ಬೆಳಗಾವಿ ಜಿಲ್ಲೆಯ ಐವರು ಪೊಲೀಸ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ

ಬೆಳಗಾವಿ ಜಿಲ್ಲೆಯ ಐವರು ಪೊಲೀಸ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ

ಬೆಳಗಾವಿ, ಮಾ, 30 : ಜಿಲ್ಲೆಯಲ್ಲಿ ದಕ್ಷತೆಯಿಂದ ಸೇವೆ ಸಲ್ಲಿಸಿದ ಐವರು ಪೊಲೀಸ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ ಲಭ್ಯಿಸಿದೆ.

   ರಾಜ್ಯ ಸರಕಾರ ರಾಜ್ಯದಲ್ಲಿನ ಪೊಲೀಸ ಇಲಾಖೆಯಲ್ಲಿ ದಕ್ಷತೆಯಿಂದ ಕಾರ್ಯ ನಿರ್ವಹಿಸುತ್ತಿರುವ ಒಟ್ಟು 135 ಪೊಲೀಸ್ ಅಧಿಕಾರಿಗಳಿಗೆ ಮುಖ್ಯಮಂತ್ರಿಯವರ ಪದಕ ನೀಡಲು ರಾಜ್ಯ ಸರ್ಕಾರ ನಿರ್ದಿಸಿದೆ. ಇದರಲ್ಲಿ ಬೆಳಗಾವಿ ಜಿಲ್ಲೆಯ ಐವರು ದಕ್ಷ ಪೊಲೀಸ್ ಅಧಿಕಾರಿಗಳಿಗೆ ಈ ಪದಕ ಸಿಕ್ಕಿದ್ದು, ಬೆಳಗಾವಿ ಜಿಲ್ಲೆಯ ಕೀರ್ತಿ ಪತಾಕೆ ಹಾರಿಸಿದಂತಾಗಿದೆ. 

    ರಾಜ್ಯ ಸರಕಾರ ಇಂದು ಪದಕ ಪಡೆದ ಪೊಲೀಸ ಅಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿದೆ. ಅದರಲ್ಲಿ ಬೆಳಗಾವಿಯ ಎಸಿಬಿ ಸಿಪಿಐ ಅಡಿವೆಪ್ಪ ಗುದಿಗೊಪ್ಪ, ಹಿರೇಬಾಗೇವಾಡಿ ಠಾಣೆ ಸಿಪಿಐ ವಿಜಯಕುಮಾರ್ ಎನ್ ಸಿನ್ನೂರ, ಸಂಕೇಶ್ವರ ಠಾಣೆಯ ಪಿಎಸ್ ಐ ಗಣಪತಿ ಕೊಂಗನೊಳಿ, ಕೆಎಸ್‍ಆರ್ ಪಿ 2ನೇ ಪಡೆಯ ಯಲ್ಲಪ್ಪ ಭಜಂತ್ರಿ, ಡಿಎಆರ್ ನ ಮಹಾದೇವಪ್ಪ ಈರಪ್ಪ ಕೋಟೆವಾಲೆ, ಗುಪ್ತಚರ ಇಲಾಖೆಯ ಹಿರಿಯ ಸಹಾಯಕ ರಾಜೇಂದ್ರ ಬಡೇಸಗೋಳ ಇವರು ಮುಖ್ಯಮಂತ್ರಿಯವರ ಪದಕಕ್ಕೆ ಆಯ್ಕೆಯಾಗಿದ್ದಾರೆ. 

     ಇದೇ ಏಪ್ರಿಲ್ 2ರಂದು ಬೆಳಿಗ್ಗೆ 8 ಗಂಟೆಗೆ ಬೆಂಗಳೂರಿನ ಕೋರಮಂಗಲದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಈ ಅಧಿಕಾರಿಗಳಿಗೆ ಪದಕ ಪ್ರದಾನ  ನಡೆಯಲಿದೆ.


ಸುದ್ದಿ ಓದಿ