ಕನ್ನಡದ ಹಬ್ಬಕ್ಕೆ ಮದುವನಗಿತ್ತಿಯಂತೆ ಶೃಂಗಾರಗೊಂಡ ಬೆಳಗಾವಿ : ಎಲ್ಲಿ ನೋಡಿದರು ತಳಿರು ತೋರಣದ ಛಾಯೆ, ದೀಪಾಲಂಕಾರದಿಂದ ಜಗಮಗಿಸುತ್ತಿವೆ ಸರಕಾರಿ ಕಚೇರಿಗಳು

ಕನ್ನಡದ ಹಬ್ಬಕ್ಕೆ ಮದುವನಗಿತ್ತಿಯಂತೆ ಶೃಂಗಾರಗೊಂಡ ಬೆಳಗಾವಿ : ಎಲ್ಲಿ ನೋಡಿದರು ತಳಿರು ತೋರಣದ ಛಾಯೆ, ದೀಪಾಲಂಕಾರದಿಂದ ಜಗಮಗಿಸುತ್ತಿವೆ ಸರಕಾರಿ ಕಚೇರಿಗಳು

ಬೆಳಗಾವಿ, ಅ, 31 : ಕನ್ನಡದ ಹಬ್ಬ (ಕರ್ನಾಟಕ ರಾಜ್ಯೋತ್ಸವ)ಕ್ಕೆ ಕುಂದಾನಗರಿ ಬೆಳಗಾವಿ ತಳಿರು ತೋರಣಗಳೊಂದಿಗೆ ಮದುವನಗಿತ್ತಿಯಂತೆ ಶೃಂಗಾರ ಗೊಂಡಿದ್ದು, ಕನ್ನಡ ಹಬ್ಬ ಆಚರಣೆಗೆ ಎಲ್ಲೆಡೆ ಉತ್ಸಾಹ ಮೂಡಿದೆ. 


    ಕಳೆದ ಕೆಲವು ವರ್ಷಗಳಿಂದ ಕೊರೊನಾ ಸೋಂಕು ಹರಡಿದ್ದ ಹಿನ್ನೆಲೆಯಲ್ಲಿ ರಾಜ್ಯೋತ್ಸವ ಆಚರಣೆಗೆ ಅಡಚಣೆ ಉಂಟಾಗಿತ್ತು. ಆದರೆ ಈ ಬಾರಿ ಅದ್ದೂರಿಯಾಗಿ ಕರ್ನಾಟಕ ರಾಜ್ಯೋತ್ಸವ ಆಚರಣೆಗೆ ಸರಕಾರ, ಜಿಲ್ಲಾಡಳಿತ ಮತ್ತು ವಿವಿಧ ಕನ್ನಡ ಸಂಘಟನೆಗಳು ನಿರ್ಧಸಿದ್ದು, ಬೆಳಗಾವಿ ನಗರದಲ್ಲೆಡೆ ಕನ್ನಡದ ಕಂಪು ಪಸರಿಸಲು ಕ್ಷಣಗಣನೆ ಆರಂಭಗೊಂಡಿದೆ. 

    ಈಗಾಗಲೇ ಜಿಲ್ಲಾಡಳಿತ ಕನ್ನಡ ಹಬ್ಬಕ್ಕೆ ಸಕಲಸಿದ್ದತೆಗಳನ್ನು‌ಮಾಡಿಕೊಂಡಿದ್ದು, ಬೆಳಗಾವಿಯ ಎಲ್ಲ ಸರಕಾರಿ ಕಚೇರಿಗಳು  ಸುಣ್ಣ, ಬಣ್ಣ, ವಿದ್ಯುತ್ ದೀಪಾಂಲಕಾರದಿಂದ ಜಗಮಗಿಸುತ್ತಿವೆ. ಇವೆಲ್ಲದರ ನಡುವೆ ವಿವಿಧ ಸಂಘಟನೆ ಗಳು ಅದ್ದೂರಿಯಾಗಿ ರಾಜ್ಯೋತ್ಸವ ಆಚರಣೆಗೆ ಸಿದ್ಧತೆಗಳನ್ನು ಮಾಡಿಕೊಂಡಿವೆ.

ಸುದ್ದಿ ಓದಿ