ಬಿಜೆಪಿ ಗೆಲವು ಶತಸಿದ್ದ : ಫಲಿತಾಂಶ ಬಳಿಕ ಕಾಂಗ್ರೆಸ್ ಮುಖಂಡರು ಮಾಯವಾಗಲಿದ್ದಾರೆ : ಸಚಿವ ಕಾರಜೋಳ ಭವಿಷ್ಯ

ಬಿಜೆಪಿ ಗೆಲವು ಶತಸಿದ್ದ : ಫಲಿತಾಂಶ ಬಳಿಕ ಕಾಂಗ್ರೆಸ್ ಮುಖಂಡರು ಮಾಯವಾಗಲಿದ್ದಾರೆ : ಸಚಿವ ಕಾರಜೋಳ ಭವಿಷ್ಯ

ಬೆಳಗಾವಿ, ಡಿ, 5: ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ತಮ್ಮ ಅಭ್ಯರ್ಥಿ ಗೆಲ್ಲಿಸಲು ತಿಣುಕಾಡುತ್ತಿದ್ದಾರೆ. ಬಿಜೆಪಿ ಪಕ್ಷವು ಈ ಚುನಾವಣೆಯಲ್ಲಿ ಗೆದ್ದೆ ಗೆಲ್ಲುತ್ತೆ ಎನ್ನುವ ವಿಶ್ವಾಸ ಇದೆ. ಫಲಿತಾಂಶ ಬಳಿಕ ಕಾಂಗ್ರೆಸ್ ಮುಖಂಡರು ಕಾಣದಂತೆ ಮಾಯವಾಗಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಇಂದಿಲ್ಲಿ ಹೇಳಿದರು. 

    ನಗರದ ಖಾಸಗಿ ಹೊಟೇಲನಲ್ಲಿ ರವಿವಾರ ಬೆಳಿಗ್ಗೆ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 8700 ಮತದಾರರಿದ್ದಾರೆ. ಅದರಲ್ಲಿ 5150 ಬಿಜೆಪಿ ಪಕ್ಷದಿಂದ ಆಯ್ಕೆಯಾದ ಪೈಲ್ವಾನರಿದ್ದಾರೆ. ಬಿಜೆಪಿಯಲ್ಲಿ ಒಬ್ಬರೆ ಕುಸ್ತಿ ಪೈಲ್ವಾನರಲ್ಲ. ಸ್ಥಳಿಯ ಸಂಸ್ಥೆಗೆ ಆಯ್ಕೆಯಾದ 5150 ಸದಸ್ಯರು ಕೂಡಾ ಪೈಲ್ವಾನ್ ರಿದ್ದಾರೆ ಎಂದು ವ್ಯಂಗ್ಯವಾಡಿದರು. 

 ಜಿಲ್ಲೆಯಲ್ಲಿ 13 ಜನ ಶಾಸಕರು, ಮೂವರು ಸಂಸದರು ಇದ್ದಾರೆ. ಅವರೆಲ್ಲರು ಒಗ್ಗಟಾಗಿ ಮಹಾಂತೇಶ ಕವಟಗಿಮಠ ಅವರನ್ನು ಆಯ್ಕೆ ಮಾಡುತ್ತಾರೆ ಎನ್ನುವ ನೂರಕ್ಕೆ ನೂರರಷ್ಟು ವಿಶ್ವಾಸ ನನಗಿದೆ ಎಂದು ನುಡಿದರು. 

