ಬೆಳಗಾವಿಯ ಹೊರವಲಯದಲ್ಲೂ ನಡುರಸ್ತೆ ಮೇಲೆ ಹೊತ್ತಿ ಉರಿದ ಲಾರಿ : ಲಕ್ಷಾಂತರ ಹಾನಿ

ಬೆಳಗಾವಿಯ ಹೊರವಲಯದಲ್ಲೂ ನಡುರಸ್ತೆ ಮೇಲೆ ಹೊತ್ತಿ ಉರಿದ ಲಾರಿ : ಲಕ್ಷಾಂತರ ಹಾನಿ

ಬೆಳಗಾವಿ, ಜ, 14 : ಬೆಳಗಾವಿ ಹೊರವಲಯದ ನ್ಯೂ ವೈಭವ ನಗರ ಬಳಿ ಶನಿವಾರ ರಾತ್ರಿ ಲಾರಿ ಬೆಂಕಿಗಾಹುತಿಯಾಗಿದೆ. ಲಾರಿಯಲ್ಲಿ ದುಬಾರಿ ಫರ್ನಿಚರ್ ಇದ್ದವು. ಬೆಂಕಿ ಹೊತ್ತುಕೊಂಡ ಸಂದರ್ಭದಲ್ಲಿ ಲಾರಿ ಚಾಲಕ ಕೆಲ ಪ್ರಮಾಣದಲ್ಲಿ ಫರ್ನಿಚರ್ ಇಳಿಸಿದ್ದಾನೆ.

   ನ್ಯೂ ವೈಭವ ನಗರ ಸಮೀಪದ ರಾಷ್ಟ್ರೀಯ ಹೆದ್ದಾರಿ ಮೇಲೆ ಸರಕು ತುಂಬಿಕೊಂಡಿದ್ದ ಈ ಲಾರಿಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಚಾಲಕ ಹೆದ್ದಾರಿ ಬಳಿ ಲಾರಿ ನಿಲ್ಲಿಸಿದ ವೇಳೆ ಈ ಘಟನೆ ಸಂಭವಿಸಿದೆ. ಲಾರಿ ಪುಣೆಯಿಂದ ಬೆಂಗಳೂರು ಕಡೆ ಹೋಗುತ್ತಿತ್ತು.

ಸುದ್ದಿ ಓದಿ