ದ್ವಿಚಕ್ರ ವಾಹನ ಸವಾರರು ತಮ್ಮ ಅಮೂಲ್ಯ ಜೀವ ರಕ್ಷಣೆಗೆ ಹೆಲ್ಮೆಟ್ ಧರಿಸುವದು ಅತಿವಶಕ : ಡಿಸಿಪಿ ಸ್ನೇಹ : ಶಾಶ್ವತ್ ಇಂಡಸ್ಟ್ರೀಸ್ ನಿಂದ ಪೋಲೀಸ್, ಪತ್ರಕರ್ತರಿಗೆ ಉಚಿತ ಹೆಲ್ಮೆಟ್ ವಿತರಣೆ

ದ್ವಿಚಕ್ರ ವಾಹನ ಸವಾರರು ತಮ್ಮ ಅಮೂಲ್ಯ ಜೀವ ರಕ್ಷಣೆಗೆ ಹೆಲ್ಮೆಟ್ ಧರಿಸುವದು ಅತಿವಶಕ : ಡಿಸಿಪಿ ಸ್ನೇಹ : ಶಾಶ್ವತ್ ಇಂಡಸ್ಟ್ರೀಸ್ ನಿಂದ ಪೋಲೀಸ್, ಪತ್ರಕರ್ತರಿಗೆ ಉಚಿತ ಹೆಲ್ಮೆಟ್ ವಿತರಣೆ

ಬೆಳಗಾವಿ, ಸೆ, 10 : ದ್ವಿಚಕ್ರ ವಾಹನ ಸವಾರರು ತಮ್ಮ ಅಮೂಲ್ಯ ಜೀವವನ್ನು ರಕ್ಷಿಸಿಕೊಳ್ಳಲು ಹೆಲ್ಮೆಟ್ ಧರಿಸುವದು ಅವಶಕ ಎಂದು ಡಿಸಿಪಿ ಸ್ನೇಹಾ ಪಿ.ವ್ಹಿ ಹೇಳಿದರು.

      ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಶಾಶ್ವತ್ ಇಂಡಸ್ಟ್ರೀಸ್ ವತಿಯಿಂದ ಪೋಲೀಸ್ ರಿಗೆ ಹಾಗೂ ಪತ್ರಕರ್ತರಿಗೆ ಉಚಿತ ಹೆಲ್ಮೆಟ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

    ದಿನ ನಿತ್ಯ ದ್ವಿಚಕ್ರ ವಾಹನಗಳ ಅಪಘಾತದಲ್ಲಿ ಅನೇಕರು ಮೃತಪಡುತ್ತಿದ್ದಾರೆ. ಹೆಲ್ಮೆಟ್ ಧರಿಸುವದರಿಂದ ದ್ವಿಚಕ್ರ ವಾಹನ ಸವಾರರ ಜೀವ ರಕ್ಷಣೆ ಮಾಡಬಹುದು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

    ಇಂದಿನ ದಿನಗಳಲ್ಲಿ ಜನಸಂಖ್ಯೆ ದಿನದಿಂದ ದಿನಕ್ಕೆ ವೇಗವಾಗಿ ಹೆಚ್ಚಾಗುತ್ತಿದೆ. ಅದರ ಜೊತೆಗೆ ಜನ ಮರಣ ತ್ತಿದ್ದಾರೆ. ಅದಕ್ಕೆ ಅಪಘಾತ ಕಾರವಾಗಿದೆ. ಈ ಹಿನ್ನೆಲೆಯಲ್ಲಿ ಈ ಅಪಘಾತಗಳಲ್ಲಿ ವಾಹನ ಸವಾರರ ಜೀವ ರಕ್ಷಣೆಗಾಗಿ ಹೆಲ್ಮೆಟ್ ಕಡ್ಡಾಯದಂತ ಸರಕಾರ ನಿಯಮಾವಳಿಗಳನ್ನು ಜಾರಿಗೆ ತಂದಿದ್ದು ಈ ಕಾನೂನುಗಳನ್ನು ಸವಾರರು ಪಾಲಿಸಬೇಕು ಎಂದರು. 

     ಅಲ್ಲದೆ ಶಾಶ್ವತ ಇಂಡಸ್ಟ್ರೀಸ್ ನಂತಿರುವ ಸಂಸ್ಥೆಗಳು ಈ ಕುರಿತಂತೆ ಜಾಗೃತಿ ಮೂಡಿಸುವುದರಿಂದ ಅಪಘಾತಗಳ ಸಂಖ್ಯೆ ಕಡಿಮೆಯಾಗಬಹುದು ಎಂದು ನುಡಿದರು. ಕಾರ್ಯಕ್ರಮಕ್ಕೆ ಅತಿಥಿಯಾಗಿ ಉಮೇಶ ದಡ್ಡೀಮನಿ, ಸಮಾಜ ಸೇವಕ ಪ್ರೇಮ್ ಚೌಗಲಾ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಸುದ್ದಿ ಓದಿ