ಸರಕಾರದ ವಿರುದ್ದ ಮುನಿಸಿಕೊಂಡ ರಮೇಶ ಜಾರಕಿಹೊಳಿ?, ಮತ್ತೆ ಸರಕಾರಕ್ಕೆ ಶೆಡ್ಡು ಹೊಡಿತಾರಾ? : ಮುನಿಸು ಶಮನಕ್ಕೆ ಬೆಳಗಾವಿಯಲ್ಲಿ ಅರುಣಸಿಂಗ್ ಪ್ರತೇಕ ಸಭೆಯಲ್ಲಿ ಕಸರತ್ತು

ಸರಕಾರದ ವಿರುದ್ದ ಮುನಿಸಿಕೊಂಡ ರಮೇಶ ಜಾರಕಿಹೊಳಿ?, ಮತ್ತೆ ಸರಕಾರಕ್ಕೆ ಶೆಡ್ಡು ಹೊಡಿತಾರಾ? : ಮುನಿಸು ಶಮನಕ್ಕೆ ಬೆಳಗಾವಿಯಲ್ಲಿ ಅರುಣಸಿಂಗ್ ಪ್ರತೇಕ ಸಭೆಯಲ್ಲಿ ಕಸರತ್ತು

ಪಾರೇಶ ಭೋಸಲೆ

ಬೆಳಗಾವಿ, ಅ, 17 : ಈ ಹಿಂದೆ ರಾಜ್ಯದ ಸಮ್ಮಿಶ್ರ ಸರಕಾರವನ್ನು ಪತನಗೊಳಿಸಿ ಬಿಜೆಪಿ ಅಧಿಕಾರಕ್ಕೆ ತರಲು ಮುಂಚೂಣಿ ವಹಿಸಿದ್ದ ಗೋಕಾಕ ಶಾಸಕ ರಮೇಶ ಜಾರಕಿಹೋಳಿ ಅವರು ಈಗ ಮತ್ತೆ ಬಿಜೆಪಿ‌ ಮುಖಂಡರ ವಿರುದ್ದ ಮುನಿಸಿಕೊಂಡಿದ್ದು, ಬಿಜೆಪಿ ಸರಕಾರಕ್ಕೆ ಮತ್ತೆ ಶೆಡ್ಡು ಹೊಡೆಯಲು ಸಜ್ಜಾಗಿದ್ದಾರೆ ಎನ್ನು ಮಾತು ಚರ್ಚೆಗೆ ಗ್ರಾಸ್ ವಾಗಿದ್ದು, ಈ ಹಿನ್ನೆಲೆಯಲ್ಲಿ ರಮೇಶ ಜಾರಕಿಹೊಳಿ ಅವರ ಮುನಿಸು ಶಮನಕ್ಕೆ ಯಾವದೆ ಸದ್ದಿಲ್ಲದೆ, ಯಾರಿಗು ಸುಳಿವು ನೀಡದೆ ಬೆಳಗಾವಿಗೆ ಬಂದಿದ್ದ ರಾಜ್ಯ ಬಿಜೆಪಿ ಉಸ್ತುವಾರಿ ಅರುಣಸಿಂಗ್ ಅವರು ಎಲ್ಲ ಮುಖಂಡರನ್ನು ಹೊರಗೆ ಇಟ್ಟು ರಮೇಶ ಜಾರಕಿಹೊಳಿ ಅವರೊಂದಿಗೆ ಪ್ರತೇಕ ಸಭೆ ಸಡೆಸಿ ಸಮಾಧಾನ ಪಡಿಸಲು ಕಸರತ್ತು ನಡೆಸಿದ್ದರು ಎನ್ನುವ ಅಂಶವು ಸಾರ್ವಜನಿಕರ ಸಂಶಯಕ್ಕೆ ಕಾರಣವಾಗಿದೆ.

