ಕಾಲ ಮಿಂಚುವ ಮೊದಲೇ ನೀವು ಸಾಧಕರಾಗಿ: ಡಾ. ಹೊಸಮನಿ

ಕಾಲ ಮಿಂಚುವ ಮೊದಲೇ ನೀವು ಸಾಧಕರಾಗಿ: ಡಾ. ಹೊಸಮನಿ


ಕೊಲ್ಹಾರ 23: ಇದು ನಮ್ಮ ಶಾಲೆ ಎಂಬ ಅಭಿಮಾನ ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಬರಬೇಕು. ಚಂಚಲ ಮನಸ್ಸನ್ನು ಹಿಡಿದಿಟ್ಟು ಕಾಲ ಮಿಂಚುವ ಮೊದಲೇ ನೀವು ಸಾಧಕರಾಗಿ ಮಿಂಚಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ವಿಭಾಗದ ಉಪನಿರ್ದೇಶಕರಾದ ಡಾ. ಚಂದ್ರಶೇಖರ ಹೊಸಮನಿ ಹೇಳಿದರು. 

ಸರ್ಕಾರಿ ಪದವಿ ಪೂರ್ವ ಕಾಲೇಜು, ಕೂಡಗಿಯಲ್ಲಿ ನಡೆದ 2025- 26 ನೇ ಸಾಲಿನ ದ್ವಿತೀಯ ಪಿಯುಸಿ ದ್ವಿತೀಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು ವಿವೇಕ ಶಾಲಿಗಳಾದವರು ಎಂದು ಕೂಡಾ ಜೀವನದಲ್ಲಿ ವ್ಯಥೆಪಡುವುದಿಲ್ಲ. ಆಪತ್ಕಾಲ ಬಂದಾಗ ಅವರು ಧೈರ್ಯ ಕಳೆದುಕೊಳ್ಳುವುದಿಲ್ಲ ಕಷ್ಟ ಬಂದಾಗ ಅವುಗಳನ್ನು ಅಷ್ಟೇ ವಿವೇಕ ಚಿತ್ತದಿಂದ ಅದನ್ನು ಎದುರಿಸುವ ಶಕ್ತಿ ಸಾಮರ್ಥ್ಯ ಹೊಂದಿರುತ್ತಾರೆ ಎಂದರು.  

ಡಿಡಿಪಿಯು ಕಚೇರಿಯ ಅಧಿಕಾರಿ ಪ್ರಕಾಶ ಗೊಂಗಡಿ ಮಾತನಾಡಿ ಶಿಸ್ತು ಇತರರ ಮೇಲೆ ಹೇರುವ ಧರ್ಮದ ಸಂಗತಿಯಲ್ಲ ಅದನ್ನು ನಮ್ಮ ಜೀವನದಲ್ಲಿ ನಾವೇ ಹಳವಡಿಸಿಕೊಳ್ಳುವಂತದ್ದು ಬದುಕಿಗೆ ಶಿಸ್ತು ಗೌರವ ಭಾವನೆಯನ್ನು ಹೆಚ್ಚಿಸುತ್ತದೆ ಕೂಡಗಿಯ ಈ ಕಾಲೇಜು ಹಲವಾರು ಕಾರ್ಯಕ್ರಮಗಳ ಮೂಲಕ ತನ್ನದೇ ಆದ ಹೆಸರನ್ನು ಪಡೆದುಕೊಂಡಿದೆ ಇಂತಹ ಕಾಲೇಜಿನಲ್ಲಿ ಘನ ಸರಕಾರ ಕೊಡಮಾಡುವ ರಾಜ್ಯ ಪ್ರಶಸ್ತಿ ಪಡೆದಂತಹ ಉತ್ತಮ ಉಪನ್ಯಾಸಕರಿದ್ದಾರೆ ಇಂತಹ ಕಾಲೇಜಿನ ಘನತೆ ಗೌರವ ಉಳಿಸಬೇಕಾದದ್ದು ನಿಮ್ಮ ಪ್ರಮುಖ ಜವಾಬ್ದಾರಿಯಾಗಿದೆ ಎಂದರು. 

ಇದೇ ಸಂದರ್ಭದಲ್ಲಿ ಸಹಕಾರಿ ಸಂಘಗಳ ನೀರೀಕ್ಷಕ ವಿಜಯಕುಮಾರ ಪಿ ನಾಯಕ ರವರು 2025- 26 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ತಮ್ಮ ತಂದೆಯವರಾದ ಪುಂಡಲೀಕ ನಾಯಕ ರವರ ಸ್ಮರಣಾರ್ಥ ಒಂದು ಲಕ್ಷ ರೂಪಾಯಿಗಳನ್ನು ಠೇವಣಿ ಇಟ್ಟು ಅದರಿಂದ ಬರುವ ಬಡ್ಡಿ ಹಣವನ್ನು ಪ್ರತಿವರ್ಷ ಪ್ರಥಮ ಬಂದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಕೊಡುವಂತೆ ಜಿಲ್ಲಾ ಉಪ ನಿರ್ದೇಶಕರಿಗೆ ಚೆಕ್ ಒದಗಿಸಿದರು. 

ಕಾರ್ಯಕ್ರಮದಲ್ಲಿ ಖುಷಾಬ್ ಲಮಾಣಿ, ಕೆ. ಎ ಉಪ್ಪಾರ, ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಹುಸೇನಬಿ ಮಾಶ್ಯಾಳ, ಕಾಶಿಬಾಯಿ ಉಳ್ಳಾಗಡ್ಡಿ ಮಹಮ್ಮದ್ ಆರಿಫ್ ತಾಳಿಕೋಟಿ, ರಾಜೇಂದ್ರ ದೇಸಾಯಿ, ಸಿದ್ಧಲಿಂಗ ಪೂಜಾರಿ, ಮಹಾಂತೇಶ ಕನ್ನೂರ, ಬಸವರಾಜ ಜಾಲವಾದಿ, ಇತರರು ಉಪಸ್ಥಿತರಿದ್ದರು. 


ಸುದ್ದಿ ಓದಿ