ಬಿಜೆಪಿಗೆ ಚುನಾವಣೆ ದಾವಂತ ಇಲ್ಲ, ಸಿದ್ದರಾಮಣ್ಣಗೆ, ಡಿಕೆಶಿಗೆ ಮಾತ್ರ ಸಿಎಂ ದಾವಂತ ಇದೆ : ನಮಗೆ ಬೆಳಗಾವಿಯಲ್ಲಿ ಸತೀಶ ಜಾರಕಿಹೊಳಿ ನೇರ ಗುರಿ : ಕಟೀಲ್

ಬಿಜೆಪಿಗೆ ಚುನಾವಣೆ ದಾವಂತ ಇಲ್ಲ, ಸಿದ್ದರಾಮಣ್ಣಗೆ, ಡಿಕೆಶಿಗೆ ಮಾತ್ರ ಸಿಎಂ ದಾವಂತ ಇದೆ : ನಮಗೆ ಬೆಳಗಾವಿಯಲ್ಲಿ ಸತೀಶ ಜಾರಕಿಹೊಳಿ ನೇರ ಗುರಿ : ಕಟೀಲ್

ಬೆಳಗಾವಿ, ಸೆ, 29 : ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಅವಧಿ ಪೂರ್ವ ಚುನಾವಣೆ ಬರುವದಿಲ್ಲ. ನಮ್ಮ ಸರ್ಕಾರದ ಪೂರ್ಣ ಅವಧಿ ಪೂರೈಸುತ್ತದೆ. ನಮಗೆ ಯಾವುದೇ ಚುನಾವಣೆ ದಾವಂತ ಇಲ್ಲ. ಸಿಎಂ ಆಗುವ ದಾವಂತ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಗೆ ಇದೆ. ನಮ್ನ ಪಕ್ಷದಲ್ಲಿ ಯಾವ ದಾವಂತ ಇಲ್ಲ. ನಮಗೆ ಈಗ ಸದ್ಯ ಬೆಳಗಾವಿಯಲ್ಲಿ ಸತೀಶ ಜಾರಕಿಹೊಳಿ ಒಬ್ಬರೆ ನೇರ ಗುರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್ ಹೇಳಿಕೆ ನೀಡಿದ್ದಾರೆ. 

     ಗುರುವಾರ ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಗುಜರಾತ್ ಜೊತೆಗೆ ಕರ್ನಾಟಕದಲ್ಲೂ ಡಿಸೆಂಬರ್ ನಲ್ಲಿ ಚುನಾವಣೆ ನಡೆಯುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರನ್ನ ರಾಜಕೀಯ ಸನ್ಯಾಸತ್ವ ಕೊಡಿಸುವ ಸವಾಲನ್ನ ರಮೇಶ್ ಜಾರಕಿಹೊಳಿ ಅವರು ತೆಗೆದುಕೊಂಡಿದ್ದಾರೆ ಎಂದು ನುಡಿದರು. ರಮೇಶ ಜಾರಕಿಹೊಳಿ ನಾಯಕತ್ವದಲ್ಲಿ ಬೆಳಗಾವಿ ಜಿಲ್ಲೆಯ ಚುನಾವಣೆ ಎದುರಿಸುತ್ತಿರಾ ಎಂಬ ಮಾಧ್ಯಮ ದವರ ಪ್ರಶ್ನೆಗೆ ಉತ್ತರಿಸಿದ ಅವರು, ನಿನ್ನೆಯೇ ಗೋಕಾಕನಲ್ಲಿ ಇದಕ್ಕೆ ಉತ್ತರ ಕೊಟ್ಟಿರುವೆ. ಪರೋಕ್ಷವಾಗಿ ರಮೇಶ್ ಜಾರಕಿಹೊಳಿ ನಾಯಕತ್ವದ ಅಂತಾ ಕಟೀಲ್ ಹೇಳಿದರು. ನಾವು ಎಲ್ಲರನ್ನೂ ಇಟ್ಟುಕೊಂಡು ಚುನಾವಣೆ ಗೆ ಹೋಗ್ತಿವಿ, ಸ್ಪಷ್ಟವಾಗಿ ಚುನಾವಣೆ ಎದುರಿಸಿ ಗೆಲ್ಲುತ್ತೇವೆ. ಈಗ ಸದ್ಯ ನಮ್ಮ ಗುರಿ, ಸತೀಶ್ ಜಾರಕಿಹೊಳಿ‌ ಎಂದು ಕಟೀಲ್ ಸ್ಪಷ್ಟಪಡಿಸಿದರು.

