ಲವ್ ಜಿಹಾದ್‌ ಪ್ರೇರೆಪಿಸುವರ ಕೈ ಕತ್ತರಿಸಲು ಸಿದ್ಧರಾಗಬೇಕಿದೆ : ಮುಸ್ಲಿಮರ ಕ್ರೂರ ಸಂಸ್ಕೃತಿ ಕೊನೆಗೆ ಶಸ್ತ್ರ ಸಜ್ಜಿತರಾಗೋನ : ವಿವಾದಾತ್ಮಕ ಹೇಳಿಕೆ ನೀಡಿದ ವೇರ್ಣೇಕರ್

ಲವ್ ಜಿಹಾದ್‌ ಪ್ರೇರೆಪಿಸುವರ ಕೈ ಕತ್ತರಿಸಲು ಸಿದ್ಧರಾಗಬೇಕಿದೆ : ಮುಸ್ಲಿಮರ ಕ್ರೂರ ಸಂಸ್ಕೃತಿ ಕೊನೆಗೆ ಶಸ್ತ್ರ ಸಜ್ಜಿತರಾಗೋನ : ವಿವಾದಾತ್ಮಕ ಹೇಳಿಕೆ ನೀಡಿದ ವೇರ್ಣೇಕರ್

ಬೆಳಗಾವಿ, ಡಿ, 26 : ಲವ್ ಜಿಹಾದ್‌ಗೆ ಪ್ರೇರೆಪಿಸುವರ ಕೈ ಕತ್ತರಿಸಲು ನಾವು ಸಿದ್ಧರಾಗಬೇಕಿದೆ. ಇಂತಹ ಸಂಸ್ಕೃತಿ ಕೊನೆಗಾಣಿಸಲು ನಾವು ಶಸ್ತ್ರ ಸಜ್ಜಿತರಾಗೋದು ಅವಶ್ಯಕವಿದೆ. ನಾವು ಮನೆಯಿಂದ ಹೊರಹೋಗುವಾಗ ನಮ್ಮ ಬಳಿ ಶಸ್ತ್ರ ಇರೋದು ಅವಶ್ಯಕತೆ ಇದೆ ಎಂದು ಧರ್ಮ ಜಾಗರಣ ಉತ್ತರ ಪ್ರಾಂತ ಸಂಯೋಜಕ ದಿಲೀಪ್ ವೇರ್ಣೇಕರ್ ಬೆಳಗಾವಿಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

     ಬೆಳಗಾವಿ ತಾಲೂಕಿನ ನಾವಗೆ ಗ್ರಾಮದ ಗಣೇಶ ಭಾಗದಲ್ಲಿ ಧನಂಜಯ ಜಾಧವ ಅವರು ಏರ್ಪಡಿಸಿದ್ದ ಹಿಂದೂ ಸ್ನೇಹಭೋಜನ ಕಾರ್ಯಕ್ರಮದಲ್ಲಿ ಭಾಷಣ ಮಾಡಿರುವ ವೇರ್ಣೇಕರ್ ಅವರು, ಶಿವಾಜಿ ಮಹಾರಾಜರ ಮೇಲೆ ಆಕ್ರಮಣಕ್ಕೆ ತೆರಳಿದ್ದ ಅಫ್ಜಲ್ ಖಾನ್‌ಗೆ 64 ಜನ ಹೆಂಡಂದಿರಿದ್ದರು. ಆ 64 ಪತ್ನಿಯರನ್ನು ಕೊಂದು ಶಿವಾಜಿ ಮಹಾರಾಜರ ಮೇಲೆ ದಾಳಿಗೆ ಬಂದಿದ್ದ. ಇದು ಮುಸಲ್ಮಾನ ಸಂಸ್ಕೃತಿ ಇದೆ. ಇಂತಹ ಸಂಸ್ಕೃತಿ ಕೊನೆಗಾಣಿಸಲು ಶಸ್ತ್ರ ಸಜ್ಜಿತರಾಗೋದು ಅವಶ್ಯಕವಿದೆ. ನಾವು ಮನೆಯಿಂದ ಹೊರಹೋಗುವಾಗ ನಮ್ಮ ಬಳಿ ಶಸ್ತ್ರ ಇರೋದು ಅವಶ್ಯಕತೆ ಇದೆ ಎಂದು ಹೇಳಿದ್ದಾರೆ.

