ಕರಾಳ ದಿನಕ್ಕಾಗಿ ಕೊಲ್ಲಾಪುರದಿಂದ ಬೆಳಗಾವಿಗೆ ಆಗಮಿಸುವ ಝಾಪಾಗಳ ಬೇಟೆಗೆ ಸಿದ್ದರಾದ ಬೆಳಗಾವಿ ಪೊಲೀಸರು : ಗಡಿಯಲ್ಲಿ ಇವತ್ತಿನಿಂದಲೇ ಕಟ್ಟೆಚ್ಚರ

ಕರಾಳ ದಿನಕ್ಕಾಗಿ ಕೊಲ್ಲಾಪುರದಿಂದ ಬೆಳಗಾವಿಗೆ ಆಗಮಿಸುವ ಝಾಪಾಗಳ ಬೇಟೆಗೆ ಸಿದ್ದರಾದ ಬೆಳಗಾವಿ ಪೊಲೀಸರು : ಗಡಿಯಲ್ಲಿ ಇವತ್ತಿನಿಂದಲೇ ಕಟ್ಟೆಚ್ಚರ

ಬೆಳಗಾವಿ, ಅ, 31 : ಗಡಿ ಕನ್ನಡಿಗರು ಬೆಳಗಾವಿಯಲ್ಲಿ ಅದ್ದೂರಿಯಾಗಿ ಆಚರಿಸುವ ಕನ್ನಡ ಹಬ್ಬದ (ರಾಜ್ಯೋತ್ಸವ) ವಿರುದ್ದವಾಗಿ ಎಮ್ ಇಎಸ್ ನಡೆಸುವ ಕರಾಳ ದಿನಕ್ಕೆ ಮಹಾರಾಷ್ಟ್ರದಿಂದ  ಆಗಮಿಸುವ ಝಾಪಗಳನ್ನು ಸೆದೆಬಡಿಯಲು ಬೆಳಗಾವಿ ಪೊಲೀಸರು ಸೋಮವಾರ ಬೆಳಗಿನಿಂದಲೆ ಕಾರ್ಯಗತವಾಗಿದ್ದು, ಬೆಳಗಾವಿಯ ಗಡಿಯಲ್ಲಿ ಮಹಾರಾಷ್ಟ್ರ ದಿಂದ ಆಗಮಿಸುವ ವಾಹನಗಳ ತಪಾಸಣೆ ನಡೆಸುತ್ತಿದ್ದಾರೆ. 


     ಬೆಳಗಾವಿಯಲ್ಲಿ ಈ ಬಾರಿ ಅದ್ದೂರಿಯ ಕನ್ನಡ ಹಬ್ಬ (ರಾಜ್ಯೋತ್ಸವ) ಆಚರಣೆ ಮಾಡುವ ತವಕದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡಿಗರು ಇದ್ದರೆ, ಅತ್ತ ಬೆಳಗಾವಿಯಲ್ಲಿ ತನ್ನ ಅಸ್ತಿತ್ವವನ್ನು ಕಳೆದುಕೊಂಡು ಹಲ್ಲು ಇಲ್ಲದ ಹಾವಿನಂತಾಗಿರುವ ನಾಡದ್ರೋಹಿ ಎಮ್ ಇಎಸ್ ರಾಜ್ಯೋತ್ಸವ ವಿರುದ್ದವಾಗಿ ಕರಾಳ ದಿನ ಆಚರಣೆಗೆ ಸಿದ್ದರಾಗುತ್ತಿದ್ದಾರೆ.  ಕೈಯಲಿ ಆಗದವ ಮೈಯಲ್ಲ ಪರಚಿಕೊಂಡತೆ ಈ ಕರಾಳ ದಿನಕ್ಕೆ ಮಹಾರಾಷ್ಟ್ರದಿಂದ ಶಿವಸೇನಾ ಮುಖಂಡರಿಗೆ ಆಹ್ವಾನ ನೀಡಿದ್ದಾರೆ. 

     ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ದಿಂದ ಆಗಮಿಸುವ ಝಾಪಾಗಳನ್ನು ಸೆದೆ ಬಡಿಯಲು ಬೆಳಗಾವಿಯ ಪೊಲೀಸರು ಸನ್ನದ್ದವಾಗಿದ್ದು, ಬೆಳಗಾವಿಯ ಗಡಿಯ ಸಿನ್ನೋಳಿ ಸೇರಿದಂತೆ ವಿವಿಧ ಮಾರ್ಗದಲ್ಲಿ ಮಹಾರಾಷ್ಟ್ರ ದಿಂದ ಆಗಮಿಸು ವಾಹನಗಳನ್ನು ತಡೆದು ತಪಾಸಣೆ ಮಾಡುವ ಮೂಲಕ ಕಟ್ಟೆಚ್ಚರ ವಹಿಸಿದ್ದಾರೆ.


ಸುದ್ದಿ ಓದಿ