   ಈ‌ ಹಿಂದೆ ರಾಜ್ಯದಲ್ಲಿ ಸಮ್ಮಿಶ್ರ ಸರಕಾರವನ್ನು ಪತನಗೊಳಿಸಿ ಬಿಜೆಪಿ ಅಧಿಕಾರಕ್ಕೆ ತರುವಲ್ಲಿ ಮಂಚೂಣಿಯನ್ನು ವಹಿಸಿದ್ದ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರು ಮತ್ತೆ ಬಿಜೆಪಿ ಸರಕಾರ ಮತ್ತು ಮುಖಂಡರ ಮೇಲೆ ಮುನಸಿಕೊಂಡಿದ್ದು, ರಮೇಶ ಜಾರಕಿಹೊಳಿ ಅವರ ಮುನಿಸು ಶಮನಗೊಳಿಸಲು ರಾಜ್ಯ ಬಿಜೆಪಿ ಉಸ್ತುವಾರಿ ಅರುಣಸಿಂಗ್ ಅವರು ಬೆಳಗಾವಿಯಲ್ಲಿ ಪ್ರತೇಕ ಸಭೆ ನಡೆಸುವ ಮೂಲಕ ಕಸರತ್ತು ನಡೆಸಿದ್ದಾರೆ ಎನ್ನುವ ಅನುಮಾನ  ಈಗ ಸಾರ್ವಜನಿಕರಲ್ಲಿ ವ್ಯಕ್ತವಾಗಿರುವದು ಚರ್ಚೆಗೆ ಗ್ರಾಸವಾಗಿದೆ. 

     ಈ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡು ಪಕ್ಷಗಳು ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ತರಲಾಗಿತ್ತು. ಆದರೆ ಆ ಸಮ್ಮಿಶ್ರ ಸರಕಾರದ ಕಾರ್ಯದ ಬಗ್ಗೆ ಅಸಮಾಧಾನಗೊಂಡಿದ್ದ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರು ಸೇರಿದಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಲ್ಲಿನ 17 ಶಾಸಕರು ತಮ್ಮ ಮಾತೃಪಕ್ಷ ತೋರೆದು ಬಿಜೆಪಿಗೆ ಅಧಿಕೃತವಾಗಿ ಸೇರಿಕೊಂಡಿದ್ದರು. ಆ ಸಂದರ್ಭದಲ್ಲಿ ಬಹುಮತ ಇಲ್ಲದ ಕಾರಣದ ಹಿನ್ನೆಲೆಯಲ್ಲಿ ಸಮ್ಮಿಶ್ರ ಸರಕಾರ ಪತನವಾಗಿತ್ತು. 

    ಬಳಿಕ 17 ಜನ ಶಾಸಕರು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಂಡು ವಿಧಾನ ಸಭೆಯ ಉಪಚುನಾವಣೆಯನ್ನು ಎದರಿಸಿ, ಅದರಲ್ಲಿ ರಮೇಶ ಜಾರಕಿಹೊಳಿ ಸೇರಿದಂತೆ ಬಹುತೇಕ ಎಲ್ಲ ಶಾಸಕರು ಆಯ್ಕೆಯಾಗಿದ್ದಾರು. ಬಳಿಕ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರಕಾರವನ್ನು ಅಧಿಕಾರಕ್ಕೆ ತರಲು ಮುಂಚೂನಿ ವಹಿಸಿದ್ದರು. 

