ಚಳಿಗಾಲ ಅಧಿವೇಶನಕ್ಕೆ ಸಿಂಗಾರಗೊಂಡ ಬೆಳಗಾವಿ : ಜಿಲ್ಲಾಡಳಿತದ ಸಿದ್ದತೆ ಪೂರ್ಣ ದಂತದಲ್ಲಿ

ಚಳಿಗಾಲ ಅಧಿವೇಶನಕ್ಕೆ ಸಿಂಗಾರಗೊಂಡ ಬೆಳಗಾವಿ : ಜಿಲ್ಲಾಡಳಿತದ ಸಿದ್ದತೆ ಪೂರ್ಣ ದಂತದಲ್ಲಿ

ಪಾರೇಶ ಭೋಸಲೆ

ಬೆಳಗಾವಿ, ಡಿ, 11 : ಇಲ್ಲಿನ ಸುವರ್ನ ವಿಧಾನ ಸೌಧದಲ್ಲಿ ಚಳಿಗಾಲ ಅಧಿವೇಶನವು ಇದೇ ಡಿ. 13ರಿಂದ ಪ್ರಾರಂಭವಾಗಲಿದೆ. ಅಧಿವೇಶನ ಪ್ರಾರಂಭವಾಗಲು ಇನ್ನೇನು ಒಂದೇ ದಿನ ಬಾಕಿ ಇದ್ದು, ಅಧಿವೇಶನಕ್ಕೆ ಆಗಮಿಸುವ ಸಚಿವರಿಗೆ, ಶಾಸಕರಿಗೆ, ಅಧಿಕಾರಿಗಳಿಗೆ ಊಟ, ವಸತಿ ವ್ಯವಸ್ಥೆ ಜೊತೆಗೆ ಅಧಿವೇಶನ ಅಚ್ಚಕಟ್ಟಾಗಿ ನಡೆಯಲು ಬೆಳಗಾವಿ ಜಿಲ್ಲಾಡಳಿತ ಎಲ್ಲ ತಯಾರಿ ಮಾಡಿಕೊಂಡಿದ್ದು, ಸದ್ಯ ಅಧಿವೇಶನ ಸಿದ್ದತೆ ಪೂರ್ಣಗೊಂಡಂತಾಗಿದೆ. ಅದರಂತೆ ಬೆಳಗಾವಿ ನಗರದಲ್ಲಿ ಸ್ವಚ್ಚತೆಗೆ ಆದ್ಯತೆ ನೀಡಲಾಗಿದ್ದು, ಬೆಳಗಾವಿಯ ವೃತ್ತಗಳು ಈಗ ಸುಣ್ಣ, ಬಣ್ಣ, ದೀಪಾಲಂಕಾರ್ ವ್ಯವಸ್ಥೆಯಿಂದ ಕಂಗೊಳಿಸುತ್ತಿದೆ.
       ಸುವರ್ಣ ವಿಧಾನ ಸೌಧದಲ್ಲಿ ವಿಧಾನ ಮಂಡಲ ಚಳಿಗಾಲದ ಅಧಿವೇಶನ ನಡೆಯತ್ತಿರುವ ಹಿನ್ನೆಲೆಯಲ್ಲಿ ಅಧಿವೇಶನಕ್ಕೆ ಆಗಮಿಸುವ ಸಚಿವರು, ಶಾಸಕರು, ಅಧಿಕಾರಿಗಳಿಗೆ ಊಟದ ಹಾಗೂ ವಸತಿ ವ್ಯವಸ್ಥೆಯ ಸಕಲ ಸಿದ್ಧತೆಯಲ್ಲಿ ಬೆಳಗಾವಿ ಜಿಲ್ಲಾಡಳಿತ ತೊಡಗಿದೆ. ಸಿದ್ದತೆಯು ಕೊನೆಯ ಹಂತದಲ್ಲಿ ಇದೆ. ಅದರಂತೆ ಬೆಳಗಾವಿ ನಗರದಲ್ಲಿ ಕೆಲವು ಸರಕಾರಿ ಕಚೇರಿಗೆಳಿಗೆ ಸುಣ್ಣ, ಬಣ್ಣ ಮಾಡಲಾಗಿದ್ದು, ನಗರದ ಸ್ವಚ್ಚತೆಗೆ ಆದ್ಯತೆ ನೀಡಲಾಗಿದೆ.