    ಮಾತಾಡುವ ಭರಾಟೆಯಲ್ಲಿ ಬಾಲಚಂದ್ರ ಜಾರಕಿಹೊಳಿ ಬದಲಾಗಿ ಸತೀಶ್ ಜಾರಕಿಹೊಳಿ ಎಂದ ಕಟೀಲ್. ಬಳಿಕ ಯಡವಟ್ಟು ಸರಿ ಮಾಡಿಕೊಂಡ ಕಟೀಲ್. ಸತೀಶ ಜಾರಕಿಹೊಳಿ ಬೈದು ಬೈದು ಅವರ ಹೆಸರು ಬಂತು ಎಂದ‌ರು. ನಮ್ಮದು ಮತ್ತು ಬಾಲಚಂದ್ರ ಜಾರಕಿಹೊಳಿ , ರಮೇಶ ಜಾರಕಿಹೊಳಿ ಗುರಿ ಒಂದೇ ಇದೇ. ಮುಂದಿನ ಚುನಾವಣೆಯಲ್ಲಿ ಬೆಳಗಾವಿಯಲ್ಲಿ18 ಸ್ಥಾನ. ರಾಜ್ಯದಲ್ಲಿ 150 ಸ್ಥಾನ ಗೆಲುವು ಗುರಿಯಿದೆ ಎಂದರು.

      ರಮೇಶ ಜಾರಕಿಹೊಳಿ ಸಚಿವರು ಆಗ್ತಾರಾ ಎಂಬ ಪ್ರಶ್ನೆಗೆ, ಖಂಡಿತವಾಗಿಯೂ ರಮೇಶ ಜಾರಕಿಹೊಳಿ ಮಂತ್ರಿ ಆಗ್ತಾರೆ. ಯಾವಾಗ ಆಗ್ತಾರೆ ಅನ್ನೋದು ಮುಖ್ಯಮಂತ್ರಿ ವಿವೇಚನೆಗೆ ಬಿಟ್ಟದ್ದು. ಹಾಲಿ ಬಿಜೆಪಿ ಶಾಸಕರ‌‌ ಮತಕ್ಷೇತ್ರದಲ್ಲಿ ಆಕಾಂಕ್ಷೆಗಳು ಹೆಚ್ಚಾಗಿರುವ ವಿಚಾರ. ಹಾಲಿ ಶಾಸಕರನ್ನ ಬದಲಾಯಿಸುವ ಪ್ರಶ್ನೆಯಿಲ್ಲ. ಆಕಾಂಕ್ಷಿಗಳು ಹೆಚ್ಚಾಗಿದ್ದರೆ ಅದು ಪಕ್ಷದ ಶಕ್ತಿ. ಹಾಲಿ ಶಾಸಕರನ್ನ ಬದಲಾಯಿಸುವ ಬಗ್ಗೆ ಯಾವುದೇ ಯೋಚನೆ, ಚರ್ಚೆ ನಮ್ಮ ಮುಂದಿಲ್ಲ ಎಂದು ನಳೀನಕುಮಾರ ಕಟೀಲ್ ನುಡಿದರು.

     ಕಾಂಗ್ರೆಸ್ ನವರು ಆರ.ಎಸ.ಎಸ ಬ್ಯಾನ್ ಮಾಡಬೇಕೆಂದು ಹೇಳಿಕೆ ವಿಚಾರವಾಗಿ ಮಾತನಾಡಿ, ದೇಶದಲ್ಲಿ ಮೊದಲಿಗೆ ನಿಷೇಧ ಮಾಡಬೇಕಿರುವುದು ಕಾಂಗ್ರೆಸ್ ಪಕ್ಷ ವನ್ನು. ಈ ದೇಶದಲ್ಲಿ ಇವತ್ತು ಪಿ.ಎಫ.ಐ., ಎಸಡಿಪಿಐ ಅಂತಹ ಸಂಘಟನೆಗಳು ಆಂತರಿಕ, ಭಯೋತ್ಪಾದನೆ ಅಂತಹ ಚಟುವಟಿಕೆ ನಡೆಸಲು ಆ ಸಂಘಟನೆಗಳಿಗೆ ಶಕ್ತಿ ಕೊಟ್ಟಿದ್ದೇ ಕಾಂಗ್ರೆಸ್ ನವರು ಎಂದು ವಾಗ್ದಾಳಿ ನಡೆಸಿದರು.

