ಉಮೇಶ ಕತ್ತಿ ರಾಜೀನಾಮೆ ನೀಡಿದರೆ ಕಾಂಗ್ರೆಸ್‍ನವರು ಚಿರತೆ ಹಿಡಿತಾರಂತನಾ : ಅದು ಅವರ ಚುನಾವಣೆ ಶೋ ಅಷ್ಟೇ : ಕಡಾಡಿ ಕಿಡಿ

ಉಮೇಶ ಕತ್ತಿ ರಾಜೀನಾಮೆ ನೀಡಿದರೆ ಕಾಂಗ್ರೆಸ್‍ನವರು ಚಿರತೆ ಹಿಡಿತಾರಂತನಾ : ಅದು ಅವರ ಚುನಾವಣೆ ಶೋ ಅಷ್ಟೇ : ಕಡಾಡಿ ಕಿಡಿ

ಬೆಳಗಾವಿ, ಆ, 28 : ಅರಣ್ಯ ಸಚಿವ ಉಮೇಶ ಕತ್ತಿ ಅವರು ರಾಜೀನಾಮೆ ನೀಡಿದರೆ ಕಾಂಗ್ರೆಸ್ ಕಾರ್ಯಕರ್ತರು ಚಿರತೆಯನ್ನು ಅವರು ಸೆರೆ ಹಿಡಿತ್ತಾರಂತನಾ?, ಇಲ್ಲ ಅಲ್ಲಾ. ಚುನಾವಣೆ ಬಂದಾಗ ಕಾಂಗ್ರೆಸ್‍ನವರು ಒಂದು ಚುನಾವಣೆ ಶೋ ಮಾಡುತ್ತಾರೆ. ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ ಅದು ಒಂದು ಶೋ ಆಗಿದೆ. ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವದಿಲ್ಲ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಕಾಂಗ್ರೆಸ್‍ನವರ ವಿರುದ್ದ ವಾಗ್ದಾಳಿ ನಡೆಸಿದರು.

        ಸೋಮವಾರ ಮಧ್ಯಾಹ್ನ ನಗರದ ಗಾಲ್ಫ್ ಮೈದಾನ ಬಳಿಯಲ್ಲಿ ಚಿರತೆ ಸೆರಿ ಹಿಡಿಯುವ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು. ಬೆಳಗಾವಿಯ ಚಿರತೆ ಹಿಡಿಯುವಲ್ಲಿ ಅರಣ್ಯ ಸಚಿವ ಕತ್ತಿ ವಿಫಲವಾಗಿದ್ದಾರೆ. ಉಮೇಶ ಕತ್ತಿ ಅವರು ಕೂಡಲೆ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್‍ನವರು ಒತ್ತಾಯಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಈರಣ್ಣಾ ಕಡಾಡಿ ಅವರು, ಅರಣ್ಯ ಸಚಿವ ಉಮೇಶ ಕತ್ತಿ ಅವರು ಚಿರತೆ ಹಿಡಿಯಲು ಅಗತ್ಯ ನೆರವು ನೀಡಿದ್ದಾರೆ. ಸಚಿವ ಕತ್ತಿ ಅವರು ಅಧಿಕಾರಿಗಳ ಜೊತೆಗೆ ಸಭೆ ನಡೆಸಿ ಇಲಾಖೆಯಿಂದ ಎಲ್ಲ ನೆರವು ನೀಡುವ ಮೂಲಕ ಚಿರತೆ ಸೆರೆ ಹಿಡಿಯಲು ಯಲ್ಲ ಪ್ರಯತ್ನ ಮಾಡುತ್ತಿದ್ದಾರೆ.

