ಪಂಚಮಸಾಲಿ ಮೀಸಲಾತಿ : ಬೆಂಗಳೂರಿನಲ್ಲಿ ಕ್ರಾಂತಿಕಾರಿ ಉಗ್ರ ಹೋರಾಟದಲ್ಲಿ 25 ಲಕ್ಷ ಜನ ಭಾಗಿ, 21ರಂದು ಹುಕ್ಕೇರಿ ಸಮಾವೇಶ, ಕೂಡಲಸಂಗಮ ಶ್ರೀ

ಪಂಚಮಸಾಲಿ ಮೀಸಲಾತಿ : ಬೆಂಗಳೂರಿನಲ್ಲಿ ಕ್ರಾಂತಿಕಾರಿ ಉಗ್ರ ಹೋರಾಟದಲ್ಲಿ 25 ಲಕ್ಷ ಜನ ಭಾಗಿ, 21ರಂದು ಹುಕ್ಕೇರಿ ಸಮಾವೇಶ, ಕೂಡಲಸಂಗಮ ಶ್ರೀ

ಬೆಳಗಾವಿ : ಬರುವ ನವ್ಹೆಂಬರ್ 2ನೇ ವಾರದಲ್ಲಿ ಬೆಂಗಳೂರಿನಲ್ಲಿ ಅಂತಿಮ ಹಂತದ ಕ್ರಾಂತಿಕಾರಿ ಉಗ್ರ ಹೋರಾಟ ನಡೆಸುವ ಚಿಂತನೆ ನಡೆಯುತ್ತಿದ್ದು, ಇಲ್ಲಿ 25 ಲಕ್ಷ ಸಮಾಜ ಬಾಂಧವರು ಸೇರಲಿದ್ದಾರೆ. ಇದರ ದಿನಾಂಕವನ್ನು ಇದೇ ದಿ. 21ರಂದು ಹುಕ್ಕೇರಿಯಲ್ಲಿ ನಡೆಯಲಿರುವ ಪಂಚಮಸಾಲಿ ಸಮುದಾಯದ ತಾಲೂಕಾ ಮಟ್ಟದ ಸಮಾವೇಶದಲ್ಲಿ ದಿನಾಂಕವನ್ನು ಘೋಷಣೆ ಮಾಡಲಾಗುತ್ತದೆ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಇಂದಿಲ್ಲಿ ಹೇಳಿದರು. 

      ಶನಿವಾರ ನಗರದ ಗಾಂಧಿ ಭವನದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬರುವ ಅಕ್ಟೋಂಬರ್ 21ರ ಒಳಗಾಗಿ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡಿ, ಇಲ್ಲವಾದಲ್ಲಿ ಮೀಸಲಾತಿ ನೀಡುವದಿಲ್ಲ ಎಂದಾದರೂ ಘೋಷಣೆ ಮಾಡಿ, ಸಮುದಾಯದ ಮೂಗಿಗೆ ತುಪ್ಪ ಸವರುವ ಕಾರ್ಯವನ್ನು ಕೈಬಿಡಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸಿದರು. ಆಯೋಗ ವರದಿ ಕುರಿತು ಒಂದುವರೆ ವರ್ಷ ಕಾದಿದ್ದು ಮುಂದೆ ಚುನಾವಣೆ ಬಂದಿದೆ. ನಮ್ಮ ಸಮಾಜಕ್ಕೆ ಅ. 21ರ ಒಳಗಾಗಿ ಸರ್ವ ಪಕ್ಷ ಸಭೆ ಕರೆದು ಮೀಸಲಾತಿ ತೀರ್ಮಾನ ಮಾಡಿ, ಕ್ರಾಂತಿಕಾರಿ ಹೋರಾಟ ಬೆಂಗಳೂರಿನಲ್ಲಿ ನಡೆಯಲಿದೆ. ಪಂಚಮಸಾಲಿ ಸಮಾಜಕ್ಕೆ ಸಿಹಿ ಸುದ್ದಿ ನೀಡಿ, ನಿಮಗೆ ರಾಜಕೀಯವಾಗಿ ಎನಾದರು ಸಮಸ್ಯೆ ಇದ್ದರೆ ನೇರವಾಗಿ ಹೇಳಿ. ಮೀಸಲಾತಿ ಕೋಡತೇವೆ ಅಥವಾ ಇಲ್ಲ ಅನ್ನುವದನ್ನು ಘೋಷಣೆ ಮಾಡಿ. ಸಮಾಜಕ್ಕೆ ಮೂಗಿಗೆ ತುಪ್ಪಾ ಹಚ್ವುವದು ಬೇಡ ಎಂದು ಕಿಡಿ ಕಾರಿದರು.   

