ಬೆಳಗಾವಿ ನಗರದ ಮನಗೆ ಲಗ್ಗೆ ಇಟ್ಟ ಚಿರತೆ : ಇಬ್ಬರ ಮೇಲೆ ದಾಳಿ : ಸ್ಥಳಕ್ಕೆ ಅರಣ್ಯ, ಪೊಲೀಸ್ ಅಧಿಕಾರಿಗಳ ದೌಡು

ಬೆಳಗಾವಿ ನಗರದ ಮನಗೆ ಲಗ್ಗೆ ಇಟ್ಟ ಚಿರತೆ : ಇಬ್ಬರ ಮೇಲೆ ದಾಳಿ : ಸ್ಥಳಕ್ಕೆ ಅರಣ್ಯ, ಪೊಲೀಸ್ ಅಧಿಕಾರಿಗಳ ದೌಡು

ಬೆಳಗಾವಿ, ಆ, 5 : ಚಿರತೆಯೊಂದು ಬೆಳಗಾವಿ ನಗರದ ಮನೆಯೊಂದಕ್ಕೆ ನುಗ್ಗಿ ಇಬ್ಬರು ಕಾರ್ಮಿಕರ ಮೇಲೆ ದಾಳಿ ಮಾಡಿರುವ ಘಟನೆ ಶುಕ್ರವಾರ ಸಂಭವಿಸಿದೆ.


    ಶುಕ್ರವಾರ ಮಧ್ಯಾಹ್ನ ದಿಡೀರನೆ ಬೆಳಗಾವಿಯ ಜಾಧವ ನಗರದಲ್ಲಿ ಚಿರತೆಯೊಂದು ಮನೆಗೆ ಲಗ್ಗೆ ಇಟ್ಟು ಇಬ್ಬರು ಕಾರ್ಮಿಕರ ಮೇಲೆ ದಾಳಿ ಮಾಡಿದೆ. ಈ ದಾಳಿಯಲ್ಲಿ ಇಬ್ಬರು ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದು ಚಿಕ್ಕಪುಟ್ಟ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ ಮತ್ತೆ ಬಿಡುಗಡೆ ಮಾಡಲಾಗಿದೆ.

   ಕಡಿನಿಂದ ನಾಡಿಗೆ ಬಂದ ಚಿರತೆ ದಾಳಿಯ ಸುದ್ದಿ ತಿಳಿದು ಸ್ಥಳಕ್ಕೆ ಅರಣ್ಯ ಹಾಗೂ ಪೊಲೀಸ ಅಧಿಕಾರಿಗಳು ಮತ್ತು ಅಗ್ನಿಶಾಮಕ ದಳದವರು  ದೌಡಾಯಿಸಿದ್ದು, ಚಿರತೆ ಸೆರೆ ಹಿಡಿಯವ ಕಾರ್ಯದಲ್ಲಿ ತೊಡಗಿದ್ದಾರೆ.

ಸುದ್ದಿ ಓದಿ