ಬೆಳಗಾವಿಯ ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣ : ಈಶ್ವರಪ್ಪನ ವಿಚಾರಣೆ ಇಲ್ಲದೆ ಕ್ಲಿನ್ ಚಿಟ್ಸ್ ನೀಡಲಾಗಿದೆ : ಸಿಬಿಐಗೆ ನೀಡಿ ಪತ್ನಿ ಒತ್ತಾಯ
ಬೆಳಗಾವಿ, ಜು, 20 : ಹಿಂಡಲಗಾದ ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣ ಕುರಿತು ಮಾಜಿ ಸಚಿವ ಈಶ್ವರಪ್ಪ ಅವರನ್ನು ವಿಚಾರಣೆ ಮಾಡದೆ ಕ್ಲಿನ್ ಚಿಟ್ಸ್ ನೀಡಲಾಗಿದೆ. ಈ ಪ್ರಕರಣ ವನ್ನು ಸಿಬಿಐ ತನಿಖೆ ಮಾಡಬೇಕು. ಇಲ್ಲಾದರೆ ನಾವು ಕೋರ್ಟ್ ನಲ್ಲಿ ಈ ವಿಷಯವನ್ನು ಚಾಲೆಂಜ್ ಮಾಡ್ತೇವೆ ಎಂದು ಸಂತೋಷನ ಪತ್ನಿ ಜಯಶ್ರೀ ಒತ್ತಾಯಿಸಿದ್ದಾರೆ.

ಬೆಳಗಾವಿಯ ಹಿಂಡಲಗಾದ ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಮಾಜಿ ಸಚಿವ ಈಶ್ವರಪ್ಪಗೆ ಕ್ಲೀನ್ ಚಿಟ್ ವಿಚಾರವಾಗಿ ಬುಧವಾರ ಬೆಳಗಾವಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿರುವ ಅವರು, ಈಶ್ವರಪ್ಪನವರೇ ಆರೋಪಿ ಅಂತಾ ನನ್ನ ಗಂಡ ಡೆತ್ ನೋಟನಲ್ಲಿ ಬರೆದು ಇಟ್ಟಿದ್ದಾರೆ. ಸಂತೋಷ ಸಾವಿನ ನಂತರ ಮೂರರಿಂದ ನಾಲ್ಕು ತಾಸು ಪೋನ್ ಆನ್ ಇತ್ತು. ಅದರಲ್ಲಿ ಸಾಕ್ಷಿ ಇತ್ತು. ಕೊರತೆ ಹೇಗೆ ಆಗುತ್ತೆ ಎಂದು ಪ್ರಶ್ನೆ ಮಾಡಿದ್ದಾರೆ. ಹಾಗಾದ್ರೆ ಆ ಸಾಕ್ಷಿಗಳು ನಾಶ ಆದ್ವಾ ಅಥವಾ ನಾಶಾ ಮಾಡಿದಾರಾ.. ಪೊಲೀಸರು ಪ್ರಭಾವಿ ರಾಜಕಾರಣಿ ಒತ್ತಡಕ್ಕೆ ಸಿಕ್ಕು ತನಿಖೆ ತಿರುಗಿಸುತ್ತಿದ್ದಾರೆ ಎನ್ನುವ ಸಂಶಯ ವ್ಯಕ್ತವಾಗಿದೆ.
ನನ್ನ ಗಂಡ ಬರೆದ ಡೆತ್ ನೋಟ್ ಪರಿಗಣಿಸಿಬೇಕು. ನಾನು ಈಗ ನನ್ನ ಸಾವಿಗೆ ಈಶ್ವರಪ್ಪ ಅವರು ಕಾರಣ ಅಂತಾ ಡೆತ್ ನೋಟ್ ಬರೆಯುತ್ತೇವೆ ಅದನ್ನು ಪರಿಗಣಿಸುತ್ತಾರಾ. ಅವರದ್ದು ಕೈಯಲ್ಲಿ ಬರೆದಿಲ್ಲ ಅಂತಾರೆ ನಾನು ಈಗ ಕೈಯಲ್ಲಿ ಬರೆದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ, ಅದನ್ನಾದರೂ ಒಪ್ತಾರಾ ಪೊಲೀಸರು ಎಂದು ಪ್ರಶ್ನಿಸಿದ್ದಾರೆ.