ಬೆಳಗಲಿ ಪಟ್ಟಣ ಪಂಚಾಯಿತಿ ಕಾಂಗ್ರೆಸ್ ಪಕ್ಷ ವಿಜಯೋತ್ಸವ
ಮಹಾಲಿಂಗಪುರ 31: ಮುಧೋಳ್ ತಾಲೂಕಿನ ಸಮೀಪದ ಬೆಳಗಲಿ ಪಟ್ಟಣ ಪಂಚಾಯಿತಿಗೆ ಕಳೆದ ಚುನಾವಣೆಯಲ್ಲಿ ಮತದಾರರು ನಿಚ್ಚಳ ಬಹುಮತ ನೀಡಿ ಭಾಜಪ ಪಕ್ಷಕ್ಕೆ ಆಡಳಿತ ಚುಕ್ಕಾಣಿ ನೀಡಿದ್ದರು. ಈ ಬಾರಿ ಕಾಂಗ್ರೆಸ್ ಪಕ್ಷ ಹೆಚ್ಚಿನ ಸ್ಥಾನಗಳೊಂದಿಗೆ ಮೇಲುಗೈ ಸಾಧಿಸಿ ಆಡಳಿತ ಹಿಡಿಯುವತ್ತ ವಿಜಯೋತ್ಸವ ಆಚರಿಸುತ್ತಿದೆ.
ಕಳೆದ ಚುನಾವಣೆಯಲ್ಲಿ ಭಾಜಪ ಪಕ್ಷೇತರರ ಸಹಕಾರದೊಂದಿಗೆ ಒಟ್ಟು 13 ಸದಸ್ಯರನ್ನೊಳಗೊಂಡು ಸರಳ ಬಹುಮತದೊಂದಿಗೆ ಬೆಳಗಲಿ ಪ.ಪಂಚಾಯಿತಿಯಲ್ಲಿ ತನ್ನ ಅಧಿಪತ್ಯ ಸ್ಥಾಪಿಸಿತ್ತು. ಈ ಬಾರಿ ಭಾಜಪ ಪಕ್ಷ ಚುನಾವಣೆ ಘೋಷಣೆಯಾದ ಆರಂಭದಲ್ಲಿ ವಾರ್ಡ್ ನಂಬರ್ 1 ರ ಸಿದ್ದುಗೌಡ. ರಾಯಗೌಡ. ಪಾಟೀಲ್ ಅವರ ಅವಿರೋಧ ಆಯ್ಕೆ ಸೇರಿ ಒಟ್ಟು 05 ಸ್ಥಾನಗಳಿಗೆ ಮಾತ್ರ ತೃಪ್ತಿಪಟ್ಟುಕೊಂಡಿದೆ.
ಈ ಚುನಾವಣೆಯಲ್ಲಿಯೂ ಪಕ್ಷೇತರರು 5 ಸ್ಥಾನಗಳನ್ನು ಪಡೆದುಕೊಂಡಿದ್ದು ಕೆಲ ಮೂಲಗಳ ಪ್ರಕಾರ ತಲಾ ಪಕ್ಷೇತರರು ಕಾಂಗ್ರೆಸ್ ಹಾಗೂ ಬಿಜೆಪಿಯನ್ನು ಬೆಂಬಲಿಸಲೀದ್ದಾರೆಂದೂ ಮತ್ತು ಉಳಿದ ಮೂವರು ಯಾವ ಪಕ್ಷವನ್ನು ಬೆಂಬಲಿಸುತ್ತಾರೆ ಎಂಬುವುದೂ ಯಕ್ಷ ಪ್ರಶ್ನೆಯಾಗಿದೆ. ಇದರಲ್ಲಿ ಕಟು ಸತ್ಯವೆಂದರೆ ಬೆಳಗಲಿ ಪಟ್ಟಣ ಪಂಚಾಯತ್ ಪಕ್ಷೇತರರನ್ನು ಅವಲಂಬಿಸಿ ಒಟ್ಟಾರೆ ಫಲಿತಾಂಶ ಸಮಬಲದ ಸಂಖ್ಯಾಬಲ ಮೇಲ್ನೋಟಕ್ಕೆ ತೋರುತ್ತಿದೆ.