      ಈ ಮೊದಲೆ ಸ್ಮಾರ್ಟ್ ಸಿಟಿ ಕಾಮಗಾರಿಯಿಂದ ಅರ್ಧ ಮುರ್ಧ ರಸ್ತೆಗಳ ಕಾಮಗಾರಿಗಳು ಮುಗಿದು ಜನರು ಗೋಳಾಡುವಂತೆ ಆಗಿತ್ತು. ಆದರೆ ಅಧಿವೇಶನಕ್ಕೆ ಸರಕಾರನೇ ಬೇಳಗಾವಿಯಲ್ಲಿ ಬೀಡು ಬಿಡುತ್ತಿರುವ ಹಿನ್ನೆಲೆಯಲ್ಲಿ ನಗರದ ಬಹುತೇಕ ಎಲ್ಲ ರಸ್ತೆ ಕಾಮಗಾರಿಗಳನ್ನು ಪೊರ್ಣ ಮಾಡಲಾಗಿದ್ದು, ರಸ್ತೆಗಳಿಗೆ ಬೀಳಿ ಬಣ್ಣದ ಪಟ್ಟಿ ಜೊತೆಗೆ ಮಾರ್ಕಕರ್‍ಗಳನ್ನು ಬಳಿಯಲಾಗಿದೆ. ಅದರಂತೆ ಬೆಳಗಾವಿ ನಗರದ ಪ್ರಮುಖ ರಸ್ತೆಗಳನ್ನು ಸ್ವಚ್ಚ ಹಾಗೂ ಸುಂದರ ಕಾಣುವ ಹಾಗೆ ಪಾಲಿಕೆಯ ಪೌರ ಕಾರ್ಮೀಕರು ಸ್ವಚ್ಚತೆಯಲ್ಲಿ ತೊಡಗಿದ್ದಾರೆ.
      ಅದೇ ರೀತಿಯಾಗಿ ನಗರದಲ್ಲಿ ಸಚಿವರು ಮತ್ತು ಶಾಸಕರು ಉಳಿದುಕೊಳ್ಳುವ ನಿಟ್ಟಿನಲ್ಲಿ ನಗರದ ಪ್ರಮುಖ ವಸತಿ ಗೃಹಗಳನ್ನು ಜಿಲ್ಲಾಡಳಿತ ಬುಕ್ ಮಾಡಿ ವಸತಿ ವ್ಯವಸ್ಥೆಯನ್ನು ಕಲ್ಪಿಸಿದೆ. ಅದರಂತೆ ಪೊಲೀಸ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಸೌಧದ ಸಮೀಪದಲ್ಲಿ ವಸತಿ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ. ಅದರಂತೆ ಸುಮಾರು 50 ಸಂಘ ಸಂಸ್ಥೆಗಳು ಬೇಡಿಗಳ ಈಡೇರಿಕೆಗಾಗಿ ಪ್ರತಿಭಟನೆ ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಜಿಲ್ಲಾಡಳಿತಕ್ಕೆ ಮನವಿಯನ್ನು ಸಲ್ಲಿಸಿವೆ. ಈ ಎಲ್ಲ ಪ್ರತಿಭಟನಾಕಾರರಿಗೆ ಟೆಂಟ್ ಹಾಗೂ ಬ್ಯಾರಿಕೇಡ್‍ಗಳನ್ನು ಹಾಕುವ ಮೂಲಕ ಬಂದೋಬಸ್ತ್ ಕಲ್ಪಿಸಲಾಗಿದೆ.
    ಏನೇ ಆಗಲಿ ಬೆಳಗಾವಿ ಅಧಿವೇಶನವು ಉತ್ತರ ಕರ್ನಾಟಕದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿ ಅಭಿವೃದ್ದಿಗೆ ಪೂರಕವಾಗಲಿ ಎನ್ನುವದು ಈ ಭಾಗದ ಜನರ ಬೇಡಿಕೆಯಾಗಿದೆ. ಹೊರತು ಆಟಕ್ಕ ಉಂಟು ಲೆಕ್ಕಕ್ಕೆ ಇಲ್ಲ ಅನ್ನುವ ರೀತಿ ಅಧಿವೇಶನ ಆಗಬಾರದು ಎನ್ನುವದು ಈ ಬಾಗದ ಜನರ ಒತ್ತಾಯವಾಗಿದೆ.   
