ಕಬ್ಬಿನ ಬೆಲೆ 5.500 ನಿಗಧಿ ಮಾಡುವಂತೆ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಮುಂದುವರೆದ ಅನ್ನದಾತರ ಅಹೋ ರಾತ್ರಿ ಧರಣಿ, ಸರಕಾರದ ವಿರುದ್ದ ರೈತರ ಆಕ್ರೋಶ

ಕಬ್ಬಿನ ಬೆಲೆ 5.500 ನಿಗಧಿ ಮಾಡುವಂತೆ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಮುಂದುವರೆದ ಅನ್ನದಾತರ ಅಹೋ ರಾತ್ರಿ ಧರಣಿ, ಸರಕಾರದ ವಿರುದ್ದ ರೈತರ ಆಕ್ರೋಶ

ಬೆಳಗಾವಿ, ಅ, 10 : ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಪ್ರಸಕ್ತ ಸಾಲಿನಲ್ಲಿ ಕಬ್ಬು ಪೂರೈಸಿದ ರೈತರಿಗೆ ಪ್ರತಿ ಟನ್ ಕಬ್ಬಿಗೆ 5500 ರೂ, ನಿಗದಿ ಮಾಡುವಂತೆ ಹಾಗೂ ಕಬ್ಬು ಬೆಳೆಗಾರರ ಬೆಲೆ ನಿಗಧಿ ಮಾಡುವವರೆಗೆ ಕಾರ್ಖಾನೆಗಳು ಕಬ್ಬು ನುರಿಸುವ ಕೆಲಸ ಮಾಡಬಾರದು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಸೋಮವಾರ ಬೆಳಿಗ್ಗೆಯಿಂದ ಪ್ರತಿಭಟನೆ ನಡೆಸಿದ್ದು, ಬೆಳಗಾವಿಯ ಜಿಲ್ಲಾಧಿಕಾರಿ ಕಚೇರಿ ಮುಂದೆ ಅನ್ನದಾತರು ಅಹೋ ರಾತ್ರಿ ಧರಣಿಯನ್ನು ಮುಂದೆವರೆಸಿದ್ದಾರೆ.

   ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಎದುರು ಅನ್ನದಾತರು ನಡೆಸುತ್ತಿರುವ ಅಹೋ ರಾತ್ರಿ ಧರಣಿಯ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬಿಗಿಯಾದ ಪೊಲೀಸ ಬಂದೋಬಸ್ತ್ ಮಾಡಲಾಗಿದೆ. ರೈತರು ಸರಕಾರದ ವಿರುದ್ದ ಘೋಷಣೆ ಕೂಗುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸುದ್ದಿ ಓದಿ