ರೋಹಿಂಗ್ಯಾ ರೂಪದ ಎಮ್ ಇಎಸ್ ನವರನ್ನು ಮೊದಲು ಬೆಳಗಾವಿಯಿಂದ ಹೊರ ಹಾಕಿ : ಭೀಮಾಶಂಕರ : ನಮ್ಮನ್ನು ಕರ್ನಾಟಕಕ್ಕೆ ಸೇರಿಸಿಕೊಳ್ಳಿ ಬೆಳಗಾವಿಯಲ್ಲಿ ಜತ್ತ ತಾಲೂಕಿನ ಕನ್ನಡಿಗರ ಒತ್ತಾಯ
ಬೆಳಗಾವಿ, ನ, 29 : ನಮ್ಮ ನಾಡಿನ ನೆಲದಲ್ಲಿ ನಿಂತು, ರಾಜ್ಯ ಸರಕಾರದ ಎಲ್ಲ ಸೌಕರ್ಯ ಪಡೆದು ಮಹಾರಾಷ್ಟ್ರಕ್ಕೆ ಸೇರಿಸಿ ಎನ್ನುವ ರೋಹಿಂಗ್ಯಾ ರೂಪದ ನಾಡದ್ರೋಹಿ ಎಮ್ ಇಎಸ್ ಸಂಘಟನೆಯನ್ನು ಬೆಳಗಾವಿಯಿಂದ ಮೊದಲು ಹೊರಹಾಕಿ ಎಂದು ಕರ್ನಾಟಕ ನವ ನಿರ್ಮಾಣ ಸೇನೆಯ ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ ಇಂದಿಲ್ಲಿ ಒತ್ತಾಯಿಸಿದ್ದಾರೆ.
ಮಂಗಳವಾರ ನಗರದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರ ಬೆಳಗಾವಿಯಲ್ಲಿ ನಡೆಸುವ ಅಧಿವೇಶನ ವಿರುದ್ದ ಎಮ್ ಇಎಸ್ ನಡೆಸುವ ಮಾಹಾಮೇಳಾವಕ್ಕೆ ಅನುಮತಿ ನೀಡಬಾರದು ಒಂದು ವೇಳೆ ನೀಡಿದರೆ ಅದರ ವಿರುದ್ದವಾಗಿ ನಾವು ಕೂಡಾ ಬೆಳಗಾವಿಯಲ್ಲಿ ಒನಕೆ ಚಳುವಳಿ ಮಾಡುವದಾಗಿ ತಿಳಿಸಿದರು.
ಯಾವದೇ ಕಾರಣಕ್ಕು ಮಹಾರಾಷ್ಟ್ರ ಸಚಿವರಿಗೆ ಬೆಳಗಾವಿಯಲ್ಲಿ ಸಭೆ ನಡೆಸಲು ಜಿಲ್ಲಾಡಳಿತ ಹಾಗೂ ಸರಕಾರ ಅವಕಾಶ ನೀಡಬಾರದು. ನೀಡಿದರೆ ಸರಕಾರದ ವಿರುದ್ದ ನಮ್ಮ ಹೋರಾಟ ಉಗ್ರವಾಗುತ್ತದೆ.
ಯಾವದೇ ಕಾರಣಕ್ಕು ಮಹಾ ಮೇಳಾವ ಮಾಡುವ ಕಾರ್ಯಕ್ಕೆ ಅನುಮತಿ ನೀಡಬಾರದು. ಒಂದು ವೇಳೆ ನೀಡಿದರೆ ನಾವು ಕೂಡ ಅದರ ವಿರುದ್ಧ ಒನಕೆ ಚಳುವಳಿ ಮಾಡುತ್ತೇವೆ. ನಾವು ಮಹಾಮೇಳಾವಾ ವಿರುದ್ದ ಹೋರಾಟ ಮಾಡುತ್ತೇವೆ ಎಂದರೆ ನಮಗೆ ನೂರಾರು ಕಾನೂನು ಹೇಳುತ್ತಾರೆ. ಆದರೆ ಅವರಿಗೆ ಅನುಮತಿ ನೀಡುತ್ತಾರೆ ಇದು ಯಾವ ನ್ಯಾಯ ಎಂದರು.