     ಆದರೆ ಈಗ ಸದ್ಯ ಬಿಜೆಪಿ ಅಧಿಕಾರದಲ್ಲಿದ್ದು, ಈಗ ಮತ್ತೆ ಕೆಲವು ವಿಷಯವಾಗಿ ಶಾಸಕ ರಮೇಶ ಜಾರಕಿಹೊಳಿ ಬಿಜೆಪಿ ಮುಖಂಡರ ವಿರುದ್ದ ಮುನಿಸಿಕೊಂಡಿದ್ದು, ಆ ಮುಸಿಸು ಶಮನ ಮಾಡಲು ಬಿಜೆಪಿ ರಾಜ್ಯ ಉಸ್ತುವಾರಿ ಅರುಣಸಿಂಗ್ ಅವರು ಯಾವದೇ ಮಾಹಿತಿ ಇಲ್ಲದೆ, ಜಿಲ್ಲೆಯ ಯಾವದೇ ನಾಯಕರಿಗೆ ತಾವು ಆಗಮಿಸುವ ಬಗ್ಗೆ ಸುಳಿವು ನೀಡದೆ ನೇರವಾಗಿ ಬೆಳಗಾವಿಗೆ ಆಗಮಿಸಿ ಸರ್ಕಿಟ್  ಹೌಸದಲ್ಲಿ ರಮೇಶ ಜಾರಕಿಹೊಳಿ ಅವರೊಂದಿಗೆ ಒಂದು ಗಂಟೆಗಳ ಕಾಲ ಯಾವ ಮುಖಂಡರನ್ನು ಒಳಗೆ ಕರೆದು ಕೊಳ್ಳದೆ ಚರ್ಚೆ ನಡೆಸಿರುವ ಬಗ್ಗೆ ನಾಗರಿಕರಲ್ಲಿ ಅನೇಕ ಸಂಶಯಗಳು ಮೂಡಿದ್ದು, ಅರುಣಸಿಂಗ್ ಹಾಗೂ ರಮೇಶ ಜಾರಕಿಹೊಳಿ ಅವರು ಯಾವ ವಿಷಯ ಗಳ ಕುರಿತು ಚರ್ಚೆ ಮಾಡಿದ್ದಾರೆ ಎನ್ನುವದು ಜನರಲ್ಲಿ ಯಕ್ಷಪ್ರಶ್ನೆಯಾಗಿದೆ.

    ಆದರೆ ಅರುಣಸಿಂಗ್ ಹಾಗೂ ರಮೇಶ ಜಾರಕಿಹೊಳಿ ಅವರು ರವಿವಾರ ಸಂಜೆ ಬೆಳಗಾವಿಯಲ್ಲಿ ನಡೆಸಿದ ಚರ್ಚೆ ವೇಳೆಯಲ್ಲಿ ಜಾರಕಿಹೊಳಿ ಅವರ ಆಪ್ತಮಿತ್ರಯಾಗಿರುವ ಶಾಸಕ ಮಹೇಶ ಕುಮಠಳ್ಳಿ ಅವರನ್ನು ಕೂಡಾ ಚರ್ಚೆಗೆ ಕರೆದುಕೊಳ್ಳದೆ ಸಭೆ ನಡೆಸಿರುವದು ಹಲವಾರು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

     ಅರುಣಸಿಂಗ್ ಅವರೊಂದಿಗೆ ಒಂದು ಗಂಟೆ ಚರ್ಚೆ ನಡೆಸಿದ ಬಳಿಕ ಅಲ್ಲಿಂದ ಹೊರಟ ಶಾಸಕ ರಮೇಶ ಜಾರಕಿಹೊಳಿ ಅವರು ನೇರವಾಗಿ ಬೆಂಗಳೂರಿಗೆ ತೆರಳಿದ್ದಾರೆ. ಈ ಬೆಳವಣಿಗೆಗಳು ಸಾರ್ವಜನಿಕರ ವಲಯದಲ್ಲಿ ಹಲವಾರು ಅನುಮಾನಗಳನ್ನು ಸೃಷ್ಟಿಮಾಡಿದೆ.

   ಏನೇ ಆಗಲಿ ರಾಜ್ಯದಲ್ಲಿ ಯಾವದೇ ಸರಕಾರ ಅಧಿಕಾರಕ್ಕೆ ಬಂದರೂ ಅಥವಾ ಅಧಿಕಾರದಿಂದ ಕೆಳಗೆ ಇಳಿಯಲು ಬೆಳಗಾವಿ ಜಿಲ್ಲೆಯ ರಾಜಕಾರಣ ಪ್ರಮುಖ ಪಾತ್ರ ವಹಿಸುತ್ತದೆ. ಮತ್ತು ಸರಕಾರದ ಸೂತ್ರ ಮಾತ್ರ ಬೆಳಗಾವಿಗರ ಕೈಯಲ್ಲಿ ಇರುತ್ತದೆ ಎನ್ನುವದನ್ನು ನಾವು ಇಲ್ಲಿ ಮರೆಯುವಂತಿಲ್ಲ.


ಸುದ್ದಿ ಓದಿ