ಸೌಧದ ಸದನದಲ್ಲಿ ಪೋಟೋ ಕದನದ ಸಾಧ್ಯತೆ : ಬಿಜೆಪಿ, ಕಾಂಗ್ರೆಸ್ ನಡುವೆ ಸಾವರ್ಕರ್ ಭಾವಚಿತ್ರ ಸಮರದ ಸುಳಿವು, ಮೌನಕ್ಕೆ ಮಾರುಹೋಗುತ್ತಾ ಜೆಡಿಎಸ್

ಸೌಧದ ಸದನದಲ್ಲಿ ಪೋಟೋ ಕದನದ ಸಾಧ್ಯತೆ : ಬಿಜೆಪಿ, ಕಾಂಗ್ರೆಸ್ ನಡುವೆ ಸಾವರ್ಕರ್ ಭಾವಚಿತ್ರ ಸಮರದ ಸುಳಿವು, ಮೌನಕ್ಕೆ ಮಾರುಹೋಗುತ್ತಾ ಜೆಡಿಎಸ್

ಪಾರೇಶ ಭೋಸಲೆ

ಬೆಳಗಾವಿ, ಡಿ, 20 : ನಿನ್ನೆಯಿಂದ ಬೆಳಗಾವಿಯಲ್ಲಿ ಆರಂಭವಾಗಿರುವ ಚಳಿಗಾಲ ಅಧಿವೇಶನದಲ್ಲಿ ವಿಧಾನ ಸಭೆಯ ಸಭಾಂಗದಲ್ಲಿ ಅನಾವರಣ ಮಾಡಲಾಗಿರುವ ಸಾವರ್ಕರ್ ಪೊಟೊ ವಿಷಯವಾಗಿ ಕಿಚ್ವು ಹೆಚ್ಚಾಗಿದ್ದು, ಇಂದು ಆಡಳಿತಾರೂಢ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ನಡುವೆ ಸಾರ್ವಕರ್ ಪೊಟೊ ಸಮರ ನಡೆಯುವ ಸಾಧ್ಯತೆಗಳು ಎದ್ದು ಕಾಣುತ್ತಿವೆ. 

     ಅಧಿವೇಶನದ ಮೊದಲ ದಿನವಾದ ಸೋಮವಾರ ದಿನ ಅಧಿವೇಶನ ಪ್ರಾರಂಭಕ್ಕೂ ಮುಂಚೆ ಸರಕಾರ ವಿಧಾನ ಸಭೆಯ ಸಭಾಂಗಣದಲ್ಲಿ ಸಾವರ್ಕರ್ ಸೇರಿದಂತೆ ಕೆಲವು ಗಣ್ಯರ ಪೊಟೊಗಳನ್ನು ಅನಾವರಣ ಮಾಡಿತ್ತು. ಆದರೆ ಸಾವರ್ಕರ್ ಅವರ ಪೊಟೊ ವಿಧಾನ ಸಭೆಯ ಸಭಾಂಗಣದಲ್ಲಿ ಹಾಕಿರುವ ವಿಷಯ ಅರಿತ ವಿರೋಧಿ ಬಣ ಕಾಂಗ್ರೆಸ್ ಪಕ್ಷವು ಸಾವರ್ಕರ್ ಪೊಟೊ ವಿರೋಧಿಸಿ ಅದರ ಜೊತೆ ನೆಹರು, ಕುವೆಂಪು, ಕನಕದಾಸ ಸೇರಿದಂತೆ ಇನ್ನೂ ಕೆಲವು ಗಣ್ಯರ ಪೊಟೊ ಸಭಾಂಗಣದಲ್ಲಿ ಹಾಕುವಂತೆ ಪಟ್ಟು ಹಿಡಿದಿದ್ದು ಅಧಿವೇಶನದ ಮೊದಲ ದಿನವೇ ಪ್ರತಿಭಟನೆಯ ದಾರಿ ಹಿಡಿದಿದೆ.

    ಸೋಮವಾರ ಬೆಳಿಗ್ಗೆ ಸುವರ್ಣ ಸೌಧದ ಮುಖ್ಯದ್ವಾರದ ಮೆಟ್ಟಿಲುಗಳ ಮೇಲೆ ಕೈಯಲ್ಲಿ ಕೆಲವು ಗಣ್ಯರ ಭಾವಚಿತ್ರಗಳನ್ನು ಹಿಡಿದುಕೊಂಡು ಸಾಂಕೇತಿಕ ಪ್ರತಿಭಟನೆ ಮಾಡಿದೆ. ಅಧಿವೇಶನದಲ್ಲಿ ಮೊದಲ ದಿನದ ಸಂತಾಪ ಸೂಚಕ ಇರುವ ಹಿನ್ನೆಲೆಯಲ್ಲಿ ತಮ್ಮ ಪ್ರತಿಭಟನೆ ಕೈಬಿಟ್ಟು ಅಧಿವೇಶನದಲ್ಲಿ ಭಾಗಿಯಾಗಿರುವ ವಿರೋಧಿ ಬಣ ಕಾಂಗ್ರೆಸ್ ನಾಯಕರು ಅಧಿವೇಶನದ ಎರಡನೇ ದಿನವಾದ ಮಂಗಳವಾರ ಸದನದಲ್ಲಿ ತಮ್ಮ ಪ್ರತಿಭಟನೆ ಮುಂದೆ ವರೆಸುವ ಸಾಧ್ಯತೆ ಹೆಚ್ವಾಗಿದೆ. 

   ಆದರೆ ಇಂದು ಸಾವರ್ಕರ್ ಪೊಟೊ ಕಿಚ್ವು ಸದನದಲ್ಲಿ ಹೆಚ್ಚಾಗುವ ಸಾಧ್ಯತೆ ಗಳಿದ್ದು, ಇದೇ ವಿಷಯವಾಗಿ ಆಡಳಿತಾರೂಢ ಬಿಜೆಪಿ ಹಾಗೂ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ನಡುವೆ ಜಟಾಪಟಿ ನಡೆಸುವ ಲಕ್ಷಣಗಳು ಹೆಚ್ಚಾಗಿವೆ. ಆದರೆ ಒಂದು ವೇಳೆ ಸದನದಲ್ಲಿ ಕಾಂಗ್ರೆಸ್ ಪ್ರತಿಭಟನೆ ದಾರಿ ಹಿಡಿದರೆ ಸರಕಾರ ಅವರನ್ನು ಯಾವ ರೀತಿಯಾಗಿ ಸಮಾಧಾನಪಡಿಸುತ್ತದೆ ಎನ್ನುವದನ್ನು ಕಾದು ನೋಡಬೇಕಾಗಿದೆ. 

    ಇವೆಲ್ಲದರ ನಡುವೆ ಎರಡು ರಾಷ್ಟ್ರೀಯ ಪಕ್ಷಗಳ ಪೊಟೊ ಸಮರದಲ್ಲಿ ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ ಕೂಡ ಪ್ರತಿಭಟನೆ ಗೆ ಇಳಿಯುತ್ತಾ ಅಥವಾ ತಟಸ್ಥ ವಾಗಿ ಉಳಿಯುತ್ತದೆ ಎನ್ನುವದನ್ನು ಕಾದು ನೋಡಬೇಕಿದೆ. 

ಸುದ್ದಿ ಓದಿ