   ಲವ್ ಜಿಹಾದ್‌ಗೆ ಪ್ರೇರೆಪಿಸುವರ ಕೈ ಕತ್ತರಿಸಲು ನಾವು ಸಿದ್ಧರಾಗಬೇಕಿದೆ. ಹಿಂದೂಗಳನ್ನು ಮುಸಲ್ಮಾನರನ್ನಾಗಿ ಪರಿವರ್ತಿಸಲು ಬಂದ್ರೆ ಅವರನ್ನು ಹೊಡೆಯುವ ಹಿಂದುತ್ವ ನಿಷ್ಠ ವ್ಯಕ್ತಿಗಳ ಅವಶ್ಯವಿದೆ. ಪಂಜಾಬ್‌ನ ಗುರುಗೋವಿಂದ ಸಿಂಗ್ ಪುತ್ರರನ್ನು ಮುಸಲ್ಮಾನ ಮಾಡಲು ಪ್ರಯತ್ನ ಪಟ್ಟರು.ಆದರೆ ಮುಸಲ್ಮಾನ ಮಾಡಲಾಗಲಿಲ್ಲ. ಆ ಇಬ್ಬರು ಬಾಲಕರ ಜೀವಂತ ಸಮಾಧಿ ಮಾಡಿದ್ರು. ಕ್ರೂರ ಮುಸಲ್ಮಾನರ ಚರಿತ್ರೆಯನ್ನು ನಾವು ನೋಡಿದ್ದೇವೆ ಎಂದು ಮುಸ್ಲಿಮರ ವಿರುದ್ದ ಕಿಡಿ ಕಾರಿದರು.

     ಮುಸಲ್ಮಾನರು, ಕ್ರೈಸ್ತರು ಯಾವಾಗಲೂ ಭಾರತವನ್ನು ಪ್ರೀತಿಸಲ್ಲ. ಭಾರತವನ್ನು ದ್ವೇಷ ಮಾಡುವ ವ್ಯಕ್ತಿಗಳು ಅವರು. ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಹಿಂದೂಗಳ ಮೇಲೆ ಅತ್ಯಾಚಾರ ನಡೆದಿದೆ. ಅನೇಕ ಸಾಧು ಸಂತರು ಹಿಂದೂ ರಾಷ್ಟ್ರ ಉಳಿಸಿದ್ದಾರೆ. ವಿಜಯ ನಗರ ಸಾಮ್ರಾಜ್ಯದ ಹಕ್ಕ ಬುಕ್ಕ ಇಬ್ಬರು ಮುಸಲ್ಮಾನರಾಗಿದ್ದರು. ವಿದ್ಯಾರಣ್ಯ ಮಹರ್ಷಿಗಳು ಅವರನ್ನು ಹಿಂದೂ ಮಾಡಿ ಅವರ ಮುಖಾಂತರ ವಿಜಯ ನಗರ ಸ್ಥಾಪನೆ ಮಾಡ್ತಾರೆ. ಸ್ವಾಮಿ ಶ್ರದ್ಧಾನಂದ ಮಹಾತ್ಮ ಗಾಂಧಿ ಜೊತೆ ಕೆಲಸ ಮಾಡುತ್ತಿದ್ದರು. 1925ರಲ್ಲಿ 1 ಲಕ್ಷ 82 ಸಾವಿರ ಮುಸಲ್ಮಾನರನ್ನು ಹಿಂದೂ ಮಾಡ್ತಾರೆ. ಒಬ್ಬ ಮುಸಲ್ಮಾನ ಅವನನ್ನು ಕೊಲೆ ಮಾಡ್ತಾನೆ. ಆಗ ಮಹಾತ್ಮ ಗಾಂಧಿ ಹೇಳ್ತಾರೆ ಆ ಕೊಲೆ ಮಾಡಿದವನದ್ದು ತಪ್ಪಲ್ಲ. ಅವನ ಕೊಲೆ ಮಾಡಿ ಅಂತಾ ಪ್ರೇರೇಪಿಸಿದ ವ್ಯಕ್ತಿಗಳು ತಪ್ಪು ಎಂದು ಹೇಳಿರುತ್ತಾರೆ. ಇಂತಹ ಮೂರ್ಖತನದಿಂದ ಹಿಂದೂ ಇವತ್ತು ದುರ್ಬಲ ಆಗಲು ಕಾರಣವಾಗಿ ಎಂದಿದ್ದಾರೆ.

