ಬೆಳಗಾವಿಯ ಯವತಿ ಅನುಮಾನಾಸ್ಪದ ಸಾವು : ಆಸ್ಪತ್ರೆಗೆ ದಾಖಲಿಸಿ ಯುವತಿಯ ಮೊಬೈಲ್ ಜತೆ ಯುವಕ ಫರಾರಿ, ಅತ್ಯಾಚಾರ ಹಲ್ಲೆ ಮಾಡಿರುವ ಬಗ್ಗೆ ತನಿಖೆಗೆ ಪಾಲಕರ ಒತ್ತಾಯ

ಬೆಳಗಾವಿಯ ಯವತಿ ಅನುಮಾನಾಸ್ಪದ ಸಾವು : ಆಸ್ಪತ್ರೆಗೆ ದಾಖಲಿಸಿ ಯುವತಿಯ ಮೊಬೈಲ್ ಜತೆ ಯುವಕ ಫರಾರಿ, ಅತ್ಯಾಚಾರ ಹಲ್ಲೆ ಮಾಡಿರುವ ಬಗ್ಗೆ ತನಿಖೆಗೆ ಪಾಲಕರ ಒತ್ತಾಯ

ಬೆಳಗಾವಿ, ಅ, 13 : ಬೆಂಗಳೂರಿನಲ್ಲಿ ಕಾಲ್ ಸೆಂಟರ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 19 ವರ್ಷದ ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಯುವತಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಅನುಮಾನಾಸ್ಪವಾಗಿ ಮೃತಪಟ್ಟಿದ್ದು, ಅತ್ಯಾಚಾರ ಮಾಡಿ ಹಲ್ಲೆ ಮಾಡಲಾಗಿದೆ. ತಮ್ಮ ಮಗಳ ಸಾವಿನ ಕುರಿತು ತನಿಖೆ ನಡೆಸಿ ನ್ಯಾಯ ನೀಡುವಂತೆ ಯುವತಿಯ ಪಾಲಕರು ಒತ್ತಾಯಿಸುತ್ತಿದ್ದಾರೆ.



        ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಯುವತಿ ಮೃತಪಟ್ಟಿದ್ದಾಳೆ. ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕಾಲ್ ಸೆಂಟರ್ ಗರ್ಲ್ ಆಗಿ ಕೆಲಸ ಮಾಡುತ್ತಿದ್ದ ಯುವತಿ ಮೂಲತಃ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ನಿವಾಸಿಯಾಗಿದ್ದಾರೆ. ಯುವತಿ ಕಳೆದ ಬುಧವಾರ ರಾತ್ರಿ ಬೆಳಗಾವಿಯ ಜಿಲ್ಲಾಸ್ಪತ್ರೆಗೆ ಅಪರಿಚಿತ ಯುವಕನೋರ್ವ ತಂದು ದಾಖಲಿಸಿದ್ದನು. ಆಸ್ಪತ್ರೆಯಲ್ಲಿ ಎಂಎಲ್‍ಸಿ, ಪೊಲೀಸ ಕೇಸ್ ಆಗುತ್ತದೆ ಎನ್ನುತ್ತಿದ್ದಂತೆ ಯುವತಿಯ ಮೊಬೈಲ್‍ನೊಂದಿಗೆ ಆ ಅನಾಮದೇಯ ಯುವಕ ಅಲ್ಲಿಂದ ಫರಾರಿಯಾಗಿದ್ದಾನೆ.
      ವಿಷಯ ಅರಿತ ಯುವತಿಯ ಪಾಲಕರು ಆಸ್ಪತ್ರೆಗೆ ಆಗಮಿಸಿದ ವೇಳೆ ಯುವತಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಳು ಎನ್ನಲಾಗಿದೆ. ಯುವತಿಯ ತಲೆಯ ಹಿಂಬದಿಗೆ ಗಾಯದ ಗುರುತು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಇದರನ್ನು ಕಂಡ ಯವತಿಯ ಪಾಲಕರು ಜಿಲ್ಲಾಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಬುಧವಾರ ತಡರಾತ್ರಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.
       ಅಷ್ಟೇ ಅಲ್ಲದೇ ಯುವತಿಯ ಮೈಯಲ್ಲಿ ಸಿಗರೇಟ್‍ನಿಂದ ಸುಟ್ಟಿದ ಗಾಯವಿತ್ತು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಇವೆಲ್ಲವನ್ನು ನೋಡಿದರೆ ನಮ್ಮ ಮಗಳ ಮೇಲೆ ಅತ್ಯಾಚಾರ ಮಾಡಿ ಹಲ್ಲೆ ಮಾಡಿದ್ದಾರೆಂದು ಸಂಬಂಧಿಕರು ಆರೋಪಿಸಿದ್ದಾರೆ. ಆದರೆ ಯುವತಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರೂ ಗುರುವಾರ ಬೆಳಗ್ಗೆ ಚಿಕಿತ್ಸೆ ಫಲಿಸದೇ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಯುವತಿನ ಸಾವಿನ ಹಿನ್ನೆಲೆಯಲ್ಲಿ ಆಸ್ಪತ್ರೆ ಆವರಣದಲ್ಲಿ ಪಾಲಕರು ಹೆಚ್ವಿನ ಸಂಖ್ಯೆಯಲ್ಲಿ ಜಮಾವನೆಗೊಂಡಿದ್ದು, ಪೊಷಕರ ಆಕ್ರಂದನ ಮುಗಿಲು ಮುಟ್ಟಿದೆ. ಬೆಳಗಾವಿಯ ಎಪಿಎಂಸಿ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಈ ಘಟನೆ ನಡೆದಿದೆ.  

ಸುದ್ದಿ ಓದಿ