ಬೆಳಗಾವಿ ಜಿಲ್ಲೆಯ ರೇಣುಕಾ ಸಾಗರ ಜಲಾಶಯ ಭರ್ತಿ : ನೀರು ಬಿಡುಗಡೆ, ರಾಮದುರ್ಗದ ಹಳೆ ಸೇತುವೆ ಜಾಲವೃತ : ಗದಗ ಜಿಲ್ಲೆಯ ಗ್ರಾಮಗಳಲ್ಲಿ ಆತಂಕ

ಬೆಳಗಾವಿ ಜಿಲ್ಲೆಯ ರೇಣುಕಾ ಸಾಗರ ಜಲಾಶಯ ಭರ್ತಿ : ನೀರು ಬಿಡುಗಡೆ, ರಾಮದುರ್ಗದ ಹಳೆ ಸೇತುವೆ ಜಾಲವೃತ : ಗದಗ ಜಿಲ್ಲೆಯ ಗ್ರಾಮಗಳಲ್ಲಿ ಆತಂಕ

ಬೆಳಗಾವಿ, ಸೆ, 3 : ಜಿಲ್ಲೆಯ ಮಲಪ್ರಭಾ ನದಿಗೆ ಇರುವ ರೇಣುಕಾ ಸಾಗರ (ನವಿಲ  ತೀರ್ಥ) ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿ ಜಲಾಶಯ ದಿಂದ ಹೆಚ್ವಿನ ಪ್ರಮಾಣದಲ್ಲಿ ನೀರು ಹೊರ ಬಿಡುತ್ತಿರುವ ಹಿನ್ನೆಲೆಯಲ್ಲಿ ರಾಮದುರ್ಗ ಬಳಿಯ ಹಳೆ ಸೇತುವೆ ಜಲಾವೃತವಾಗಿದೆ. ಅಲ್ಲದೆ ಗದಗ ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಆತಂತ ಸೃಷ್ಟಿಯಾಗಿದೆ.


     ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನಲ್ಲಿ ಇರುವ ರೇಣುಕಾ ಸಾಗರ (ನವಿಲು ತೀರ್ಥ) ಜಲಾಶಯವು 37.731 ಟಿಎಂಸಿ ಸಾಮರ್ಥ್ಯದ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಪಶ್ಚಿಮ ಘಟ್ಟಗಳ ಪ್ರದೇಶ, ಖಾನಾಪುರ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಭಾರಿ ಬಿಳುತ್ತಿರುವದರಿಂದ ಜಲಾಶಯಕ್ಕೆ 7544 ಕ್ಯೂಸೆಕ್ ನೀರು ಒಳ ಹರಿವು ಇದೆ.

    ಭರ್ತಿಯಟಗಿರುವ ರೇಣುಕಾ ಸಾಗರ ಜಲಾಶಯದಿಂದ 7544 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದ್ದು, ರಾಮದುರ್ಗ ಪಟ್ಟಣದ ಹಳೇ ಸೇತುವೆ ಮುಳುಗಡೆಯಾಗಿದೆ. ಅಲ್ಲದೆ ಜಲಾಶಯ ಹೆಚ್ವುವರಿ ನೀರು ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯ ಕೆಲ ಗ್ರಾಮಗಳಲ್ಲಿ ಆತಂಕ ಹೆಚ್ಚಾಗಿದೆ.

ಸುದ್ದಿ ಓದಿ