       ಬೆಳಗಾವಿಯಲ್ಲಿ ಕಳೆದ ಕೆಲವು ದಿನಗಳ ಹಿಂದೆ ಕಂಡು ಬಂದಿರುವ ಚಿರತೆ ಸೆರೆ ಹಿಡಿಯಲು ಎಲ್ಲ ರೀತಿಯ ಕಾರ್ಯಾಚರಣೆ ನಡೆಯುತ್ತಿದೆ. ಈ ಭಾಗದಲ್ಲಿ ಜನವಸತಿ ಪ್ರದೇಶ ಇರುವದರಿಂದ ಹೆಚ್ಚಿನ ನೀಗಾ ವಹಿಸಲಾಗಿದೆ. ಆನೆ, ಜೆಸಿಬಿ, ಅರವಳಿಕೆ ನೀಡುವ ತಜ್ಞೆರನ್ನು ಹಾಗೂ ಗನ್‍ಗಳನ್ನು ತಂದು ಕಾರ್ಯಾಚರಣೆ ನಡೆಸಲಾಗುತ್ತಿದೆ. 23 ಸಿಸಿ ಕ್ಯಾಮರಾಗಳನ್ನು ಈ ರೀತಿಯ ಘಟನೆ ಆದಾಗ ಕರ್ನಾಟಕ ರಾಜ್ಯದಲ್ಲಿ ಎಲ್ಲಿಯೂ ಈ ರೀತಿಯ ಎಲ್ಲವನ್ನು ಬಳಕೆ ಮಾಡಿಲ್ಲ. ಇದೇ ಮೊದಲು ಇರಬಹುದು. ಅದಕ್ಕೆ ಇಲ್ಲಿನ ನಾಗರಿಕರು ಕೂಡಾ ಸಾಥ್ ನೀಡತಾ ಇದ್ದಾರೆ.

       ದಟ್ಟವಾದ ಗೀಡ ಮರಗಳು ಇರುವದರಿಂದ ಚಿರೆತ ಸಿಗತಾ ಇಲ್ಲ. ಚಿರತೆ ರಾತ್ರಿ ಹೊತ್ತಲ್ಲಿ ಹೊರೆಗ ಬಂದು ಹಗಲಿನಲ್ಲಿ ಗಿಡಮರಗಳಲ್ಲಿ ಇರುತ್ತದೆ. ಚಿರೆತೆ ಹಿಡಿಯಲು ಅರಣ್ಯ ಇಲಾಖೆಯ ಅಧಿಕಾರಿಗಳು ಎಲ್ಲ ರೀತಿಯ ಕಾರ್ಯಾಚರಣೆ ಮಾಡುತ್ತಿದ್ದಾರೆ. ಚಿರತೆ ಕಾರ್ಯಾಚರಣೆಗೆ ಕಂದಾಯ ಇಲಾಖೆ ಹಾಗೂ ಪೊಲೀಸ ಇಲಾಖೆಯ ಇಬ್ಬರು ನೋಡಲ ಅಧಿಕಾರಿಗಳನ್ನು ನೇಮಕ ಮಾಡುವ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡುವದಾಗಿ ಅವರು ತಿಳಿಸಿದರು.

      ನಗರದ ಗಾಲ್ಫ್ ಮೈದಾನ ಬಳಿ ಸ್ವಚ್ಚತೆ ಇಲ್ಲದೆ ಗಲಿಜು ಉಂಟಾಗಿ ಚಿರತೆ ಅಡಗಿಕೊಳ್ಳಲು ವ್ಯವಸ್ಥೆ ಆಗಿದೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಈ ಜಮೀನು ಬಳಕೆ ಇಲ್ಲದ ಕಾರಣ ಇಲ್ಲಿ ಈ ರೀತಿಯ ಗಿಡಮರಗಳು ಬೆಳೆದಿವೆ ಈ ಕುರಿತು ಕೇಂದ್ರ ರಕ್ಷಣಾ ಸಚಿವರ ಗಮನಕ್ಕೆ ಈ ಬಗ್ಗೆ ತರುವದಾಗಿ ಕಡಾಡಿ ಅವರು ತಿಳಿಸದರು.  


ಸುದ್ದಿ ಓದಿ