       ಡಾ. ಹೆಗ್ಗಡೆವಾರ 1926ರಲ್ಲಿ ಆರ್‌ಎಸ್ಎಸ್ ಸ್ಥಾಪನೆ ಮಾಡ್ತಾರೆ. 1927ರಲ್ಲಿ ನಾಗ್ಪುರದಲ್ಲಿ ಮುಸಲ್ಮಾನರು ದಂಗೆ ಮಾಡಿದಾಗ 127 ಆರ್‌ಎಸ್ಎಸ್ ಕಾರ್ಯಕರ್ತರು ಅವರನ್ನು ಓಡಿಸಿದರು. 1927ರ ಬಳಿಕ ಈವರೆಗೂ ನಾಗಪುರದಲ್ಲಿ ಮುಸಲ್ಮಾನ ದಂಗೆಯಾಗಿಲ್ಲ. ಬಾಯಿ ಮಾತಿನಿಂದ ಬಗ್ಗುವ ವ್ಯಕ್ತಿಗಳು ಅವರಲ್ಲ.ನಮ್ಮ ಸಮಾಜದ ಅನೇಕರು ಇಂದು ಕ್ರೈಸ್ತರಾಗುತ್ತಿದ್ದಾರೆ, ನಿಮಗೆ ಯೇಸು ಕಾಪಾಡ್ತಾನೆ ಅಂತಾ ಹೇಳುತ್ತಾರೆ. ಕೊರೊನಾ ಸಂದರ್ಭದಲ್ಲಿ ಅತಿ ಹೆಚ್ಚು ಮೃತಪಟ್ಟವರು ಕ್ರೈಸ್ತರು. ಆಗ ಯೇಸು ಏಕೆ ಕಾಪಾಡಲಿಲ್ಲ? ಜನರ ಮೂರ್ಖ ಮಾಡಿ ಭಾರತ ಕ್ರೈಸ್ತಮಯ,‌ ಮುಸ್ಲಿಂ ಮಯ ಮಾಡಲು ಪ್ರಯತ್ನ ಮಾಡಲಾಗಿದೆ.

    ಇವತ್ತು ದೇಶದಲ್ಲಿ ಮುಸಲ್ಮಾನರ ಬೆಳವಣಿಗೆ ಪ್ರಮಾಣ 39 ಪರ್ಸೆಂಟ್ ಇದೆ. ಕ್ರೈಸ್ತರ ಬೆಳವಣಿಗೆ ಪ್ರಮಾಣ 29 ಪರ್ಸೆಂಟ್ ಇದೆ. ಆದರೆ ಹಿಂದೂಗಳ ಬೆಳವಣಿಗೆ ಪ್ರಮಾಣ ಕೇವಲ 20 ಪರ್ಸೆಂಟ್ ಇದೆ. ಇದೇ ಪರಿಸ್ಥಿತಿ 50 ವರ್ಷ ಮುಂದುವರಿದ್ರೆ ಹಿಂದೂ ಅಲ್ಪಸಂಖ್ಯಾತ ರಾಷ್ಟ್ರವಾಗುತ್ತೆ. ನಾವ್ಯಾರು ಕುಟುಂಬ ಯೋಜನೆ ಮಾಡುವ ಅವಶ್ಯಕತೆ ಇಲ್ಲ. ಕನಿಷ್ಠ ಮೂರು, ನಾಲ್ಕು, ಐದು ಮಕ್ಕಳನ್ನು ಹಡೆಯುವಂತಹ ಪ್ರಯತ್ನ ಮಾಡೋಣ ಆಗ ಭಾರತ ಉಳಿಯುತ್ತೆ. ಭಾರತ ಹಿಂದೂ ರಾಷ್ಟ್ರ ಮಾಡಲು ಮತಾಂತರ ಮಾಡುವವರ ಘರ್ ವಾಪ್ಸಿ ಅಗತ್ಯವಾಗಿದೆ. ಪ್ರತಿ ವರ್ಷ ಭಾರತದಲ್ಲಿ ಐದು ಲಕ್ಷ ಜನ ಮತಾಂತರ ಆಗ್ತಿದ್ದಾರೆ. ಧರ್ಮ ಜಾಗರಣ ಕಾರ್ಯದಿಂದ ವಾಪಸ್ ತರುವ ಕಾರ್ಯ ಆಗ್ತಿದೆ. ಕೇರಳದಲ್ಲಿ 54 ಪರ್ಸೆಂಟ್ ಕ್ರೈಸ್ತ ಮುಸಲ್ಮಾನರಿದ್ದಾರೆ ಹೀಗಾಗಿ ಹಿಂದೂ ಪರ ಸರ್ಕಾರ ಬರ್ತಿಲ್ಲ. ಮತಾಂತರ ಅಂದ್ರೆ ಕೇವಲ ಪೂಜಾ ಪದ್ಧತಿಯಲ್ಲಿ ಆಗುವ ಬದಲಾವಣೆ ಅಲ್ಲ. ದೇಶದ ನಿಷ್ಠೆ ಬದಲಾವಣೆ ಮಾಡುವ ಕೆಲಸವಾಗಬೇಕಿದೆ. ಭಾರತ ಶ್ರೀಮಂತ ರಾಷ್ಟ್ರ ಮಾಡಲು ಸ್ವದೇಶಿ ಉತ್ಪನ್ನ ಬಳಸಿ ಎಂದು ದಿಲೀಪ್ ವೇರ್ಣೇಕರ್ ತಿಳಿಸಿದರು.



ಸುದ್ದಿ ಓದಿ