  ಬಿಜೆಪಿ ಅಭ್ಯರ್ಥಿ ಎಲ್ಲರ ಜೊತೆ ಸೇರಿ ಎರಡು ಬಾರಿ ಕೆಲಸ ಮಾಡಿರುವ ಅನುಭವ ಇದೆ. ನಮ್ಮ ಬಿಜೆಪಿ ಸರಕಾರ ಬಡವರ ಹಾಗೂ ರೈತರಪರವಾಗಿ ಕೆಲಸ ಮಾಡುತ್ತಿದೆ. ಅಭಿವೃದ್ಧಿ ಯಲ್ಲೂ ಕೂಡಾ ನಾವು ಮುಂದೆ ಇದ್ದೇವೆ. ಜಿಲ್ಲೆಯಲ್ಲಿ ಮಳೆಯಿಂದ ಆದ ಬೆಳೆ, ಆಸ್ತಿಪಾಸ್ತಿ ಹಾನಿಗಳಿಗೆ ಈಗಾಗಲೆ ನಾವು ಪರಿಹಾರ ನೀಡಿದ್ದೇವೆ. ಇನ್ನು ಕೆಲವು ಉಳಿದಿರಬಹುದು ಅವರುಗು ಪರಿಹಾರ ನೀಡುವ ಕಾರ್ಯ ಸರಕಾರ ನಾಡುತ್ತದೆ ಎಂದು ತಿಳಿಸಿದರು. 

   ಬೆಳಗಾವಿ ಕಡೆಗೆ ಗೋವಿಂದ ಕಾರಜೋಳ ಅವರ ಆಸಕ್ತಿ ಕಡಿಮೆ ಆಗಿದೆ ಎನ್ನುವ ಕಾಂಗ್ರೆಸ್ ನವರ ಆರೋಪದ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕಾರಜೋಳ ಅವರು, ಬೆಳಗಾವಿ ಮಹಾನಗರ ಪಾಲಿಕೆ ಫಲಿತಾಂಶ ಬಳಿಕ ಕಾಂಗ್ರೆಸ್ ನವರು ನನ್ನ ಬಗ್ಗೆ ಜಪ ಮಾಡುತ್ತಿದ್ದಾರೆ. ನನಗೆ ಬೆಳಗಾವಿ ಆಸಕ್ತಿ ಕಡಿಮೆ ಇಲ್ಲ, ಹೆಚ್ವು ಇದೆ. ನನ್ನ ಆರೋಗ್ಯ ಸಮಸ್ಯೆ ಯಿಂದ ನಾನು ಸ್ವಲ್ಪ ಇತ್ತ ಬರಲು ಆಗಲಿಲ್ಲ ಎಂದು ತಿಳಿಸಿದರು.

  ಬಿಜೆಪಿಯಲ್ಲಿ ಪಕ್ಷೇತರ ಅಭ್ಯರ್ಥಿ ಪರವಾಗಿ ಕೆಲವರು ಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿಯಲ್ಲು ಗೊಂದಲ ಉಂಟಾಗಿದೆ ಎಂದು ಕೆಲ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಹಾಗೆನು ಇಲ್ಲ. ನಮ್ಮ ಪಕ್ಷದ ಅಭ್ಯರ್ಥಿ ಕವಟಗಿಮಠ ಅವರಿಗೆ ಪ್ರಥಮ ಪ್ರಾಶಸ್ತ್ಯ ಮತ ನೀಡಿದರೆ ಆಯಿತು. ಪಕ್ಷದಲ್ಲಿ ಯಾವ ಗೊಂದಲ ಇಲ್ಲ ನಾವೆಲ್ಲರು ಒಟ್ಟಾಗಿ ಇದ್ದೇವೆ ಎಂದು ತಿಳಿಸಿದರು.

  ಅದರಂತೆ ಬೆಳಗಾವಿಯಲ್ಲೇ ಚಳಿಗಾಲ  ಅಧಿವೇಶನ ನಡೆಯಲಿದೆ. ಸ್ಥಳಾಂತರ ಬಗ್ಗೆ ಸಂಶಯ ಬೇಡ. ಈಗಾಗಲೆ ನಮ್ಮ ಎಲ್ಲ ಅಧಿಕಾರಿಗಳು ತಯಾರಿ ಮಾಡಿಕೊಂಡಿದ್ದಾರೆ. ಎಲ್ಲರು ಸೇರಿ ಅಧಿವೇನ ನಡೆಯಲು ಶ್ರಮಿಸೋನ ಎಂದು ನುಡಿದರು.

