ಬೆಳಗಾವಿಯಲ್ಲಿ ಸಾಲದ ಸುಳಿಗೆ ಸಿಲುಕಿ ನೇಕಾರ ಆತ್ಮಹತ್ಯೆಗೆ ಶರಣು : ನಿಲ್ಲುತ್ತಿಲ್ಲ ನೇಕಾರರ ಸಾವಿನ ಸರಣಿ

ಬೆಳಗಾವಿಯಲ್ಲಿ ಸಾಲದ ಸುಳಿಗೆ ಸಿಲುಕಿ ನೇಕಾರ ಆತ್ಮಹತ್ಯೆಗೆ ಶರಣು : ನಿಲ್ಲುತ್ತಿಲ್ಲ ನೇಕಾರರ ಸಾವಿನ ಸರಣಿ

ಬೆಳಗಾವಿ, ಜೂ, 19: ಭಾರತ್ ನಗರ ಹಮಾಲವಾಡಿ ನಿವಾಸಿ ಕಲ್ಲಪ್ಪ ರುದ್ರಪ್ಪ ಸೊಂಟಕ್ಕಿ ಉರ್ಫ್ ಕುಕಡೊಳ್ಳಿ (58)  ಬಾಡಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

      ಸಾಲದ ಸಂಕಷ್ಟದಲ್ಲಿ ಸಿಲುಕಿದ್ದ ಮೃತ ಕಲ್ಲಪ್ಪ ತಮ್ಮ ಸ್ವಂತ ಮನೆ ಹಾಗೂ ವಿದ್ಯುತ್ ಮಗ್ಗಗಳನ್ನು ಮಾರಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಅಲ್ಲದೆ ಖಾಸಗಿ ಬ್ಯಾಂಕು ಹಾಗೂ ಸಂಘ-ಸಂಸ್ಥೆಗಳಲ್ಲಿ ಸುಮಾರು ನಾಲ್ಕು ಲಕ್ಷ ರೂಪಾಯಿ ಸಾಲ ಮಾಡಿದ್ದರು. ಸಾಲದ ಬಾಧೆ ತಾಳಲಾರದೆ ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಇವರಿಗೆ ಒರ್ವ ಪುತ್ರ, ನಾಲ್ಕು ಜನ ಹೆಣ್ಣು ಮಕ್ಕಳು, ಪತ್ನಿ ಹೊಂದಿದ್ದಾರೆ. 


ಸುದ್ದಿ ಓದಿ