ಬಾಕ್ಸ್ :
ಅಧಿವೇಶನ ಸುಗಮಕ್ಕೆ ಎಲ್ಲ ರೀತಿಯ ಬಂದೋಬಸ್ತ್ : ಡಿಸಿಪಿ ಡಾ. ಆಮ್ಟೆ
ಬೆಳಗಾವಿ : ಬೆಳಗಾವಿಯ ಸುವರ್ಣ ಸೌಧದಲ್ಲಿ ಡಿ. 13ರಿಂದ  ಅಧಿವೇಶನ ಆರಂಭವಾಗುತ್ತಿದ್ದು, ಅಧಿವೇಶನ ಸುಗಮವಾಗಿ ನಡೆಯಲು ಎಲ್ಲ ರೀತಿಯ ಬಂದೋಬಸ್ತ್ ಮಾಡಿಕೊಳ್ಳಲಾಗಿದೆ ಎಂದು ನಗರ ಪೊಲೀಸ ಉಪಾಯುಕ್ತ ಡಾ. ವಿಕ್ರಮ್ ಆಮ್ಟೆ ಅವರು ತಿಳಿಸಿದರು.
ಬೆಳಗಾವಿಯ ಸುವರ್ಣ ಸೌಧದ ಬಳಿ ಅಧಿವೇಶನ ಭದ್ರತೆಗೆ ಆಗಮಿಸುವ ಪೆÇಲೀಸರಿಗಾಗಿ ನಿರ್ಮಿಸಿರುವ ಜರ್ಮನ್ ಮಾದರಿ ಟೆಂಟ್‍ಗೆ ಶನಿವಾರ ಡಿಸಿಪಿ ಡಾ. ವಿಕ್ರಮ್ ಆಮ್ಟೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸುವ ಪೆÇಲೀಸ ಅಧಿಕಾರಿಗಳು, ಸಿಬ್ಬಂದಿಗಳ ಆರೋಗ್ಯದ ದೃಷ್ಟಿಯನ್ನು ಗಮನಕ್ಕೆ ತೆಗೆದುಕೊಂಡು ಎಲ್ಲ ರೀತಿಯ ವ್ಯವಸ್ಥೆ ಮಾಡುತ್ತಿದ್ದೇವೆ. 1500 ಪೆÇಲೀಸ್ ಸಿಬ್ಬಂದಿಗಳು, 300 ಅಧಿಕಾರಿಗಳಿಗೆ ಈ ಜರ್ಮನ್ ಮಾದರಿ ಟೆಂಟ್‍ನಲ್ಲಿ ವ್ಯವಸ್ಥೆ ಮಾಡಿದ್ದೇವೆ. ಸಿಬ್ಬಂದಿಗಳಿಗೆ ಕಡ್ಡಾಯವಾಗಿ ಆರ್‍ಟಿಪಿಸಿಆರ್ ತಪಾಸಣಾ ವರದಿ, ಎರಡು ಲಸಿಕೆ ವ್ಯಾಕ್ಸಿನ್ ಪಡೆದಿರುವ ಸರ್ಟಿಫಿಕೇಟ್ ತೋರಿಸಲು ಸೂಚಿಸಿದ್ದೇವೆ. ಬೆಡ್, ಊಟ, ಶೌಚಾಲಯ, ಸ್ನಾನ ಸೇರಿದಂತೆ ಎಲ್ಲ ರೀತಿಯ ವ್ಯವಸ್ಥೆ ಮಾಡಿದ್ದೇವೆ ಎಂದರು.
