ಮಳೆಯಿಂದ ಹಾನಿಯಾದ ಮನೆಗೆ ಪರಿಹಾರ ನೀಡಲು 50 ಸಾವಿರ ಬೇಡಿಕೆ ಇಟ್ಟ ಗ್ರಾಪಂ ಉಪಾಧ್ಯಕ್ಷ : ನ್ಯಾಯ ಕೊಡಿಸುವಂತೆ ಜಿಲ್ಲಾಧಿಕಾರಿ ಮೊರೆ ಹೋದ ಬಡ ಗ್ರಾಮಸ್ಥ
ಬೆಳಗಾವಿ, ಅ, 13 : ಅತಿಯಾದ ಮಳೆಯ ಹಿನ್ನೆಲೆಯಲ್ಲಿ ಮನೆ ಕಳೆದುಕೊಂಡಿರುವ ಬಡ ವ್ಯಕ್ತಿಯೋರ್ವ ತನ್ನ ಮನೆಯ ನಿರ್ಮಾಣಕ್ಕೆ 50 ಸಾವಿರ ಹಣ ಬೇಡಿಕೆ ಇಟ್ಟಿದ್ದು, ಅವರ ಮೇಲೆ ಕ್ರಮಕೈಗೊಂಡು ತನಗೆ ಪರಿಹಾರ ನೀಡುವ ಮೂಲಕ ನ್ಯಾಯ ಒದಗಿಸಿಕೊಡುವಂತೆ ಬಡ ಗ್ರಾಮಸ್ಥನೋರ್ವ ಬೆಳಗಾವಿ ಜಿಲ್ಲಾಧಿಕಾರಿ ಬಳಿಗೆ ಬೇಡಿಕೊಂಡಿರುವ ಘಟನೆಯೊಂದು ವರದಿಯಾಗಿದೆ.

ಹೌದು ಓದುಗರೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಏಣಗಿ ಗ್ರಾಮದ ಬಾಬುಸಾಬ ನಭಿಸಾಬ ಸುತಗಟ್ಟಿ, ಎಂಬುವರಿಗೆ ಸೇರಿದ ವಸತಿ ಮನೆಯು ಅಪಾರ ಮಳೆಯ ಹಿನ್ನೆಲೆಯಲ್ಲಿ ಪೂರ್ಣ ಹಾನಿಯಾಗಿದೆ. ಇದರಿಂದ ತನಗೆ ವಾಸಿಸಲು ಮನೆ ಇಲ್ಲದ ಕಾರಣ ಪರಿಹಾರ ನೀಡುವಂತೆ ಏಣಗಿ ಗ್ರಾಮ ಪಂಚಾಯತಿ ಪಿಡಿಓ, ಗ್ರಾಮ ಲೆಕ್ಕಾಧಿಕಾರಿ, ಇಂಜಿನಿಯರ್ ಸೇರಿ ಕೆಲ ಅಧಿಕಾರಿಗಳ ಕಡೆಗೆ ಅಲೆದಾಡಿದರು ನೀವು ನಿಮ್ಮ ಗ್ರಾಪಂ ಉಪಾಧ್ಯಕ್ಷರಿಗೆ ಭೇಟಿಯಾಗುವಂತೆ ಸೂಚಿಸಿದ್ದಾರೆ.
ನಾವು ಏಣಗಿ ಗ್ರಾಪಂ ಉಪಾಧ್ಯಕ್ಷರಿಗೆ ಭೇಟಿ ಮಾಡಿದರೆ ಮನೆ ಪೂರ್ತಿ ಪರಿಹಾರ ಮಂಜೂರು ಮಾಡಿಸಲು 50 ಸಾವಿರ ಹಣದ ಬೇಡಿಕೆ ಇಟ್ಟಿದ್ದಾರೆ. ನಮ್ಮ ಕಿಂತಲೂ ಕಡಿಮೆ ಪ್ರಮಾಣದಲ್ಲಿ ಹಾನಿಯಾಗಿರುವ ಗ್ರಾಮದ ಮನೆಗಳಿಗೆ 5 ಲಕ್ಷ ರೂಗಳ ವರೆಗೆ ಹಣ ಮಂಜೂರಿ ಮಾಡಿರುತ್ತಾರೆ. ಆದರೆ ನಮ್ಮ ಮನೆ ಪೂರ್ಣ ಪ್ರಮಾಣದಲ್ಲಿ ಹಾನಿಯಾಗಿದ್ದರೂ ಕೂಡಾ ನಮಗೆ ಕೇವಲ 50 ಸಾವಿರ ಪರಿಹಾರ ನೀಡಲಾಗಿದೆ.
ಸದ್ಯ ನಮ್ಮಬಳಿ ದುಡ್ಡು ಇಲ್ಲದೆ ಪರದಾಡುತ್ತಿದ್ದು, ವಾಸಿಸಲು ಮನೆ ಕೂಡಾ ಇರುವದಿಲ್ಲ. ಗ್ರಾಪಂಗೆ ಅರ್ಜಿ ಸಲ್ಲಿಸಿದ್ದರೂ ಪರಿಹಾರ ನೀಡಿಲ್ಲ. ಗ್ರಾಪಂ ಉಪಾಧ್ಯಕ್ಷರಿಗೆ ಕೇಳಿದರೆ 50 ಸಾವಿರ ಹಣ ನೀಡಿದರೆ ಮಾತ್ರ ನಿಮಗೆ ಹಣ ಮಂಜೂರು ಮಾಡುತ್ತೇನೆ ಇಲ್ಲಾ ಅಂದರೆ ಇಲ್ಲ ಅಂತಾ ಹೇಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಮಗೆ ದಾರಿ ತೋಚುತ್ತಿಲ್ಲ. ನಮಗೆ ಸೂಕ್ತ ವಿಚಾರಣೆ ಮಾಡಿ ಪರಿಹಾರ ಕೊಡಿಸುವಂತೆ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.