ಬೆಳಗಾವಿಯಲ್ಲಿ ಬೃಹದಾಕಾರದ ಮರ ಬಿದ್ದು ಯುವಕ ಸ್ಥಳದಲ್ಲೇ ಸಾವು : ಮತ್ತೋರ್ವ ಗಂಭೀರ ಗಾಯ : ಸ್ಥಳಕ್ಕೆ ಪೊಲೀಸರ ದೌಡು
ಬೆಳಗಾವಿ, ಸೆ, 13: ಬೃಹತ್ ಆಕಾರದ ಮರವೊಂದು ಸಂಚರಿಸುತ್ತಿದ್ದ ಬೈಕ್ ಮೇಲೆ ಉರುಳಿ ಬಿದ್ದ ಪರಿಣಾಮ ಓರ್ವ ಯುವಕ ಸ್ಥಳದಲ್ಲಿಯೇ ಮೃತಪಟ್ಟು ಇನ್ನೋರ್ವ ಗಂಭೀರ ವಾಗಿ ಗಾಯಗೊಂಡಿರುವ ಘಟನೆ ಬೆಳಗಾವಿಯ ಆರ್ ಟಿಓ (ಸಂಗೊಳ್ಳಿ ರಾಯಣ್ಣ) ವೃತದ ಬಳಿಯಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ.

ಮಂಗಳವಾರ ಬೆಳಿಗ್ಗೆ ಆರ್ ಟಿಓ ವೃತ್ತ ದ ಬಳಿ ಬೈಕ್ ಸವಾರರು ಸಂಚರಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಬೃಹದಾಕಾರದ ಮರವು ಉರುಳಿ ರಸ್ತೆಯಲ್ಲಿ ಸಾಗುತ್ತಿದ್ದ ವಾಹನಗಳ ಮೇಲೆ ಬಿದ್ದಿದೆ. ಈ ಘಟನೆಯಲ್ಲಿ ಓರ್ವ ಯುವಕ ಮರದ ಕೆಳಗೆ ಸಿಕ್ಕುಹಾಕಿಕೊಂಡು ಮೃತಪಟ್ಟಿದ್ದಾನೆ. ಇನ್ನೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ.

ಘಟನಾ ಸ್ಥಳಕ್ಕೆ ಬೆಳಗಾವಿ ನಗರ ಉಪ ಪೊಲೀಸ ಆಯುಕ್ತ ರವೀಂದ್ರ ಗಡಾದಿ ಹಾಗೂ ಮಾರ್ಕೆಟ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಳೆದ ನಾಲ್ಕು ದಿನಗಳಿಂದ ಬೆಳಗಾವಿ ನಗರ ಹಾಗೂ ಜಿಲ್ಲೆಯಲ್ಲಿ ಸತತ ವಾಗಿ ಮಳೆ ಸುರಿತ್ತಿದ್ದು ಬೆಳಗಾವಿ ನಗರದಲ್ಲಿ ಮಳೆಯಿಂದ ಬೃಹದಾಕಾರದ ಹಾಗೂ ಹಳೆಯ ಮರಗಳು ಉರುಳಿ ಬಿಳುತ್ತಿದ್ದು ಮರದ ಕೆಳಗೆ ಮಳೆಯ ಆಸರಕ್ಕೆ ನಾಗರಿಕರು ನಿಲ್ಲದಂತೆ ವಿನಂತಿಸಿಕೊಳ್ಳಲಾಗಿದೆ.