ಅಧಿವೇಶನ ವೇಳೆ ಪ್ರತಿಭಟನೆಗೆ ಸಂಬಂಧಿಸಿದಂತೆ ಈವರೆಗೆ 40 ಅರ್ಜಿಗಳು ಬಂದಿವೆ. ಪ್ರತಿಭಟನಾಕಾರರಿಗೆ ಸುವರ್ಣ ಗಾರ್ಡನ್, ಕೊಂಡಸಕೊಪ್ಪದಲ್ಲಿ ಟೆಂಟ್ ನಿರ್ಮಾಣ ಮಾಡಿದ್ದೇವೆ. ಕೋವಿಡ್ ನಿಯಮ ಪಾಲಿಸಿ ಪ್ರತಿಭಟನೆ ನಡೆಸಲು ಸೂಚನೆ ನೀಡಿದ್ದೇವೆ. ಪ್ರತಿಭಟನಾಕಾರರು 500ಕ್ಕೂ ಹೆಚ್ಚು ಜನರನ್ನ ಸೇರಿಸುವಂತಿಲ್ಲ, ಎರಡು ಲಸಿಕೆ ವ್ಯಾಕ್ಸಿನ್ ಪಡೆದಿರಬೇಕು. 72 ಗಂಟೆ ಒಳಗಿನ ಆರ್‍ಟಿಪಿಸಿಆರ್ ಕೊವೀಡ್ ತಪಾಸಣಾ ವರದಿ ಕಡ್ಡಾಯವಾಗಿ ತರಬೇಕು ಎಂದು ಸೂಚಿಸಿದ್ದೇವೆ. ಅದೇ ರೀತಿ ಪ್ರತಿಭಟನಾ ಟೆಂಟ್‍ನಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ. ಪ್ರತಿಭಟನಾಕಾರರಿಗೆ ವಾಹನಗಳ ಪಾಕಿರ್ಂಗ್ ಸೇರಿದಂತೆ ಎಲ್ಲ ರೀತಿಯ ವ್ಯವಸ್ಥೆ ಮಾಡಿದ್ದೇವೆ ಎಂದು ಡಿಸಿಪಿ ಡಾ. ವಿಕ್ರಂ ಆಮ್ಟೆ ವಿವರಿಸಿದರು.
ಬಾಕ್ಸ್ :
ಅಧಿವೇಶನಕ್ಕೆ 2 ಡೋಜ್ ಲಸಿಕೆ, ಕೊವೀಡ್ ವರದಿ ಕಡ್ಡಾಯ : ಡಿಸಿ
ಬೆಳಗಾವಿ : ಡಿಸೆಂಬರ್ 13ರಿಂದ ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ವಿಧಾನ ಮಂಡಲ ಚಳಿಗಾಲದ ಅಧಿವೇಶನ ನಡೆಯಲಿದ್ದು, ಬೆಳಗಾವಿ ಜಿಲ್ಲಾಡಳಿತ ಸಕಲ ಸಿದ್ಧತೆಯಲ್ಲಿ ತೊಡಗಿದೆ.
ಬೆಳಗಾವಿ ಅಧಿವೇಶನಕ್ಕೆ ಬರುವ ಪ್ರತಿಯೊಬ್ಬ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಚಿವರು ಸೇರಿದಂತೆ ಎಲ್ಲಾ ಸಿಬ್ಬಂದಿ ಕೋವಿಡ್ ಎರಡು ಡೋಸ್ ಲಸಿಕೆಗಳನ್ನು ಕಡ್ಡಾಯವಾಗಿ ಪಡೆದಿರಬೇಕು. ಅಷ್ಟೇ ಅಲ್ಲದೇ 72 ಗಂಟೆ ಮುಂಚಿತವಾಗಿ ಕೋವಿಡ್ ತಪಾಸಣಾ ಮಾಡಿಸಿಕೊಂಡ ಆರ್‍ಟಿಪಿಸಿಆರ್ ನೆಗೆಟಿವ್ ವರದಿ ತರುವದು ಕಡ್ಡಾಯ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ್ ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ತುರ್ತು ಸಂದರ್ಭದಲ್ಲಿ ಥ್ರೋಟ್ ಸ್ವ್ಯಾಬ್ ಪಡೆಯಲು ಬೆಳಗಾವಿ ಸುವರ್ಣ ವಿಧಾನ ಸೌಧ ಮುಂಬಾಗದಲ್ಲಿ ಬಳಿ ಆರೋಗ್ಯ ಸಿಬ್ಬಂದಿ ನಿಯೋಜಿಸಲಾಗುವುದು ಹಾಗೂ ಸುವರ್ಣ ಸೌಧದ ಪ್ರತಿ ಕೊಠಡಿಯಲ್ಲಿ ಇ ಆಫೀಸ್ ತೆರೆಯುವುದಾಗಿ ಮಾಹಿತಿ ನೀಡಿದ್ದಾರೆ.

ಸುದ್ದಿ ಓದಿ