ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆಗೆ ಬ್ರೇಕ್ ಹಾಕಿದ ಸಿಇಎನ್ ಪೊಲೀಸರು : ನಕಲಿ ಫೇಸ್ ಬುಕ್ ಖಾತೆಯ ಹುಡಗಿಯ ಸೋಗಿನಲ್ಲಿ 20 ಲಕ್ಷ ಪಡೆದವ ಅಂದರ್

ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆಗೆ ಬ್ರೇಕ್ ಹಾಕಿದ ಸಿಇಎನ್ ಪೊಲೀಸರು : ನಕಲಿ ಫೇಸ್ ಬುಕ್ ಖಾತೆಯ ಹುಡಗಿಯ ಸೋಗಿನಲ್ಲಿ 20 ಲಕ್ಷ ಪಡೆದವ ಅಂದರ್

ಬೆಳಗಾವಿ, ಜು, 28 : ಸಾಮಾಜಿಕ‌ ಜಾಲತಾಣದಲ್ಲಿ ಯುವತಿಯ ಹೆಸರು ಬಳಸಿಕೊಂಡು ನಕಲಿ ಖಾತೆಗಳಲ್ಲಿ ಸೃಷ್ಟಿಸಿ, ಯುವತಿಯೋರ್ವಳ ಪೊಟೊಗಳನ್ನು ಬಳಸಿ ಜನರಿಗೆ ಲಕ್ಷಾಂತರ ರೂಗಳ ಪಂಗನಾಮ ಹಾಕಿದ್ದ ಭೂಪನನ್ನು ಬೆಳಗಾವಿಯ ಸಿಇಎನ್ ಠಾಣೆಯ ಇನ್ಸ್ಪೆಕ್ಟರ್ ಗಡ್ಡೇಕರ್ ನೇತೃತ್ವದ  ತಂಡವು ಬಂಧಿಸುವಲ್ಲಿ ಯಶಸ್ವಿಯಾಗಿದೆ.


     ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನಾಯಿಂಗ್ಲಜ್ ಗ್ರಾಮದ  ಮಹಾಂತೇಶ್ ಮೂಡಸೆ ಎನ್ನುವ ಈ ಖದೀಮ ಬೆಳಗಾವಿಯ ಯುವತಿಯೊರ್ವಳ  ಪೋಟೋ ಬಳಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹುಡಗಿಯ ಹೆಸರಲ್ಲಿ ಖಾತೆಗಳನ್ನು ತೆಗೆದು ಕೆಲವು ಪಡ್ಡೆ ಹುಡಗರನ್ನು ತನ್ನ ಮೋಸದ ಜಾಲದಲ್ಲಿ ಬಿಳಿಸಿಕೊಂಡು ಅವರಿಂದ ಲಕ್ಷಾಂತರ ರೂ ವಸೂಲಿ ಮಾಡಿದ್ದ ಭೂಪನನ್ನು ಬೆಳಗಾವಿಯ ಸಿಇಎನ್ ಠಾಣೆಯ ಇನ್ಸ್ಪೆಕ್ಟರ್ ಬಿ.ಆರ್.ಗಡ್ಡೇಕರ ನೇತೃತ್ವದ ಪೊಲೀಸ ತಂಡವು ಬಂಧಿಸಿದೆ.

    ಬೆಳಗಾವಿ ಮೂಲದ ಸದ್ಯ ಹೊರದೇಶದಲ್ಲಿರುವ ಯುವತಿಯ ಪೋಟೊ ಬಳಸಿಕೊಂಡು ಬರೊಬ್ಬರಿ 20  ಲಕ್ಷವನ್ನು ಈತ ಎಗರಿಸಿದ್ದನು. ಬೆಳಗಾವಿಯ ಸಿಇಎನ್ ಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆ ಸೃಷ್ಟಿಸಿ ಯುವಕರಿಗೆ ವಂಚಿಸಿ ಹುಡಗಿಯ ಹೆಸರಲ್ಲಿ ಹಣವನ್ನು ತನ್ನ ಖಾತೆಗೆ  ಹಾಕಿಕೊಳ್ಳುತ್ತಿದ್ದನು. ಸಾಮಾಜಿಕ ಜಾಲತಾಣದಲ್ಲಿ ಸ್ನೇಹಾ ಎಂಬ ಹೆಸರಿನಲ್ಲಿ ನಕಲಿ ಖಾತೆಗಳನ್ನು ತಯಾರಿಸಿ ಮಾಡಿದ್ದ ಮಹಾಂತೇಶ್ ಮೂಡಸೆ ಈತನನ್ನು ಕೊನೆಗೆ ಸಿಇಎನ್ ಪೊಲೀಸರು ಖೆಡ್ಡಾಕೆ ಬಿಳಿಸುವಲ್ಲಿ ಯಶ ಕಂಡಿದ್ದಾರೆ. 

   ಮಹಾಂತೇಶ ಮೂಡಸೆ ಈತ ಪಿಎಸ್‌ಐ  ಪರೀಕ್ಷೆ ಕೂಡ ಬರೆದಿದ್ದ ಎನ್ನಲಾಗಿದೆ. ಆದರೆ ಮಹಾಂತೇಶ್ ಈತ ಕಳ್ಳ ದಾರಿಯಿಂದ ಯುವತಿ ಹೆಸರಲ್ಲಿ ಹಣ ವಸೂಲಿ ಮಾಡಿ ಗೋವಾಕ್ಕೆ ತೆರಳಿ ಮೋಜು ಮಸ್ತಿ ಮಾಡುತ್ತಿದ್ದನು.

