ಮಹದಾಯಿ ಆದೇಶವಾಗಿ ವರ್ಷ ಕಳೆದರು ಕಾರ್ಯ ಇಲ್ಲ : ನೆರೆ ಸಂತ್ರಸ್ತರಿಗೆ ಪರಿಹಾರ ಇಲ್ಲದ ಬಗ್ಗೆ ಸದನದಲ್ಲಿ ಪ್ರಸ್ತಾಪ : ಡಿಕೆಶಿ

ಮಹದಾಯಿ ಆದೇಶವಾಗಿ ವರ್ಷ ಕಳೆದರು ಕಾರ್ಯ ಇಲ್ಲ : ನೆರೆ ಸಂತ್ರಸ್ತರಿಗೆ ಪರಿಹಾರ ಇಲ್ಲದ ಬಗ್ಗೆ ಸದನದಲ್ಲಿ ಪ್ರಸ್ತಾಪ : ಡಿಕೆಶಿ

ಬೆಳಗಾವಿ, ಡಿ, 6 : ಮಹದಾಯಿ ಆದೇಶ ಬಂದು ವರ್ಚಗಳೆ ಕಳೆದರು ಕಾರ್ಯ ನಡೆಯುತ್ತಿಲ್ಲ. ಬೆಳಗಾವಿಯಲ್ಲಿ ಪ್ರವಾಹ ಸಂತ್ರಸ್ತರಿಗೆ ಸರಕಾರ ಸರಿಯಾಗಿ ಪರಿಹಾರ ನೀಡಿಲ್ಲ. ಈ ಹಿನ್ನೆಲೆ ರಾಯಬಾಗದ 40 ಮಹಿಳೆಯರು ಸಾಮೂಹಿಕ ಆತ್ಮಹತ್ಯೆಗೆ ಅರ್ಜಿ ನೀಡಿದ್ದಾರೆ. ಈ ಕುರಿತು ಬೆಳಗಾವಿ ಅಧಿವೇಶನದಲ್ಲಿ ಧ್ವನಿ ಎತ್ತುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಇಂದಿಲ್ಲಿ ಹೇಳಿದರು.

    ನಗರದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, ರಾಜ್ಯದಲ್ಲಿ ಬಿಜೆಪಿ ಸರಕಾರ ಬಂದ ಮೇಲೆ ಉತ್ತರ ಕರ್ನಾಟಕದ ಬಗ್ಗೆ ಕಾಳಜಿ‌ ಮಾಡಲಿಲ್ಲ. ಬೆಳಗಾವಿಯಲ್ಲಿ ಅಧಿವೇಶನ ಮಾಡಲು ಕೂಡಾ ಸರಕಾರ ನಿರಾಶಕ್ತಿ ಹೊಂದಿದೆ. ನಾವು ಬೆಳಗಾವಿಯಲ್ಲೇ ಅಧಿವೇಶ ಮಾಡಿ ಎಂದು ಒತ್ತಡ ಹಾಕಿದ್ದೇವೆ. ಯಾವದೇ ಕಾರಣಕ್ಕೆ ಬೆಂಗಳೂರಿನಲ್ಲಿ ಅಧಿವೇಶ ಬೇಡ ಎಂದಿದ್ದೇವೆ. ಅಲ್ಲಿ ಮಾಡಿದರು ನಾವು ಯಾರು ಭಾಗಿಯಾಗುವದಿಲ್ಲ ಎಂದು ಹೇಳಿದ್ದೇವೆ ಎಂದು ನುಡಿದರು. 

     ಅದರಂತೆ ಈ ಭಾಗದ ಪ್ರಮುಖ ನೀರಾವರಿ ಯೋಜನೆ ಆಗಿರುವ ಮಹದಾಯಿ ವಿಷಯದಲ್ಲಿ ಆದೇಶ ಬಂದು ವರ್ಷಗಳೆ ಕಳೆದರು ಕಾರ್ಯ ಮಾಡಲು ಆಗಿಲ್ಲ ಸರಕಾರಕ್ಕೆ ಅಂದ ಮೇಲೆ ಮಹದಾಯಿ ವಿಷಯದಲ್ಲಿ ಎನು ಮಾಡತಾರೆ ಎಂದು ಸರಕಾರದ ವಿರುದ್ದ ಹರಿಹಾಯ್ದರು.

   ಗೋವಾದಲ್ಲು ಅವರದ್ದೆ ಸರಕಾರ ಇದ್ದರು ಎರಡು ನಿಮಿಷ ಕುಳಿತು ಚರ್ಚೆ ಮಾಡಲು ಆಗಲಿಲ್ಲ ಅವರ ವರಿಷ್ಠರಿಗೆ. ರಾಜ್ಯದಲ್ಲಿ ಸಿಎಂ ಅಷ್ಟೇ ಅಲ್ಲದೆ ಬಿಜೆಪಿ ಅಸಹಾಯಕವಾಗಿದೆ ಎಂದು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.  