ಅಧಿಕಾರದ ಚುಕ್ಕಾಣಿ ಹಿಡಿಯಬೇಕಾದರೆ ಪಕ್ಷೇತರರ ಮನವೊಲಿಸುವುದು ಅನಿವಾರ್ಯ. ಕಾಂಗ್ರೆಸ್ ಮತ್ತು ಭಾಜಪಾ ನಾಯಕರು ಬೆಳಗಲಿ ಪಟ್ಟಣದಲ್ಲಿ ಬಿರುಸಿನ ವಿದ್ಯಮಾನಕ್ಕೆ ಸಾಕ್ಷಿಯಾಗಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ 2ನೇ ವಾರ್ಡ್ ದ್ರಾಕ್ಷಾಯಿಣಿ ಮಹಾದೇವ ಮುರನಾಳ-177, ವಾರ್ಡ 10 ಗೌರವ.ಸಂಗಪ್ಪ. ಅಮಾತಿ 449, ವಾರ್ಡ್ 11 ಅನಿತಾ. ಮಲ್ಲಪ್ಪ. ಮಲವಾಡಿ 449, ವಾರ್ಡ್ 13 ಮುಬಾರಕ ಮಲಿಕಸಾಬ ಅತ್ತಾರ 603, ವಾರ್ಡ್ 14 ಸಹನಾ ಸಿದ್ದು ಸಾಂಗ್ಲಿಕರ್ 461, ವಾರ್ಡ್ 16 ರೇಣುಕಾ ಯಮನಪ್ಪ ಬಾಗಲಿ 421, ವಾರ್ಡ್ 17 ನೀಲಕಂಠ (ಕಾಂತು) ತಮ್ಮಣ್ಣಪ್ಪ ಸೈದಾಪುರ್ 265, ವಾರ್ಡ್ 18 ಮುತ್ತಪ್ಪ ಅಲ್ಲಪ್ಪ ಸಣ್ಣಹಟ್ಟಿ 243 ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ.
ಬಿಜೆಪಿ ಪಕ್ಷದಿಂದ ವಾರ್ಡ್ 01. ಸಿದ್ದುಗೌಡ. ರಾಯಗೌಡ. ಪಾಟೀಲ್ ಅವಿರೋಧ ಆಯ್ಕೆ, ವಾರ್ಡ್ 3 ಸಾವಿತ್ರಿ. ಸಂಗಪ್ಪ. ರಾಮದುರ್ಗ 407, ವಾರ್ಡ್ 5 ಭೀಮಪ್ಪ. ದುರ್ಗಪ್ಪ. ಹೊಸ್ಮನಿ 432, ವಾರ್ಡ್ 12 ಕಾಶವ್ವ. ಬಸವರಾಜ. ಪುರಾಣಿಕ 301, ವಾರ್ಡ್8 ರೂಪಾ. ಸದಾಶಿವ. ಹೊಸಟ್ಟಿ 260 ಪಡೆದು ಆಯ್ಕೆಯಾಗಿದ್ದಾರೆ.
ಪಕ್ಷೇತರರು ವಾರ್ಡ್ 04 ಪ್ರವೀಣ. (ಗೌಡಪ್ಪ) ದುಂಡಪ್ಪ. ಬರಮನಿ- 569, ವಾರ್ಡ್6 ಮುತ್ತಪ್ಪ ತ. ಕುಂಬಾಳಿ- 390, ಮುತ್ತಪ್ಪ ಹ. ನಾಯಕ-436, ಸದಾಶಿವ ಸಂಕ್ರಟ್ಟಿ -446, ಪ್ರವೀಣಗೌಡ ಅಪ್ಪನಗೌಡ ಪಾಟೀಲ್-330 ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿಗಳು ಈ ಮೂಲಕ ತಿಳಿಸಿದ್ದಾರೆ.