   ಬೆಳಗಾವಿ ಮೂಲದ ಯುವತಿಯೊಬ್ಬರ ಫೇಸ್ ಬುಕ್‌ ಖಾತೆಯಲ್ಲಿನ ಪೋಟೊಗಳನ್ನ ಡೌನ್‌ಲೋಡ್ ಮಾಡಿ ಮಹಾಂತೇಶ್ ಬೆಳಗಾವಿ ನಗರದ ಯುವತಿ ಪೋಟೊ ಬಳಸಿ ನಕಲಿ ಖಾತೆ ತಯಾರಿಸಿದ್ದ ಮಾಡಿದ್ದ. ಆ ಯುವತಿ ಪೋಟೊಕ್ಕೆ ಸ್ನೇಹಾ ಹೆಸರು ಹಾಕಿ ಅಕೌಂಟ್ ಮಾಡಿದ್ದ ಕಿರಾತಕ  ಕಳೆದ ಮೂರು ವರ್ಷದ ಹಿಂದೆ ಫೇಕ್ ಐಡಿ ಮಾಡಿ 20ಲಕ್ಷ ವಸೂಲಿ ಮಾಡಿದ್ದಾನೆ.

    ಫೇಸ್‌ಬುಕ್ ಮತ್ತು ಇನ್ ಸ್ಟ್ರಾಗ್ರಾಂ ನಲ್ಲಿ ಯುವಕರೊಂದಿಗೆ ಸ್ನೇಹ ಮಾಡಿಕೊಂಡು ಯುವಕರಿಗೆ ತಾನೂ ಸ್ನೇಹಾ ಅಂತಾ ನಂಬಿಸಿ ಅವರ ನಂಬರ್ ಪಡೆಯುತ್ತಿದ್ದ ಮಹಾಂತೇಶ್. ಹೀಗೆ ನಂಬರ್ ಪಡೆದು ನಂತರ ಪೋನ್ ನಲ್ಲಿ ಮಾತನಾಡದೇ ಬರೀ ಚಾಟ್ ಮಾಡುತ್ತಿದ್ದ.ಈ ವೇಳೆ ಕೆಲವು ಪೋಟೊಗಳನ್ನ ವಾಟ್ಸಪ್ ಮಾಡುತಿದ್ದ.ಯುವತಿ ಅಂತಾ ನಂಬಿದ ಕೆಲವರಿಗೆ ಪಂಗನಾಮ ಹಾಕಿದ್ದಾನೆ.

    ಯುವತಿಯ ಸೋಗಿನಲ್ಲಿ ಹಣದ ಅವಶ್ಯಕತೆ ಇದೆ ಅಂತಾ  ಹತ್ತು, ಇಪ್ಪತ್ತು, ಐವತ್ತು ಸಾವಿರ ವರೆಗೂ ಹಣದ ಬೇಡಿಕೆ ಇಟ್ಟು ತನ್ನ ಖಾತೆಗೆ ಹಣ ವರ್ಗಾವಣೆ ಮಾಡಿಕೊಂಡು ಆ ನಂಬರ್ ಬ್ಲಾಕ್ ಮಾಡುತ್ತಿದ್ದನು. ಹೀಗೆ ಯುವತಿ ಪೋಟೊ ಹಾಕಿ ಯುವತಿ ಹೆಸರಲ್ಲಿ ತಯಾರಿಸಿಕೊಂಡಿದ್ದ ನಕಲಿ ಫೆಸ್ ಬುಕ್  ಖಾತೆಗೆ ಹದಿನೈದು ಸಾವಿರ ಪಾಲೋವರ್ಸ್ ಹೊಂದಿದ್ಸನು. 

   ತನ್ನ ಪೋಟೊ ಬೇರೆಯವರು ಬಳಸುತ್ತಿದ್ದ ವಿಚಾರ ತಿಳಿದು ಶಾಕ್ ಆಗಿದ್ದ ಬೆಳಗಾವಿಯ ಯುವತಿ ಹೊರದೇಶದಿಂದ ತನ್ನ ಪೋಟೊ ನಕಲಿ‌ ಖಾತೆಗೆ ಬಳಿಸಿಕೊಂಡಿದ್ದನು ನೋಡಿ ಶಾಕ್ ಆಗಿದ್ದಳು. ಯುವತಿ ಸ್ವತಃ ಮಹಾಂತೇಶ್‌ಗೆ ಮೆಸೇಜ್ ಮಾಡಿ ಅಕೌಂಟ್ ಡಿಲಿಟ್ ಮಾಡುವಂತೆ ಮನವಿ ಮಾಡಿದ್ದಳು.

   ಯವತಿಯ ಮನವಿಗೆ ಸ್ಪಂದಿಸದ ಮಹಾಂತೇಶನ ವಿರುದ್ಸ ಸಿಡಿದೆದ್ದು, ದಿ. 4ರಂದು ಬೆಳಗಾವಿಗೆ ಆಗಮಿಸಿ ಸಿಇಎನ್ ಪೊಲೀಸ ಠಾಣೆಗೆ ದೂರು ಸಲ್ಲಿಸಿದ್ದಳು. ದೂರು ದಾಖಲಿಸಕೊಂಡ ಸಿಇಎನ್ ಪೊಲೀಸರು ಗೋವಾದಲ್ಲಿ ಯಾರದೊಬದುಡ್ಡು ಯಲ್ಲಮ್ಮನ ಜಾತ್ರೆಯಂತೆ ಮೋಜಿನಲ್ಲಿದ್ದ ಮಹಾಂತೇಶನನ್ನು ಸಿಇಎನ್ ಪೊಲೀಸರು ಗೋವಾದಲ್ಲಿ ಬಂಧಿಸಿದ್ದಾರೆ.


ಸುದ್ದಿ ಓದಿ