       ಪಂಚಮಸಾಲಿ ಮೀಸಲಾತಿ ಹೋರಾಟ ಉಗ್ರವಾದ ಹೋರಾಟಕ್ಕೆ ತೀವ್ರವಾಗಿ ನಡೆಯುವ ಹಂತಕ್ಕೆ ಹೋಗಿದೆ. ಈ ಹೋರಾಟವು ಬೆಂಗಳೂರಿನಲ್ಲಿ ಬರುವ ನವ್ಹೆಂಬರ್ 2ನೇ ವಾರದಲ್ಲಿ ನಡೆಸುವ ಕುರಿತು ಚಿಂತನೆ ನಡೆಯುತ್ತಿದೆ. ಇದರಲ್ಲಿ ರಾಜ್ಯದ ಸುಮಾರು 25 ಲಕ್ಷ ಪಂಚಮಸಾಲಿ ಜನರು ಭಾಗಿಯಾಗಲಿದ್ದಾರೆ. ಹುಕ್ಕೇರಿಯಲ್ಲಿ ಇದೇ ದಿ.21ರಂದು ನಡೆಸಯುವ ತಾಲೂಕಾಮಟ್ಟದ ಪಂಚಮಸಾಲಿ ಸಮುದಾಯದ ಸಮಾವೇಶದಲ್ಲಿ ದಿನಾಂಕ ನಿಗಧಿ ಮಾಡಲಾಗುತ್ತದೆ. ಈಗಾಗಲೇ ಸರಕಾರದ ಆಯೋಗ ವರದಿಗಾಗಿ ಕಳೆದ ಒಂದುವರೆ ವರ್ಷದ ವರೆಗೆ ನಾವು ಸರಕಾರ ಸೂಚಿಸಿದಂತೆ ಕಾದು ಸುಸ್ತಾಗಿದ್ದೇವೆ. ಆದರೆ ಆಯೋಗದ ವರದಿ ಬರಲು ಒಂದುವೆರೆ ವರ್ಷ ಬೇಕಾಗುತ್ತಾ ಎನ್ನುವ ಸಂಶಯ ನಮ್ಮ ಸಮಾಜವನ್ನು ಕಾಡುತ್ತಿದೆ ಎಂದು ನುಡಿದರು.  

