ಬೆಳಗಾವಿಯ ಸಿಂದೂಳಿ ಗ್ರಾಮದಲ್ಲಿ ಜೋಡಿ ಕೊಲೆ : ಕ್ಷುಲ್ಲಕ ಕಾರಣ ಹಿನ್ನೆಲೆ ಹೊಡೆದಾಟ
ಬೆಳಗಾವಿ : ಕ್ಷುಲ್ಲಕ ವಿಷಯವಾಗಿ ತಾಲೂಕಿನ ಸಿಂದೂಳಿ ಗ್ರಾಮದಲ್ಲಿ ಜೋಡಿ (ಇಬ್ಬರ) ಹತ್ತೆ ನಡೆದಿರುವದು ವರದಿಯಾಗಿದೆ.
ಮೊದಲು ಇಬ್ಬರು ಮೇಲೆ ಮಾರಣಾಂತಿಕ ಹಲ್ಲೆ ನಡೆದ ಹಿನ್ನೆಲೆಯಲ್ಲಿ ಇಬ್ಬರನ್ನು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆ ಗಾಗಿ ರವಾನಿಸಲಾಗಿತ್ತು. ಆದರೆ ಇಬ್ಬರಲ್ಲಿ ಒಬ್ಬರು ಸ್ಥಳದಲ್ಲಿ ಮೃತಪಟ್ಟರು, ಇನ್ನೊಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿರುವದಾಗಿ ತಿಳಿದು ಬಂದಿದೆ. ಈ ಜೊಡಿ ಕೊಲೆಗೆ ನಿಖರವಾದ ಕಾರಣ ಮಾತ್ರ ತಿಳಿದು ಬಂದಿಲ್ಲ. ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಸಿಂದೂಳಿ ಗ್ರಾಮದಲ್ಲಿ ರವಿವಾರ ತಡ ರಾತ್ರಿ ಈ ಜೊಡಿ ಕೊಲೆ ನಡೆದಿದೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಡಿಸಿಪಿ ರವೀಂದ್ರ ಗಡಾದಿ ಸೇರಿದಂತೆ ಮಾರಿಹಾಳ ಪಿಐ ಬಸ್ಸಾಪೂರೆ ಮತ್ತು ಸಿಬ್ಬಂದಿಗಳು ದೌಡಾಯಿಸಿದ್ದು, ಈ ಕುರಿತು ತನಿಖೆ ಕೈಗೊಂಡಿದ್ದಾರೆ. ಈ ಕೊಲೆಗೆ ನಿಖರವಾದ ಕಾರಣ ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ.