ಬೆಳಗಾವಿಯಲ್ಲಿ ಲಕ್ಷಾಂತರ ಲೀಟರ್ ನೀರು ಪೊಲು, ತಲೆ ಕೆಡಿಸಿಕೊಳ್ಳದ ಅಧಿಕಾರಿಗಳಿಗೆ ನಾಗರಿಕರ ಹಿಡಿಶಾಪ
ಸತತ 2 ಗಂಟೆ ರಸ್ತೆ, ಚರಂಡಿಗೆ ಹರಿದ ಕುಡಿಯುವ ನೀರು : ಒಂದು ಕಡೆ ಕುಡಿಯುವ ನೀರಿನ ಭವಣೆ, ಇನ್ನೊಂದು ಕಡೆ ನೀರು ಪೊಲು
ಪಾರೇಶ ಭೋಸಲೆ
ಬೆಳಗಾವಿ, ಏ, 4 : ನಗರದಲ್ಲಿ ಒಂದೇಡೆ ಕೆಲವು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆಯಿಂದ ಬೆಳಗಾವಿ ಕೆಲ ಭಾಗದ ನಾಗರಿಕರು ಬೀದಿಗೀಳಿದು ಪ್ರತಿಭಟನೆ ನಡೆಸಿದ್ದಾರೆ. ನಗರದಲ್ಲಿ ಕುಡಿಯುವ ನೀರಿನ ಪೈಪ್‍ಲೈನ್ ಒಡೆದು ಲಕ್ಷಾಂತರ ಲೀಟರ ನೀರು ಪೋಲಾಗುತ್ತಿದ್ದರೂ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ತಮಗೂ ಇದಕ್ಕು ಸಂಬಂಧ ಇಲ್ಲದಂತೆ ಕುಂಬಕರ್ಣ ನಿದ್ದೆಗೆ ಜಾರಿರುವದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಹೌದು ಓದುಗರೆ ಬೇಸಿಗೆಯ ದಿನಗಳು ಆರಂಭವಾಗುವ ಪ್ರಥಮ ಹಂತದಲ್ಲಿ ಬೆಳಗಾವಿ ನಗರದಲ್ಲಿ ಕುಡಿಯುವ ನೀರಿನ ಭವಣೆ ಎದುರಾಗಿದ್ದು ಒಂದು ಕಡೆಯಾದರೆ ಇನ್ನೋಂದು ಕಡೆಯಲ್ಲಿ ಪೈಪ್ ಲೈನ್ ಒಡೆದು ಲಕ್ಷಾಂತರ ನೀರು ಒಂದು ಗಂಟೆಯ ವರೆಗೆ ಹರಿದು ಹೋಗಿ ಕೆಲಹೊತ್ತು ರಸ್ತೆ ಮೇಲೆ ಸಂಚಾರ ಉಂಟಾಗಿ ಚರಂಡಿಗಳು ತುಂಬಿ ಹರಿಯುತ್ತಿದ್ದ ಘಟನೆ ಬೆಳಗಾವಿ ಸದಾಶಿವ ನಗರದಲ್ಲಿ ಸೋಮವಾರ ಸಂಜೆ ಕಂಡು ಬಂದಿದೆ.

ಸದಾಶಿವ ನಗರದ ಮುಖಾಂತರ ಸಂಸದೆ ಮಂಗಲಾ ಅಂಗಡಿ ಅವರ ಮನೆಗೆ ಹಾದು ಹೋಗುವ ಮುಖ್ಯ ರಸ್ತೆಯಲ್ಲಿ ಸೋಮವಾರ ಸಂಜೆ ಕುಡಿಯುವ ನೀರಿನ ಪೈಪ್ ಲೈನ್ ಒಡೆದು ಸುಮಾರು 2 ತಾಸಿನ ವರೆಗೆ ನೀರು ರಸ್ತೆ ತುಂಬೇಲ್ಲ ಹರಿದು ಪೋರಾಗುತ್ತಿದ್ದರೂ ಇತ್ತ ಕಡೆಗೆ ಇದಕ್ಕೆ ಸಂಬಂಧಪಟ್ಟ ಯಾವದೇ ಅಧಿಕಾರಿಗಳಾಗಲಿ ಅಥವಾ ಜನಪ್ರತಿನಿಧಿಗಳಾಗಲಿ ತಿರುಗಿ ನೋಡಲಿಲ್ಲ.

ಈ ಬಗ್ಗೆ ಕೆಲವು ಅಧಿಕಾರಿಗಳಿಗೆ ಕೆಲವು ನಾಗರಿಕರು ದೂರವಾಣಿ ಕರೆ ಮಾಡಿದರು ಕೆಲ ಅಧಿಕಾರಿಗಳಂತು ಕರೆ ಸ್ವೀಕರಿಸಲಿಲ್ಲ. ಇದರಿಂದ ಈ ರಸ್ತೆಯಲ್ಲಿ ಹಾದು ಹೋಗುತ್ತಿದ್ದ ಸಾರ್ವಜನಿಕರು ಹಾಗೂ ಸ್ಥಳೀಯರು ಅಧಿಕಾರಿಗಳಿಗೆ ಹಿಡಿಶಾಪ ಹಾಕಿದ ದೃಶ್ಯ ಕಂಡು ಬಂತು.