ಬೆಳಗಾವಿಯಲ್ಲಿ ಮಳೆಯ ಅರ್ಭಟ : ಹೋಳೆಯಂತಾದ ಚನ್ನಮ್ಮ ವೃತ್, ಜನಜೀವನ ಅಸ್ತವ್ಯಸ್ತ
ಬೆಳಗಾವಿ : ನಗರದಲ್ಲಿ ಶನಿವಾರ ಮಧ್ಯಾಹ್ನ ವೇಳೆಯಲ್ಲಿ ಸುಮಾರು ಎರಡು ತಾಸುಗಳ ವರೆಗೆ ಸುರಿದ ಧಾರಾಕಾರದ ಭಾರಿ ಮಳೆಗೆ ಕೆಲವು ಭಾಗಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ ಅಲ್ಲದೆ. ನಗರದ ಹೃದಯ ಭಾಗವಾಗಿರುವ ಚನ್ನಮ್ಮ ವೃತ್‍ವು ಮಳೆ ನೀರಿನಿಂದ ತುಂಬಿಕೊಂಡು ಹೋಳೆಯಂತಾಗಿರುವ ದೃಶ್ಯಗಳ ಕಂಡು ಬಂದವು.

Bಶನಿವಾರ ಮಧ್ಯಾನ 3 ಗಂಟೆಯಿಂದ ಸಂಜೆ 5 ಗಂಟೆಯ ವರೆಗೆ ಸುರಿದ ಧಾರಾಕಾರ ಮಳೆಯಿಂದ ನಗರದ ಕೆಲವು ಭಾಗಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತು. ನಗರದ ರಸ್ತೆಗಳಲ್ಲಿ ಮಳೆಯ ನೀರು ತುಂಬಿಕೊಂಡು ರಸ್ತೆಗಳೆಲ್ಲ ನೀರುಮಯವಾಗಿತ್ತು. ಚನ್ನಮ್ಮ ವೃತ್‍ದಲ್ಲಿ ಕೂಡಾ ರಸ್ತೆಯ ಮೇಲೆ ಮಳೆ ನೀರು ತುಂಬಿಕೊಂಡು ಹೋಳೆಯಂತೆ ಭಾಸವಾಗುತ್ತಿದ್ದ ದೃಶ್ಯಗಳು ಕಂಡು ಬಂದವು. ಈ ರಸ್ತೆಗಳಲ್ಲಿ ವಾಹನಗಳ ಸವಾರರು ಸಂಚರಿಸಲು ಮತ್ತು ಪಾದಾಚಾರಿಗಳು ಕಾಲ್ನಡಿಗೆಯಿಂದ ಸಾಗಲು ಪರದಾಡುವಂತಾಯಿತು.
