ರಾತ್ರಿ ಮನೆಗೆ ನುಗ್ಗಿ ರಿಯಲ್ ಎಸ್ಟೇಟ್ ಏಜೆಂಟ್ ನ ಹತ್ಯೆ : ಫರಾರಿಯಾದ ಹಂತಕ ಶೋಧನೆಯಲ್ಲಿ ಕ್ಯಾಂಪ ಪೊಲೀಸರು

ರಾತ್ರಿ ಮನೆಗೆ ನುಗ್ಗಿ ರಿಯಲ್ ಎಸ್ಟೇಟ್ ಏಜೆಂಟ್ ನ ಹತ್ಯೆ : ಫರಾರಿಯಾದ ಹಂತಕ ಶೋಧನೆಯಲ್ಲಿ ಕ್ಯಾಂಪ ಪೊಲೀಸರು

ಬೆಳಗಾವಿ, ಸೆ,  17: ನಗರದ ಕ್ಯಾಂಪ್ ಪ್ರದೇಶದಲ್ಲಿ ವ್ಯಕ್ತಿಯ ಬರ್ಬರ ಹತ್ಯೆ ಮಾಡಿದ ಘಟನೆ ಶುಕ್ರವಾರ ನಡೆದಿದೆ.

      ಹೆಂಡತಿ, ಮಕ್ಕಳು ಪಕ್ಕದ ರೂಮ್ ನಲ್ಲಿ ಮಲಗಿದ್ದಾಗಲೇ ಹತ್ಯೆ ಮಾಡಿ ಹಂತಕರು ಫರಾರಿಯಾಗಿದ್ದಾರೆ. ಶುಕ್ರವಾರ ರಾತ್ರಿ ಯಾರಿಗೂ ಗೊತ್ತಾಗದಂತೆ ಮನೆಗೆ ನುಗ್ಗಿ ಹತ್ಯೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

   ರಿಯಲ್ ಎಸ್ಟೇಟ್ ಏಜೆಂಟ್ ಆಗಿ ಕೆಲಸ ಮಾಡ್ತಿದ್ದ ಸುಧೀರ್ ಕಾಂಬಳೆ(57) ಕೊಲೆಯಾದ ವ್ಯಕ್ತಿಯಾಗಿದ್ದಾರೆ ಎಂದು ಗುರುತಿಸಲಾಗಿದೆ. ದುಬೈದಿಂದ ಕೊವಿಡ್ ಹಿನ್ನೆಲೆ ಎರಡು ವರ್ಷದ ಹಿಂದೆ ಬೆಳಗಾವಿಗೆ ಬಂದಿದ್ದ ಸುಧೀರ್ ನ ಹೊಟ್ಟೆ, ಕತ್ತು, ಕೈ, ಮುಖಕ್ಕೆ ಇರಿದು ಹತ್ಯೆ ಮಾಡಿ ಹಂತಕರು ಪರಾರಿಯಾಗಿದ್ದಾರೆ. 

     ಸ್ಥಳಕ್ಕೆ ಕ್ಯಾಂಪ್ ಪೊಲೀಸರು ಹಾಗೂ ಡಿಸಿಪಿ ರವೀಂದ್ರ ಗಡಾದಿ ಭೇಟಿ ಪರಿಶೀಲನೆ. ನಡೆಸಿದ್ದಾರೆ‌. ಕ್ಯಾಂಪ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಇದಾಗಿದೆ‌.

ಸುದ್ದಿ ಓದಿ