  ಜಾತಿ ರಾಜಕಾರಣ ಮಾಡುವದು ನಮ್ಮ ಕಲ್ಚರ್ ಅಲ್ಲ. ಅದು ಕಾಂಗ್ರೆಸ್ ಕಲ್ಚರ್ ಆಗಿದೆ. ಕಳೆದ 65 ವರ್ಷಗಳಿಂದ ದೇಶದಲ್ಲಿ ಖಿಚಡಿ ಸರಕಾರ ಇತ್ತು ಅದು ದೀನದಲಿತರ ಹಾಗೂ ಅಲ್ಪ ಸಂಖ್ಯಾತರರನ್ನು ಮತ ಬ್ಯಾಂಕ್‌ಅನ್ನಾಗಿ ಮಾಡಿಕೊಂಡಿತ್ತು ಆದರೆ ಇವಾಗ ಕಾಂಗ್ರೆಸ್ ಜಾತಿ ರಾಜಕಾರಣ ದಲಿತರು ಅರಿತಿದ್ದಾರೆ. ಆದರೆ ಕೆಲ ಅಲ್ಪಸಂಖ್ಯಾತ ರು ಮಾತ್ರ ಅಲ್ಲಿ ಉಳಿದಿದ್ದಾರೆ. ಅವರನ್ನು ನಾವು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತೇವೆ ಎಂದು ನುಡಿದರು.  

  ಈಗಾಗಲೆ ದೇಶದಲ್ಲಿ ಕಾಂಗ್ರೆಸ್ ಮುಕ್ತ ಭಾರತವಾಗಿದೆ. ಕೆಲವು ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್ ಉಳಿದುಕೊಂಡಿದೆ. ಅಲ್ಲು ಕೂಡಾ ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಮುಕ್ತವಾಗಲಿದೆ ಎಂದು ನುಡಿದರು.

  ಇನ್ನು ಈ ಹಿಂದೆ ಕೊರೊನಾ ಸೋಂಕು ಹರಡಿದಾಗ ಆಸ್ಪತ್ರೆಗೆ ಗಳಲ್ಲಿ ಸರಿಯಾದ ವ್ಯವಸ್ಥೆ ಇದ್ದಿರಲಿಲ್ಲ. ಇವಾಗ ಸರಕಾರ ಎಲ್ಲ ವ್ಯವಸ್ಥೆ ಗಳನ್ನು ಮಾಡಿಕೊಂಡಿದೆ. ಯಾರು ಹೆದರುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.

     ಇದೇ ವೇಳೆ ಪರಿಷತ್ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಅವರು ಮಾತನಾಡಿ, ಗ್ರಾ. ಪಂಗಳಿಗೆ ಹೆಚ್ಚಿನ ಅನುದಾನ ತರುವಲ್ಲಿ ಕಾರ್ಯ ಮಾಡಿದ್ದೇನೆ. ಅಲ್ಲದೆ ಗ್ರಾ.ಪಂ ಸದಸ್ಯರ ಗೌರವ ಧನ ಹೆಚ್ಚಿಸುವತ್ತ ಕಾರ್ಯ ಪೃವತನಾಗಿದ್ದೇನೆ ಎಂದು ನುಡಿದರು.

 ಪತ್ರಿಕಾಗೋಷ್ಠಿಯಲ್ಲಿ ಸಂಸದೆ ಮಂಗಳಾ ಅಂಗಡಿ, ಶಾಸಕ ಅನಿಲ ಬೆನಕೆ, ರಾಜ್ಯ ವಕ್ತಾರ ಎಮ್.ಬಿ.ಝಿರಲಿ, ಮಾಜಿ ಶಾಸಕ ಸಂಜಯ ಪಾಟೀಲ, ಶಶಿ ಪಾಟೀಲ, ರಾಜೇಶ ನೆರಲಿ ಬಸವರಾಜ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಸುದ್ದಿ ಓದಿ