ಮಹಾರಾಷ್ಟ್ರ ದ ಜತ್ತ ತಾಲೂಕಿನ ಕನ್ನಡಿಗರು ಕರ್ನಾಟಕ ಸೇರಲು ಇಚ್ವೆ ವ್ಯಕ್ತಪಡಿಸಿ ಹೋರಾಟ ಮಾಡುತ್ತಿದ್ದು, ಅವರನ್ನು ಕರ್ನಾಟಕ ಸಿಎಂ ಬೊಮ್ಮಾಯಿ ಅವರಿಗೆ ಭೇಟಿ ಮಾಡಿಸಲು ಬೆಂಗಳೂರಿಗೆ ಕರೆದುಕೊಂಡು ಹೋಗಲಾಗುತ್ತದೆ ಎಂದು ನುಡಿದರು.
ಫೆಬ್ರುವರಿ ತಿಂಗಳ ಮೊದಲ ವಾರದಲ್ಲಿ ಜತ್ತ ತಾಲ್ಲೂಕಿನ ಸ್ವಾಭಿಮಾನ ಕನ್ನಡಿಗರ ಸಮಾವೇಶ ನಡೆಸುವ ಬಗ್ಗೆ ತೀರ್ಮಾನ ಮಾಡಲಾಗಿದೆ. ಇದಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಅಹ್ವಾನ ನೀಡತ್ತಿದ್ದೇವೆ.
ಬೆಳಗಾವಿ ನಮ್ಮದು ಎನ್ನುವದನ್ನು ಎಲ್ಲ ಸರಕಾರ ಹೇಳುತ್ತ ಬಂದಿವೆ. ಆದರೆ ಕಾರ್ಯ ಮಾಡಿಲ್ಲ. ಭಾಷಾ ಜನಗಣತಿ ಮಾಡರಿ ಅಂದರು ಸರಕಾರ ಮಾಡಿಲ್ಲ. ಕನ್ನಡ ಕಾಯುವ ಕೆಲಸ ಮಾಡಿಲ್ಲ. ಗಡಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ರು ಕೂಡಾ ಯಾವ ಕಾರ್ಯ ಮಾಡಿಲ್ಲ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪುಸ್ತಕ ನೀಡುವದಲ್ಲ. ಗಡಿಯ ಬಗ್ಗೆ ಕಾಳಜಿ ವಹಿಸಬೇಕು ಎಂದರು.
ಗಡಿ ಅಭಿವೃದ್ಧಿ ಪ್ರಾಧಿಕಾರದ ಕಚೇರಿ ಬೆಳಗಾವಿಯಲ್ಲಿ ತಂದಿಲ್ಲ. ನಾವು ಸಾಕಷ್ಟು ಒತ್ತಾಯ ಮಾಡುತ್ತೇವೆ. ಮುಖ್ಯಮಂತ್ರಿ ಬೊಮ್ಮಾಯಿ ಅವರು ಮಹಾರಾಷ್ಟ್ರ ದ ಜತ್ತ ಜನರ ಬಗ್ಗೆ ಹೇಳಿರುವದು ಇದು ಹೃದಯದಿಂದ ಮಾತು ಆಗಿರಬೇಕು ಹೊರತು, ನಾಲಿಗೆಯಿಂದ ಅಲ್ಲ ಎಂದು ನುಡಿದರು.
ಗಡಿ ವಿಷಯ ವಿಚಾರಣೆ ನಡೆಯಲಿದೆ. ನಮ್ಮ ಸರಕಾರ ಯಾವದೇ ಮಾಹಿತಿ ಸಲ್ಲಿಸಿಲ್ಲ ಅನ್ನೊವ ಭಯ ಇದೆ. ಆದರು ಕರ್ನಾಟಕ ಕ್ಕೆ ನ್ಯಾಯ ಸಿಗುವ ವಿಸ್ವಾಸ ಇದೆ ಎಂದು ಹೇಳಿದರು.
ಕರ್ನಾಟಕದ ಸಿಎಂ ಬಸವರಾಜ ಬೊಮ್ಮಾಯಿ ಅವರ ಜತ್ತ ತಾಲೂಕಿನ ಜನರ ಬಗ್ಗೆ ತಾಳಿರುವ ನಿರ್ಧಾರನ್ನು ಸ್ವಾಗತಿಸುತ್ತೇವೆ. ಕರ್ನಾಟಕದ ರಾಜ್ಯದ ಏಕೀಕರಣದ ಬಳಿಕ ಈ ಹೇಳಿಕೆ ಪ್ರಥಮವಾಗಿದೆ ಈ ಹಿನ್ನೆಲೆಯಲ್ಲಿ ಅವರನ್ನು ನಾವು ಅಭಿಬಂಧಿಸುತ್ತೇವೆ ಎಂದು ನುಡಿದರು.