       ಮೊನ್ನೆ ಮೂಡಲಗಿಯಲ್ಲಿ ನಡೆದ ಪಂಚಮಸಾಲಿ ಸಮಾವೇಶದಲ್ಲಿ ಜನ ಸಾಗರ ಹರಿದು ಬಂದಿದ್ದು, ಅದೇ ರೀತಿಯಾಗಿ ಹುಕ್ಕೇರಿಯ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯದವರು ಭಾಗವಹಿಸುವಂತೆ ವಿನಂತಿಸಿಕೊಂಡರು. ಹುಕ್ಕೇರಿ ತಾಲೂಕಾಮಟ್ಟದ ಸಮಾವೇಶದಲ್ಲಿ ಸುಮಾರು 50 ಸಾವಿರ ಜನ ಸೇರುವ ಸಾಧ್ಯತೆ ಇದೆ ಎಣದು ನುಡಿದರು. ಅದರಂತೆ ಸರಕಾರ ಇಂದು ಎಸ್‍ಸಿ, ಎಸ್‍ಟಿ ಮೀಸಲಾತಿ ಹೆಚ್ಚಳ ಮಾಡಿರುವ ಸ್ವಾಗತಾರ್ಹ ಕಾರ್ಯವಾಗಿದೆ. ಅದೇ ರೀತಿ ಸರಕಾರ ಸರ್ವ ಪಕ್ಷ ಸಭೆ ಕರೆದು ಎಲ್ಲ ಜಾತಿ ಬಗ್ಗೆ ಪರಿಶೀಲನೆ ನಡೆಸಬೇಕಿತ್ತು. ನಮ್ಮ ಪಂಚಮಸಾಲಿ ಸಮುದಾಯಕ್ಕೆ ಮಾತ್ರ ಮೇಲಿಂದ ಮೇಲೆ ಮೂಗಿಗೆ ತುಪ್ಪ ಹಚ್ಚುವ ಕಾರ್ಯ ಮಾಡುತ್ತ ಬಂದಿದ್ದರಿ ಇದನ್ನು ಬಿಟ್ಟು, ಎಸ್‍ಸಿ, ಎಸ್‍ಟಿ ಮೀಸಲಾತಿ ಹೆಚ್ಚಿಸಿದ ರೀತಿಯಲ್ಲಿ ಪಂಚಮಸಾಲಿ ಸಮುದಾಯಕ್ಕೂ ಮೀಸಲಾತಿ ನೀಡಿ ಎಂದು ಒತ್ತಾಯಿಸಿದರು.  

      ಮುಖ್ಯಮಂತ್ರಿಯಾಗಿರುವ ನಿಮಗೆ ಪರಮ ಅಧಿಕಾರ ಇದೆ. ಅದನ್ನು ಬಳಸಿ ಬೇರೆ ಜಾತಿಗಳಿಗೆ ನೀಡಿದ ಹಾಗೆ ನಮಗು ಮೀಸಲಾತಿ ನೀಡಿ, ಪಂಚಮಸಾಲಿ ಮೀಸಲಾತಿ ನೀಡಲು ಇಷ್ಟೊಂದು ಮೀನಾಮೇಷ ಯಾಕೆ. ಯಾಕೆ ನೋಡತಾ ಇಲ್ಲ. ಕೊಡಲು ಆಗುತ್ತಾ ಅಥವಾ ಇಲ್ಲ ಅನ್ನೊದನ್ನು ಘೋಷಣೆ ಮಾಡಿ. ಇಲ್ಲ ಕೊಡಲು ಆಗೊಲ್ಲ ಅಂದರು ಅನ್ನು ಘೋಷಣೆ ಮಾಡಿ ಎಂದು ನುಡಿದರು. ಚುನಾವಣೆಯಲ್ಲಿ ನಿಮಗೆ ಅಧಿಕಾರ ನೀಡಲು ನಮ್ಮ ಸಮಾಜ ಕೂಡಾ ಕಾರಣ ಭೂತವಾಗಿದೆ. ನಿಮ್ಮ ಮೇಲಿನ ಸಮಾಜದ ಋಣ ತೀರಿಸಲು ಮೀಸಲಾತಿ ನೀಡಿ. ಇಲ್ಲವಾದಲ್ಲಿ ನವೆಂಬರ್ ಎರಡನೇ ವಾರದಲ್ಲಿ ಬೆಂಗಳೂರಿನಲ್ಲಿ ಈ ಕಠಿಣ ವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಇಂದಿನ ಪತ್ರಿಕಾಗೋಷ್ಠಿಯಲ್ಲಿ ರಾಜೇಂದ್ರ ಹರಕುಣ , ರಾವಸಾಹೇಬ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 


ಸುದ್ದಿ ಓದಿ