ಬೆಳಗಾವಿ ಜಿಲ್ಲಾ ಸಿಇಎನ್ ಪೊಲೀಸರ ಕಾರ್ಯಾಚರಣೆ : ನಿಡಗುಂದಿಯ ಜಮೀನಿನಲ್ಲಿ ಬೆಳೆದಿದ್ದ 45 ಕೆಜಿ ಗಾಂಜಾ ವಶಕ್ಕೆ

ಬೆಳಗಾವಿ ಜಿಲ್ಲಾ ಸಿಇಎನ್ ಪೊಲೀಸರ ಕಾರ್ಯಾಚರಣೆ : ನಿಡಗುಂದಿಯ ಜಮೀನಿನಲ್ಲಿ ಬೆಳೆದಿದ್ದ 45 ಕೆಜಿ ಗಾಂಜಾ ವಶಕ್ಕೆ

ಬೆಳಗಾವಿ, ಆ, 30 : ಅಕ್ರಮವಾಗಿ ತನ್ನ ಜಮೀನಿನಲ್ಲಿ ಬೆಳೆದಿದ್ದ ಗಾಂಜಾ ಬೆಳೆಯನ್ನು ಬೆಳಗಾವಿ ಜಿಲ್ಲಾ ಸಿಇಎನ್ ಅಪರಾಧ ಪೊಲೀಸ ಠಾಣೆಯ ಪೊಲೀಸರು ಜಿಲ್ಲೆಯ ರಾಯಬಾಗ ತಾಲೂಕಿನ ನಿಡಗುಂದಿ ಗ್ರಾಮದಲ್ಲಿ ಪತ್ತೆ ಮಾಡಿದ್ದು, ಈ ಪ್ರಕರಣಕ್ಕೆ ಸಂಬಂದಿಸಿದಂತೆ ಓರ್ವನನ್ನು ವಶಕ್ಕೆ ಪಡೆಯಲಾಗಿದೆ.
        ಬೆಳಗಾವಿ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ ಮತ್ತು ಹೆಚ್ಚುವರಿ ಪೆÇಲೀಸ್ ವರಿಷ್ಠಾಧಿಕಾರಿ ಮಹಾನಿಂಗ ನಂದಗಾಂವಿ ಅವರ ಮಾರ್ಗದರ್ಶನದಲ್ಲಿ ಬೆಳಗಾವಿ ಜಿಲ್ಲಾ ಸಿಇಎನ್ ಅಪರಾಧ ಪೆÇಲೀಸ್ ಠಾಣೆ ಪೆÇಲೀಸ್ ಇನ್ಸಪೆಕ್ಟರ ಬಿ.ಆರ್.ಗಡ್ಡೇಕರ್ ಅವರ ನೇತೃತ್ವದಲ್ಲಿ ಅಪರಾಧ ಠಾಣೆಯ ಪೊಲೀಸರು ರಾಯಭಾಗ ತಾಲೂಕಿನ ನಿಡಗುಂದಿ ಗ್ರಾಮದಲ್ಲಿ ದಾಳಿ ಮಾಡಿ ಒರ್ವ ಆರೋಪಿತನನ್ನು ಬಂದಿಸುವದರೊಂದಿಗೆ ಆತನ ಹೊಲದಲ್ಲಿ ಬೆಳೆದಿದ್ದ 45 ಕೆ.ಜಿ ಗಾಂಜಾವನ್ನು ಜಪ್ತಪಡಿಸಿಕೊಂಡಿದ್ದಾರೆ.
       ಈ ಕುರಿತು ಬೆಳಗಾವಿ ಜಿಲ್ಲಾ ಸಿಇಎನ್ ಅಪರಾಧ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿತನನ್ನು ನ್ಯಾಯಾಲಯಕ್ಕೆ ಹಾಜರಪಡಿಸಲಾಗಿದೆ. ಈ ಕುರಿತು ಪ್ರಕರಣ ತನಿಖೆಯಲ್ಲಿರುತ್ತದೆ. ಈ ಕಾರ್ಯಾಚರಣೆಯಲ್ಲಿ ಜಿಲ್ಲಾ ಸಿಇಎನ್ ಅಪರಾಧ ಪೆÇಲೀಸ್ ಠಾಣೆಯ ಎಎಸ್‍ಐ ಎ.ಎಚ್.ಭಜಂತ್ರಿ, ಮತ್ತು ಬಿ.ಎಸ್ ಚಿನ್ನಿಕುಪ್ಪಿ, ವೈ.ವಿ.ಸಪ್ತಸಾಗರ, ಎಂ.ಬಿ. ಕಾಂಬಳೆ, ಎಸ್.ಎ.ಬೇವನೂರ, ಎನ್.ಆರ್.ಘಡೆಪ್ಪನವರ ಇವರು ಭಾಗವಹಿಸಿದ್ದರು.

ಸುದ್ದಿ ಓದಿ