ಬೆಳಗಾವಿ ಜಿಲ್ಲಾ ಪೊಲೀಸರ ಸಾಧನೆ : 8 ಕೆಜಿ ಬಂಗಾರ ಸೇರಿ 17.54 ಕೋಟಿ ಸಾಮಗ್ರಿ ವಶಕ್ಕೆ, 200 ಪ್ರಕರಣ ಪತ್ತೆ, 324 ಆರೋಪಿಗಳ ಬಂಧನ : ಐಜಿಪಿ ಸತೀಶಕುಮಾರ

ಬೆಳಗಾವಿ ಜಿಲ್ಲಾ ಪೊಲೀಸರ ಸಾಧನೆ : 8 ಕೆಜಿ ಬಂಗಾರ ಸೇರಿ 17.54 ಕೋಟಿ ಸಾಮಗ್ರಿ ವಶಕ್ಕೆ, 200 ಪ್ರಕರಣ ಪತ್ತೆ, 324 ಆರೋಪಿಗಳ ಬಂಧನ : ಐಜಿಪಿ ಸತೀಶಕುಮಾರ

ಬೆಳಗಾವಿ, ಡಿ, 16 : ಜಿಲ್ಲೆಯ ವಿವಿಧ ಠಾಣೆಗಳಲ್ಲಿ ನಡೆದ 200 ಕಳ್ಳತನ ಪ್ರಕರಣ ಪತ್ತೆ ಮಾಡಿರುವ ಜಿಲ್ಲಾ ಪೊಲೀಸರು ಒಟ್ಟು 324 ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಅದರಂತೆ ನಗದು ಸೇರಿದಂತೆ ಒಟ್ಟು 17 ಕೋಟಿ 54 ಲಕ್ಷ ರೂ. ಗಳ ಚಿನ್ನಾಭರಣ ಮತ್ತು ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದು, ಇವನ್ನು ಕಳೆದುಕೊಂಡ ಸಾರ್ವಜನಿಕರಿಗೆ ಮರಳಿ ನೀಡಲಾಗಿದೆ ಎಂದು ಉತ್ತರ ವಲಯ ಐಜಿಪಿ ಸತೀಶಕುಮಾರ್ ಅವರು ಇಂದಿಲ್ಲಿ ಹೇಳಿದರು. 


     ನಗರದ ಎಸ್.ಪಿ ಮೈದಾನದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಒಂದು ವರ್ಷದ ಅವಧಿಯಲ್ಲಿ 201ಪ್ರಕರಣ ಪತ್ತೆ ಹಚ್ಚಿ 324 ಆರೋಪಿಗಳನ್ನ ಬಂಧಿಸಿದ ಬೆಳಗಾವಿ ಜಿಲ್ಲಾ ಪೊಲೀಸರು ಒಟ್ಟು 17 ಕೋಟಿ 54 ಲಕ್ಷ ಮೌಲ್ಯದ ವಸ್ತುಗಳು ಜಪ್ತಿ ಮಾಡಲಾಗಿದೆ ಎಂದು ಐಜಿಪಿ ತಿಳಿಸಿದರು.


  ಇದರಲ್ಲಿ 4 ಕೋಟಿ 18 ಲಕ್ಷ ಮೌಲ್ಯದ 8 ಕೆಜಿ 369ಗ್ರಾಂ ಚಿನ್ನ. 4 ಲಕ್ಷ 91ಸಾವಿರ ಮೌಲ್ಯದ 7ಕೆಜಿ ಬೆಳ್ಳಿ, 1 ಕೋಟಿ 24 ಲಕ್ಷ ಮೌಲ್ಯದ ದ್ವಿಚಕ್ರ ವಾಹನ, 3 ಕೋಟಿ 99 ಲಕ್ಷ ಮೌಲ್ಯದ 24 ಮೋಟಾರ್ ವಾಹನಗಳು ವಶಕ್ಕೆ, 7 ಕೋಟಿ 47 ಲಕ್ಷ ನಗದು, 59 ಲಕ್ಷ ಮೌಲ್ಯದ ಮೊಬೈಲ್ ಸೇರಿ ಇತರೆ ವಸ್ತು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು.


    ಬೆಳಗಾವಿಯ ಡಿಆರ್ ಮೈದಾನದಲ್ಲಿ ಸ್ವತ್ತುಗಳ ಪ್ರದರ್ಶನ ಮಾಡಲಾಯಿತು.ಉತ್ತರ ವಲಯ ಐಜಿಪಿ ಸತೀಶ್ ಕುಮಾರ್, ಬೆಳಗಾವಿ ಎಸ್‌ಪಿ ಡಾ. ಸಂಜೀವ ಪಾಟೀಲ್, ಎಎಸ್‌ಪಿ ಮಹಾನಿಂಗ ನಂದಗಾವಿ ಅವರಿಂದ ನಗದು ಚಿನ್ನಾಭರಣ ಕಳೆದುಕೊಂಡ ದೂರುದಾರರಿಗೆ ಹಸ್ತಾಂತರ ಮಾಡಲಾಯಿತು. ಭರ್ಜರಿ ಬೇಟೆಯಾಡಿದ ಬೆಳಗಾವಿ ಜಿಲ್ಲಾ ಪೊಲೀಸರು 2022ರ ಸಾಲಿನಲ್ಲಿ ವಿವಿಧ ಪ್ರಕರಣಗಳ ಪತ್ತೆ ಹಚ್ಚಿ ಕೋಟಿ ಕೋಟಿ ಹಣ ಜಪ್ತಿ ಮಾಡುವ ಮೂಲಕ ಹಣ ಚಿನ್ನಾಭರಣ ಕಳೆದುಕೊಖಡವರ ಪಾಲಿನ ಆಪತಬಾಂಧವರಾಗಿದ್ದಾರೆ.

ಸುದ್ದಿ ಓದಿ