ಕಿತವಾಡ ಡ್ಯಾಂನಲ್ಲಿ ಮುಳುಗಿ ಬೆಳಗಾವಿಯ ನಾಲ್ವರು ವಿದ್ಯಾರ್ಥಿಗಳ ದುರ್ಮರಣ : ಸೇಲ್ಪಿ ತಂದ ಆಪತ್ತು, ಪ್ರವಾಸಕ್ಕೆ ತೆರಳಿದ್ದ ವಿದ್ಯಾರ್ಥಿಗಳು ಕಾಲು ಜಾರಿ ನೀರು ಪಾಲು
ಬೆಳಗಾವಿ, ನ, 26 : ಪ್ರವಾಸಕ್ಕೆಂದು ಕಿತವಾಡ ಡ್ಯಾಂಗೆ ತೆರಳಿದ್ದ ಬೆಳಗಾವಿಯ ನಾಲ್ವರು ಯುವತಿಯರು ಕಾಲು ಜಾರಿ ನೀರಲಿ ಬಿದ್ದು ಮೃತಪಟ್ಟಿರುವ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.
ಗಡಿ ಭಾಗದ ಚಂದಗಡ ಬಳಿ ಇರುವ ಕಿತವಾಡಾ ಡ್ಯಾಂ ನೋಡಲು ಪ್ರವಾಸಕ್ಕೆ ಬೆಳಗಾವಿಯ ಕಾಲೇಜು ಒಂದರ ಸುಮಾರು 40 ವಿದ್ಯಾರ್ಥಿಗಳು ತೆರಳಿದ್ದರು ಎನ್ನಲಾಗಿದೆ. ಕಿತವಾಡ ಡ್ಯಾಂ ಮೇಲೆ ಈ ನಾಲ್ವರು ಯುವತಿಯರು ಕಾಲು ಜಾರಿ ನೀರಿನಲ್ಲಿ ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಮಹಾರಾಷ್ಟ್ರ ದ ಚಂದಗಡ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮೃತ ವಿದ್ಯಾರ್ಥಿಗಳ ಮೃತದೇಹಗಳನ್ನು ಬೆಳಗಾವಿ ಬಿಮ್ಸ ಆಸ್ಪತ್ರೆಗೆ ತರಲಾಗಿದೆ.