   ಮಹಾತ್ಮ ಗಾಂಧಿಯವರಿಗೆ ಗೊತ್ತಿತ್ತು, ಕಾಂಗ್ರೆಸ್ ಸ್ವಾತಂತ್ರ್ಯ ನಂತರ ದೇಶದಲ್ಲಿ ಆಡಳಿತ ಮಾಡಿದ್ರೆ ಈ ದೇಶವನ್ನ ಹಾಳು ಮಾಡುತ್ತದೆ ಅಂತಾ ಸ್ವಾತಂತ್ರ್ಯ ನಂತರ ಕಾಂಗ್ರೆಸ್ ಅನ್ನ ವಿಸರ್ಜನೆ ಮಾಡಲಿ ಅಂತಾ ಹೇಳಿದ್ರು ಮಾಡಲಿಲ್ಲ ಎಂದು ಹೇಳಿದರು. ಸಿದ್ದರಾಮಣ್ಣ ಒಮ್ಮೆ ಅಧ್ಯಯನ ಮಾಡಲಿ, ಅವರ ಕಾಲಘಟ್ಟದಲ್ಲಿ ಎಷ್ಟು ಜನರ ಪಿ.ಎಫ.ಐ ಕಾರ್ಯಕರ್ತರನ್ನ ರಕ್ಷಣೆ ಮಾಡಿದ್ದಾರೆ, ಹಂತಕರನ್ನ ರಕ್ಷಣೆ ಮಾಡಿದ್ದಾರೆ. ಗೋ ಹಂತಕರನ್ನ ರಕ್ಷಣೆ ಮಾಡಿರುವ ಬಗ್ಗೆ ಅಧ್ಯಯನ ಮಾಡಲಿ ಆಗ ಅವರೇ ಹೇಳ್ತಾರೆ ಕಾಂಗ್ರೆಸ್ ಅನ್ನ‌‌ ನಿಷೇಧ ಮಾಡಲಿ ಅಂತಾ ಎಂದು ಸಿದ್ದರಾಮಯ್ಯಗೆ ಟಾಂಗ್ ನೀಡಿದರು.

       ಭಾರತ ಜೋಡೋ‌ ಮುನ್ನವೇ ಡಿಕೆಶಿ‌ ಮೇಲೆ  ಸಿಬಿಐ ದಾಳಿ ವಿಚಾರವಾಗಿ ಮಾತನಾಡಿ, ಸಿಬಿಐ, ಐಟಿ ಎಲ್ಲರ ತನಿಖೆಯನ್ನ ಮಾಡಲಿದೆ. ಇವರು ಸರಿಯಾಗಿ ಇದ್ದರೆ ಭಯಪಡುವ ಅವಶ್ಯಕತೆ ಇಲ್ಲ, ಅದಕ್ಕೆ ಉತ್ತರಕೊಡಬೇಕು. ಇವರು ಕದ್ದಿದ್ದರೆ ಭಯಪಡಬೇಕು, ಇವರು ಕದ್ದಿಲ್ಲ ಅಂದ್ರೆ ಭಯಪಡುವ ಅವಶ್ಯಕತೆ ಇಲ್ಲ ಧೈರ್ಯ ವಾಗಿ ಹೋಗಿ ಉತ್ತರ ಕೊಡಬೇಕು. ಇವರ ಕಾಲಘಟ್ಟದಲ್ಲಿ ಎಲ್ಲರ ಮೇಲೂ ತನಿಖೆ ಆಗಿದೆ. ಹಾಗಂತ ಎಲ್ಲರೂ ಹೆದರಿದರಾ. ನರೇಂದ್ರ ಮೋದಿ ಅವರನ್ನ 9 ಗಂಟೆಗಳ ಕಾಲ ತನಿಖೆ ಮಾಡಿದರು. ಇದರಲ್ಲಿ ಅಮಿಶ್ ಶಾ ಅವರನ್ನ ಜೈಲಿಗೆ ಹಾಕಿದರು. ನಾವು ಸ್ಟ್ರೈಕ್ ಮಾಡಿದೇವಾ, ಬೀದಿ ಹೋರಾಟ ಮಾಡಿದೇವಾ. ಆದ್ರೆ ಇವರ ಸಮಸ್ಯೆ ನೋಡಿ ಜೈಲಿಗೆ ಹೋಗ್ತಾರೆ ಅಂತಾದ್ರೆ, ಕಾನೂನು ಪ್ರಕಾರ ಇವರು ಮೆರವಣಿಗೆ ತಗೆಯುತ್ತಾರೆ. ಇದೊಂದು ಹೊಸ ಪ್ರಯೋಗ ಜೈಲಿಗೆ ಹೋಗುವಾಗ, ಬರುವಾಗ ಮೆರವಣಿಗೆ ಮಾಡ್ತಾರೆ. ಐಟಿ ದಾಳಿ ನಡೆದ್ರೆ ಜನ ಸೇರಿಸಿ ಗೋಳೋ ಅಂತಾ ಬೊಬ್ಬೆ ಹಾಕೋದು ಇವರು ಕಾನೂನಿಗೆ ಗೌರವ ಕೊಡುವವರಾ ಇವರು ಎಂದು ಕಾಂಗ್ರೆಸ್ ನಾಯಕರ ವಿರುದ್ದ ನಳೀನಕುಮಾರ ಕಟೀಲ್ ಕಿಡಿ ಕಾರಿದರು. 

ಸುದ್ದಿ ಓದಿ