ಗಜಪಡೆಯೊಂದಿಗೆ ಬೆಳಗಾವಿಯ ಚಿರತೆ ಸೆರೆ ಹಿಡಿಯಲು ಕೊನೆಯ ಹಂತದ ಕಾರ್ಯಚರಣೆಗೆ ಇಳಿದ ಅರಣ್ಯ, ಪೊಲೀಸ ಇಲಾಖೆಗಳು

ಗಜಪಡೆಯೊಂದಿಗೆ ಬೆಳಗಾವಿಯ ಚಿರತೆ ಸೆರೆ ಹಿಡಿಯಲು ಕೊನೆಯ ಹಂತದ ಕಾರ್ಯಚರಣೆಗೆ ಇಳಿದ ಅರಣ್ಯ, ಪೊಲೀಸ ಇಲಾಖೆಗಳು

ಬೆಳಗಾವಿ, ಆ, 24 : ಕಳೆದ 20 ದಿನಗಳಿಂದ ಬೆಳಗಾವಿ ನಗರದಲ್ಲಿ ಬೀಡು ಬಿಟ್ಟಿರುವ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಹಾಗೂ ಪೊಲೀಸರ ಇಲಾಖೆಗಳು ಹರಸಾಹಸ ಪಡುತ್ತಿದ್ದರೂ ಚಾಲಕಿ ಚಿರತೆ ತಪ್ಪಿಸಿಕೊಳ್ಳುತ್ತಿದೆ. ಆದರೆ ಇಂದು ಎರಡು ಆನೆಗಳೊಂದಿಗೆ ಕೊನೆಯ ಹಂತದ ಕಾರ್ಯಾಚರಣೆ ನಡೆಸಲಾಗುತ್ತಿದೆ.


      ಕಳೆದ 20 ದಿನಗಳ ಹಿಂದೆ ಬೆಳಗಾವಿಯ ಜಾಧವ ನಗರಕ್ಕೆ ನುಗ್ಗಿದ್ದ ಚಿರತೆ ಅಲ್ಲಿ ಕಾರ್ಯ ಮಾಡುತ್ತಿದ್ದ ಕೂಲಿ ಕಾರ್ಮಿಕರ ಮೇಲೆ ದಾಳಿ ಮಾಡಿ ಅಲ್ಲಿಂದ ಓಡಿ ಹೋಗಿತ್ತು. ಬಳಿಕ ಹನುಮಾನ ನಗರ ಬಳಿ ಇರುವ ಗಾಲ್ಫ್ ಮೈದಾನದ ಬಳಿ ಅರಣ್ಯ ಪ್ರದೇಶದಂತಿರುವ ದಟ್ಟವಾದ ಗಿಡ ಮರಗಳಲ್ಲಿ ಅವಿತುಕೊಂಡಿದೆ. ಆ ಪ್ರದೇಶದಲ್ಲಿಯೇ ಬೀಡು ಬಿಟ್ಟಿರುವ ಚಾಲಾಕಿ ಚಿರತೆಯು ಅರಣ್ಯ ಹಾಗೂ ಪೊಲೀಸ ಇಲಾಖೆಯ ಕಾರ್ಯಾಚರಣೆ ಮಾಡಿದರು ಅಲ್ಲಿ ಸಿಗುತ್ತಿಲ್ಲ.‌ 


   ಕಳೆದ ಎರಡು ದಿನಗಳ ಹಿಂದಷ್ಟೇ ಹಿಂಡಲಗಾ ರಸ್ತೆಯಲ್ಲಿ ವಾಹನ ಚಾಲಕನೋರ್ವನಿಗೆ ಕಾಣಿಸಿಕೊಂಡಿತ್ತು. ಬಳಿಕ ಅರಣ್ಯ ಹಾಗೂ ಪೊಲೀಸ ಕಾರ್ಯಾಚರಣೆಗೆ ಅದು ಬಲೆಗೆ ಬಿಳದ ಹಿನ್ನೆಲೆಯಲ್ಲಿ ಅರಣ್ಯ ಸಚಿವ ಉಮೇಶ ಕತ್ತಿ ಹಾಗೂ ಅರಣ್ಯ ಇಲಾಖೆ ಅಧಿಕಾರಿ ಹರ್ಷಬಾನು ಅವರ ಮಾರ್ಗದಲ್ಲಿ ಶಿವಮೊಗ್ಗದ ಸಂಕ್ರೇಬಯಲನಿಂದ ಎರಡು ಆನೆಗಳೊಂದಿಗೆ ಬೆಳಗಾವಿ ಚಿರತೆ ಹಿಡಿಯಲು ಅರಣ್ಯ ಇಲಾಖೆಯ ವಿಶೇಷ ತಂಡವು ಸದ್ಯ‌ ಬೆಳಗಾವಿ ಚಿರತೆ ಸೆರೆ ಹಿಡಿಯಲು ಕಾರ್ಯಾಚರಣೆ ಆರಂಭಿಸಿದೆ.

ಸುದ್ದಿ ಓದಿ