ಬೆಳಗಾವಿಯನ್ನು ಆವರಿಸಿದ ಮುಂಜಾನೆಯ ಮಂಜು : ಮಂಜಿನ ನಗರಿಯಾಗಿ ಪರಿವರ್ತನೆಗೊಂಡ ಕುಂದಾನಗರಿ
ಬೆಳಗಾವಿ, ಜ, 17 : ಬೆಳಗು ಆಗುತ್ತಿದ್ದಂತೆ ಬೆಳಗಾವಿಯನ್ನು ದಟ್ಟವಾಗಿ ಮುತ್ತಿಕ್ಕುವ ಮುಂಜಾನೆಯ ಮಂಜು, ಅದರಂತೆ ಮಧ್ಯಾಹ್ನ ಆಗುತ್ತಿದ್ದಂತೆ ಸುಡು ಬಿಸಿಲಿನ ತಾಪ, ಸಂಜೆ ಆಗುತ್ತಿದ್ದಂತೆ ಚಳಿ (ತಂಡಿ) ಯ ನಡುಕ ಇದು ಬೆಳಗಾವಿಯ ವಾತಾವರಣದ ಪರಿಸ್ಥಿತಿ.

ಹೌದು ಓದುಗರೆ ಬೆಳಗಾವಿ ಎಂದಾಕ್ಷಣ ಎಲ್ಲರು ಕುಂದಾನಗರಿ ಅಂತಾ ಕರಿಯೋದು ಸ್ವಾಭಾವಿಕವಾಗಿದೆ. ಆದರೆ ಸದ್ಯ ಬೆಳಗಾವಿಯನ್ನು ದಟ್ಟವಾದ ಮಂಜು ಆವರಿಸುವ ಮೂಲಕ ಮಂಜಿನ ನಗರಿಯಾಗಿ ಪರಿವರ್ತನೆಗೊಳ್ಳುತ್ತಿದೆ.

ಬೆಳಗಾವಿಯ ವಾತಾವರಣ ಎಂದರೆ ಎಲ್ಲರಿಗೂ ಅಚ್ವು ಮೆಚ್ವು. ಆದರೆ ಸದ್ಯ ಬೆಳಗಾವಿಯಲ್ಲಿ ಬೆಳಿಗ್ಗೆ ಮಂಜಿನ ವಾತಾವರಣ, ಮಧ್ಯಾಹ್ನ ಬಿಸಿಲಿನ ತಾಪಮಾನ, ಸಂಜೆಯಾಗುತ್ತಿದ್ದಂತೆ ಚಳಿಯ ಮೂಲಕ ಚಳಿಗಾಲದ ಅನುಭವವಾಗುತ್ತದೆ.
(ಪೊಟೊ) ಪಿ.ಕೆ.ಬಡಿಗೇರ.