  ಮಹದಾಯಿ ವಿಷಯದಲ್ಲಿ ರಾಜಕಾರ ಮಾಡುವ ಬಿಜೆಪಿಗರಿಗೆ ರಾಜ್ಯದಲ್ಲಿರುವ 28 ಸಂಸದರು ಲೆಕ್ಕಕ್ಕಿಲ್ಲ. ಗೋವಾದಲ್ಲಿರುವ ಒಬ್ಬ ಸಂಸದ ಮುಖ್ಯವಾಗಿದ್ದಾರೆ ಎಂದು ದೂರಿದರು.

   ಅವರದ್ದೆ ಒಬ್ಬ ಸಂಪುಟದ ಸಚಿವ ಸಿಎಂ ಬದಲಾವಣೆ ಕುರಿತು ಮಾತನಾಡಿದ್ದಾರೆ. ಸಚಿವ ನಿರಾಣಿ ಸಿಎಂ ಆಗತಾರೆ ಎಂದು ಹೇಳುತ್ತಾರೆ ಎಂದರೆ ಎನು ಅರ್ಥ. ಸರಕಾರ ಯಾವ ಮಟ್ಟದಲ್ಲಿದೆ ಎಂದು ತಿಳಿದುಕೊಳ್ಳಬೇಕು ಎಂದರು. 

 ಯಡಿಯೂರಪ್ಪ ಅವರು ಕಾಂಗ್ರೆಸ್ ಮೇಲೆ ವಾಗ್ದಾಳಿ ವಿಚಾರವಾಗಿ‌ ಮಾತನಾಡಿದ ಅವರು ಪಾಪ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗೆ ಇಳಿಸಿದ್ದಾರೆ. ಅವರ ಕೋಪ, ತಾಪ, ಮಾನಸಿಕ ತಾಳಲಾರದೆ ಬಿಜೆಪಿ ವಿರುದ್ದ ಹೇಗೆ ಮಾತನಾಡಲು ಸಾದ್ಯ ಅದಕ್ಕೆ ಕಾಂಗ್ರೆಸ್ ಮೇಲೆ ಸಿಟ್ಟು ತೆಗಿತಾ ಇದ್ದಾರೆ ಎಂದು ನುಡಿದರು.

  ದೇಶದಲ್ಲಿಯೇ ಹೆಚ್ವು ಭ್ರಷ್ಟಾಚಾರ ರಾಜ್ಯದಲ್ಲಿ ನಡೆಯುತ್ತಿದೆ. ಅದಕ್ಕೆ ಸಾಕ್ಷಿ ಗುತ್ತಿಗೆದಾರರ ಸಂಘ 40 ಪರ್ಸೆಂಟ್ ಕಮಿಶನ್ ದೂರಿರುವದು. ಇದರ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. 

  ಅದರಂತೆ ರಮೇಶ ಜಾರಕಿಹೊಳಿ ಅವರು ಫಲಿತಾಂಶ ಬಳಿಕ ಓಪನ್ ವಾರ್ ನಡೆಯಲಿದೆ ಎನ್ನುವ ಕುರಿತು ಮಾತನಾಡಿದ ಅವರು, ಇಂತಹದ್ದು ಎಷ್ಟೊ ನೋಡಿದ್ದೇವೆ ಬಿಡಪ್ಪ ಎಂದು ನುಡಿದರು. 

    ನಮ್ಮ‌ ಕಾಂಗ್ರೆಸ್ ನಲ್ಲಿ ಯಾರು ರೆಬೆಲ್ ಅಥವಾ ಪಕ್ಷಕ್ಕೆ ಮೋಸ ಮಾಡಿದವರು ಇಲ್ಲ. ಬೆಳಗಾವಿ ಪರಿಷತ್ ಚುನಾವಣೆಯಲ್ಲಿ ಇರುವದು ಹೆಬ್ಬಾಳಕರ್ ಅವರ ಅಭ್ಯರ್ಥಿ ಅಲ್ಲ. ಅದು ಕಾಂಗ್ರೆಸ್ ಅಭ್ಯರ್ಥಿ ಯಾಗಿದೆ.  ನಮಗೆ ಇಲ್ಲಿ ಯಾರು ಎದುರಾಳಿ ಇಲ್ಲ. ನಮ್ಮ ಅಭ್ಯರ್ಥಿಗೆ ಮತ ನೀಡಿ ಆಯ್ಕೆಯಾಗಬೇಕು ಅಷ್ಟೇ ಎಂದು ಹೇಳಿದರು.

   ಅದರಂತೆ ತಾವು ತಿಹಾರ ಜೈಲಿಗೆ ಯಾಕೆ ಹೋಗಿದ್ದರು ಎಂದು ಸಚಿವ ಈಶ್ವರಪ್ಪ ಪ್ರಸ್ತಾಪವಾಗಿ ಮಾತನಾಡಿದ ಅವರು, ಅವರು ತಿಹಾರ ಜೈಲಿಗೆ ಕಳಿಸಿದರು ನಾನು ಹೋಗಿ ಬಂದೆ ಎಂದು ನುಜಿಲ್ಲಾ

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ, ರಾಜು ಸೇಠ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಸುದ್ದಿ ಓದಿ