್ಲಿಸುವ ಮೂಲಕ ಗಣೇಶನ ವಿಸರ್ಜನೆ ಕಾರ್ಯ ನೆರವೇರಿಸಲಾಯಿತು. ಗಣೇಶ ಬಪ್ಪಾ ಮೋರಯಾ, ಮುಂದಿನ ವರ್ಷ ಬೇಗ ಬಾ ಎನ್ನುವ ಘೋಷವಾಕ್ಯದೊಂದಿಗೆ ಬೆಳಗಾವಿ ಗಣೇಶನಿಗೆ ಅಂತಿಮ ವಿದಾಯ ಹೇಳಲಾಯಿತು. ಇದೇ ವೇಳೆಯಲ್ಲಿ ಕೆಲವು ನಗರಸೇವಕರು ಹಾಗೂ ಎಸಿಪಿ ನಾರಾಯಣ ಭರಮನಿ, ಪಾಲಿಕೆ ಆಯುಕ್ತ ರುದ್ರೇಶ ಘಾಳಿ, ಸಂಜಯ ಡುಮ್ಮಗೋಳ, ಲಕ್ಷ್ಮೀ ನಿಪ್ಪಾಣಿಕರ ಅವರುಗಳ ಜೊತೆ ಕೆಲವು ಅಧಿಕಾರಿಗಳು ಮತ್ತು ನಾಗರಿಕರು ಡ್ಯಾನ್ಸ್‍ಗೆ ಸ್ಟೇಪ್ ಹಾಕಿ ಸಂಭ್ರಮಿಸಿದರು.


      ನಗರದಲ್ಲಿನ ಒಟ್ಟು 382 ಸಾರ್ವಜನಿಕ ಗಣೇಶ ಮೂರ್ತಿಗಳ ಮೆರವಣಿಗೆಯಲ್ಲಿ ಭಾಗಿಯಾಗಿದ್ದವು. ರಾತ್ರಿಯಿಡಿ ಲಕ್ಷಾಂತರ ಜನರು ಮೆರವಣಿಗೆ ಸಾಕ್ಷಿ ಆದರು. ಬೆಳಗಾವಿ ಗಣೇಶೋತ್ಸವದಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆ ವಾಹನಗಳಿಗೆ ವೀರ ಸಾವರ್ಕರ್, ಲೋಕಮಾನ್ಯ ತಿಲಕ ಭಾವಚಿತ್ರಗಳನ್ನು ಹಾಕಲಾಗಿತ್ತು. ಶ್ರೀ ಲೋಕಮಾನ್ಯ ತಿಲಕ ಗಣೇಶ ಮಂಡಳದಿಂದ ಪೆÇೀಟೋಗಳ ಸದಸ್ಯರು ಹಾಕಿದ್ದರು.


       ಗಣೇಶ ಮೂರ್ತಿಗಳು ರಾತ್ರಿ ಈಡಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಕಪಿಲೇಶ್ವರ ಮಂದಿರದ ಹೊಂಡದಲ್ಲಿ ವಿಸರ್ಜನೆಯಾಗಲಿವೆ. ಬೆಳಗಾವಿ ಮಹಾನಗರ ಪಾಲಿಕೆಯಿಂದ ಎತ್ತರದ ಗಣೇಶ ಮೂರ್ತಿ ವಿಸರ್ಜನೆಗೆ ವಿಶೇವಾಗಿ ಕ್ರೇನಗಳ ಬಳಕೆಯನ್ನು ಮಾಡಲಾಯಿತು. ಮೆರವಣಿಗೆಯಲ್ಲಿ ವಿವಿಧ ಬಗೆಯ ಸಾಂಪ್ರದಾಯಿಕ ನೃತ್ಯಗಳು, ವಾದ್ಯಗಳು ನೋಡುಗರ ಗಮನ ಸೆಳೆದವು. ಕಳೆದ ಎರಡು ವರ್ಷಗಳಿಂದ ಕೊರೊನಾ ಸೊಂಕು ಹರಡಿದ್ದ ಹಿನ್ನೆಲೆಯಲ್ಲಿ ಬೆಳಗಾವಿಯ ಗಣೇಶ ಉತ್ಸವಕ್ಕೆ ಮೆರಗು ಬಂದಿರಲಿಲ್ಲ. ಆದರೆ ಈ ಬಾರಿ ಅದ್ದೂರಿಯಾಗಿ ಬೆಳಗಾವಿಯಲ್ಲಿ ಗಣೇಶ ಉತ್ಸವವನ್ನು ಆಚರಣೆ ಮಾಡಲಾಯಿತು.

    ಬೆಳಗಾವಿಯಲ್ಲಿ ಗಣೇಶ ವಿಸರ್ಜನೆ ಹಿನ್ನೆಲೆಯಲ್ಲಿ ನಗರ ಪೊಲೀಸ ಆಯುಕ್ತ ಡಾ. ಬೋರಲಿಂಗಯ್ಯಾ, ಡಿಸಿಪಿಗಳಾದ ರವೀಂದ್ರ ಗಡಾಡಿ, ಸ್ನೇಹಾ ಪಿ,ವ್ಹಿ ಇವರುಗಳು ಬಿಗಿಯಾದ ಬಂದೋಬಸ್ತ್ ಹಮ್ಮಿಕೊಂಡಿದ್ದರು. ಹಾಗೂ ಪಾಲಿಕೆ ಆಯುಕ್ತ ರುದ್ರೇಶ ಘಾಳಿ ಹಾಗೂ ಪಾಲಿಕೆ ಅಧಿಕಾರಿ ಗಳು ವಿಸರ್ಜನೆ ಗೆ ಎಲ್ಲ ಸೌಕರ್ಯ ನೀಡಿದ್ದರು. ತಡರಾತ್ರಿ ವರೆಗೆ ಶಾಸಕರಾದ ಸತೀಶ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳಕರ್, ಕಾಂಎ ಜಿಲ್ಲಾ ಅಧ್ಯಕ್ಷ ನಾವಲಗಟ್ಟಿ ಸೇರಿದಂತೆ ಅನೇಕ ಮುಖಂಡರು ವಿಸರ್ಜನೆ ಮೆರವಣಿಗೆಯ ವೇಳೆ ಹಾಜರಿದ್ದರು.



ಸುದ್ದಿ ಓದಿ