ರವಿ ಕೋಕಿತ್ಕರ್ ಗುಂಡಿನ ದಾಳಿ ಪ್ರಕರಣ : ಪೊಲೀಸರಿಂದ ಮಚ್ವಿಹಾಕುವ ಪ್ರಯತ್ನ, ತಿಂಗಳಲ್ಲಿ ಇತ್ಯರ್ಥಕ್ಕೆ ಸರಕಾರಕ್ಕೆ ಗಡುವು ನೀಡಿದ ಮುತಾಲಿಕ್
ಬೆಳಗಾವಿ, ಜ, 19 : ರಾಜಕೀಯ ಒತ್ತಡಕ್ಕೆ ಮಣಿದು ಬೆಳಗಾವಿ ಪೊಲೀಸರು ರವಿ ಕೋಕಿತ್ಕರ್ ಅವರ ಮೇಲಿನ ಗುಂಡಿನ ದಾಳಿ ಪ್ರಕರಣವನ್ನು ಮುಚ್ಚಿ ಹಾಕುವ ಹುನ್ನಾರ ನಡೆಸಿದ್ದಾರೆ. ಮುಂಬರುವ 1 ತಿಂಗಳಲ್ಲಿ ಈ ಪ್ರಕರಣವನ್ನು ಸಿಐಡಿ ಅಥವಾ ಎಸ್ ಐಟಿ ತನಿಖೆ ನಡೆಸುವಂತೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ ಸರಕಾರಕ್ಕೆ ಒಂದು ತಿಂಗಳದ ಗಡುವು ನೀಡಿದ್ದಾರೆ.
ನಗರದಲ್ಲಿ ಗುರುವಾರ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಕಿತ್ಕರ್ ಅವರ ಮೇಲಿನ ಗುಂಡಿನ ದಾಳಿ ಪ್ರಕರಣ ಒಂದು ತಿಂಗಳಲ್ಲಿ ಸತ್ಯಾಸತ್ಯತೆ ಹೊರ ತರಬೇಕು, ಇಲ್ಲ ಅಂದರೆ ನಮ್ಮ ಕೈಯಲ್ಲಿ ಕೊಡಿ 24 ಗಂಟೆಯಲ್ಲಿ ಈ ಪ್ರಕರಣದ ಹಿಂದಿರು ಆ ರಾಜಕಾರಣಿಯನ್ನು ಹೊರ ತರುತ್ತೇವೆ ಎಂದು ನುಡಿದರು.
ಬೆಳಗಾವಿಯಲ್ಲಿ ಸದ್ಯ ಗುಂಡಿನ ದಾಳಿ ಘಟನೆಗಳು ನಡೆದಿರಲಿಲ್ಲ. ಆದರೆ ಇತ್ತಿಚೆಗೆ ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷ ರವಿ ಕೋಕಿತರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಇದು ಕೊಲೆಯ ಯತ್ನ. ಕೊಲೆಯಾಗಿದ್ದರೆ ರಾಜ್ಯಾದ್ಯಂತ ಪ್ರತಿಭಟನೆಯಾಗುತ್ತಿತ್ತು. ಅಂಥ ಗಂಭೀರ ಪ್ರಕರಣವನ್ನು ನಗರ ಪೊಲೀಸರು ಮುಚ್ವಿ ಹಾಕುವ ಪ್ರಯತ್ನದಲ್ಲಿ ಇದ್ದಾರೆ. ಈ ಪ್ರಕರಣ ದಲ್ಲಿ ರಾಜಕೀಯ ಮಿಶ್ರಿನವಾಗಿದೆ. ಇದರಲ್ಲಿ ಬೆಳಗಾವಿ ಪೊಲೀಸ ಆಯುಕ್ತರು ವೈಯಕ್ತಿಕ ಜಗಳ, ವೈಯಕ್ತಿಕ ಆರ್ಥಿಕ ವಿಷಯ ದಾಳಿಗೆ ಕಾರಣ ಎಂದು ಹೇಳಿದ್ದಾರೆ ಇದು ಸರಿಯಾದ ಕ್ರಮವಲ್ಲ ಎಂದರು.
ರವಿ ಕೋಕಿತ್ಕರ ಕೊಲೆಯ ಯತ್ನ ರಾಜಕೀಯ ಪ್ರಭಾವದಿಂದ ನಡೆದಿದೆ. ನಗರ ಪೊಲೀಸ್ ಇಲಾಖೆ ಎಲ್ಲೋ ರಾಜಕೀಯ ಒತ್ತಡಕ್ಕೆ ಮಣಿದಿದೆ ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ. ಕಾರ್ ನಲ್ಲಿದ್ದ ಮೂವರು ಜನರ ಹೇಳಿಕೆ, ಅಕ್ಕಪಕ್ಕದವರ ಹೇಳಿಕೆ ಪಡೆದಿಲ್ಲ. ಇದರಿಂದ ತಿಳಿಯುತ್ತದೆ ಎಷ್ಟು ಗಂಭೀರವಾಗಿ ನಗರ ಪೊಲೀಸರು ಈ ಪ್ರಕರಣ ತೆಗೆದುಕೊಂಡಿದ್ದಾರೆ ಎಂದು ತಿಳಿಯುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಸಿ ಟಿವಿಯಲ್ಲಿ ಎರಡೂ ವಾಹನಗಳು ಹೋಗಿವೆ. ಅದರಲ್ಲಿ ವೇಗವಾಗಿ ಹೋದ ಬೈಕ್ ಬಿಟ್ಟು ಸ್ಕೂಟರ್ ಹಿಡಿದಿದ್ದಾರೆ. ಇನ್ನೊಂದ ಬೈಕ್ ಎಲ್ಲಿ ಹೊಯಿತು ಎನ್ನುವ ತನಿಖೆ ಮಾಡಿಲ್ಲ. ಮೂವರು ಬಂಧಿತರು ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಹಾಜರಾಗಬೇಕಿತ್ತು. ಇದು ಅನುಮಾನ ಮೂಡುತ್ತಿದೆ ಎಂದರು.
ಬೆಳಗಾವಿ ನಗರ ಪೊಲೀಸರ ಮೇಲಿನ ವಿಶ್ವಾಸ ಮಾಸುತ್ತಿದೆ. ಈ ಪ್ರಕರಣದಲ್ಲಿ ಗಂಭೀರತೆ ಏಕೆ ಇಲ್ಲ. ಆದರೆ ಸಿಎಂ ಅವರ ಹೆಸರಿನಿಂದ ಬೆಳಗಾವಿ ಪ್ರಭಾವಿ ರಾಜಕಾರಣಿ ಈ ಪ್ರಕರಣದ ದಿಕ್ಕು ತಪ್ಪಿಸುವ ಹುನ್ನಾರ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ನಗರ ಪೊಲೀಸರ ಮೇಲೆ ಒತ್ತಡ ಹಾಕುತ್ತಿದ್ದಾರೆ ಎನ್ನುವ ಅನುಮಾನ ವ್ಯಕ್ತವಾಗಿದೆ ಎಂದು ಪ್ರಮೋದ ಮುತಾಲಿಕ್ ಸಂಶಯ ವ್ಯಕ್ತಪಡಿಸಿದರು.