ಮಹಾರಾಷ್ಟ್ರದ ಇಬ್ಬರು ಸಚಿವರು ಬೆಳಗಾವಿ ಜಿಲ್ಲೆ ಪ್ರವೇಶಿಸದಂತೆ ನಿಷೇಧ ಮಾಡಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಆದೇಶ
ಬೆಳಗಾವಿ, ಡಿ, 5 : ಒಂದಿಲ್ಲ ಒಂದು ಗಡಿ ಕ್ಯಾತೆಯನ್ನು ತೆಗೆದು ಬೆಳಗಾವಿಯಲ್ಲಿ ಶಾಂತಿ ಹಾಗೂ ನೆಮ್ಮದಿಯಿಂದ ವಾಸಿಸುತ್ತಿರುವ ಮುಗ್ದ ಮರಾಠಿಗರಲ್ಲಿ ಗಡಿ ವಿಷಯದ ವಿಷ ಬೀಜ ಬಿತ್ತಲು ಬೆಳಗಾವಿಗೆ ಮಂಗಳವಾರ ಆಗಮಿಸಲಿದ್ದ ಮಹಾರಾಷ್ಟ್ರ ಇಬ್ಬರು ಸಚಿವರು ರಾಜ್ಯದ ಗಡಿಯನ್ನು ಪ್ರವೇಶ ಮಾಡದಂತೆ ಅವರ ಆಗಮನವನ್ನು ಬೆಳಗಾವಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ನಿಷೇಧ ಮಾಡಿ ಆದೇಶ ಹೊರಡಿಸಿದ್ದಾರೆ.
ಹೌದು ಓದುಗರೇ ಕರ್ನಾಟಕದಲ್ಲಿ ಚುನಾವಣೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಶಾಂತಿ ಸಹಬಾಳ್ವೇಯಿಂದ ಕನ್ನಡಿಗರೊಂದಿಗೆ ಬಾಳುತ್ತಿರುವ ಬೆಳಗಾವಿಯ ಮುಗ್ದ ಮರಾಠಿಗರಲ್ಲಿ ಗಡಿ ವಿಷಯದ ಬಗ್ಗೆ ಚರ್ಚೆಯ ನೆಪದಲ್ಲಿ ಮಹಾರಾಷ್ಟ್ರ ಇಬ್ಬರು ಸಚಿವರು ಮಂಗಳವಾರ ದಿ. 6ರಂದು ಬೆಳಗಾವಿ ಆಗಮಿಸುವದಾಗಿ ತಿಳಿಸಿದ್ದರು. ಆದರೆ ಇದಕ್ಕೆ ಕರ್ನಾಟಕ ಸರಕಾರದ ಪರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಸಮಯದಲ್ಲಿ ಮಹಾರಾಷ್ಟ್ರದ ಸಚಿವರು ಬೆಳಗಾವಿಗೆ ಆಗಮಿಸುವದು ಸೂಕ್ತ ಅಲ್ಲ ಎನ್ನುವ ಸಂದೇಶವನ್ನು ನೀಡಿದ್ದರು.
ಆದರೆ ಇದನ್ನು ಲೆಕ್ಕಿಸದೆ ಮಹಾರಾಷ್ಟ್ರದ ಇಬ್ಬರು ಸಚಿವರು ತಾವು ಬೆಳಗಾವಿಗೆ ಬಂದು ಇಲ್ಲಿನ ನಾಡದ್ರೋಹಿ ಎಮ್‍ಇಎಸ್ ಮುಖಂಡರ ಜೊತೆ ಚರ್ಚೆ ನಡೆಸಲು ಬಂದೇ ಬರುವದಾಗಿ ಹೇಳುವ ಮೂಲಕ ಮೊಂಡುತನವನ್ನು ಪ್ರ ರ್ಶನ ಮಾಡಿದ್ದರು. ಆದರೆ ಈ ಬಗ್ಗೆ ಎಚ್ಚೆತ್ತ ಸರಕಾರ ಮತ್ತು ಬೆಳಗಾವಿ ಜಿಲ್ಲಾಡಳಿತ ಮಹಾ ಸಚಿವರು ಬೆಳಗಾವಿಗೆ ಬಂದರೆ ಕಠೀಣ ಕ್ರಮಕೈಗೊಳ್ಳುವದಾಗಿ ಹೇಳಿತ್ತು. ಇದನ್ನು ಮನಗಂಡ ಮಹಾರಾಷ್ಟ್ದರದ ಇಬ್ಬರು ಸಚಿವರು ತಮ್ಮ ವರಸೆಯನ್ನು ಬದಲಿಸಲು ನಿರ್ಧರಿಸಿದ್ದರು ಎನ್ನುವಷ್ಟರಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಮಹಾರಾಷ್ಟ್ರ ಇಬ್ಬರು ಸಚಿವರನ್ನು ಬೆಳಗಾವಿ ಜಿಲ್ಲೆಗೆ ಆಗಮಿಸದಂತೆ ನಿಷೇಧ ಮಾಡಿ ಆದೇಶ ಮಾಡಿದ್ದಾರೆ.