ಬಸವೇಶ್ವರ ಜಗತ್ತಿನ ಮಹಾನ್ ದಾರ್ಶನಿಕ: ಶಿವರಾಜ ಪಾಟೀಲ್
ಯಲಬುರ್ಗಾ 08: ಬಸವೇಶ್ವರ ಈ ಜಗತ್ತು ಕಂಡ ಮಹಾನ್ ದಾರ್ಶನಿಕನಾಗಿದ್ದು ಅವರು ಹಾಕಿಕೊಟ್ಟ ಮಾರ್ಗದಲ್ಲಿ ತಮ್ಮ ಜನರು ಜೀವನ ಸಾಗಿಸುತ್ತಿಲ್ಲ ಇದರಿಂದ ಇಂದು ಸಮಾಜದಲ್ಲಿ ಕಲುಶಿತ ವಾತಾವರಣ ನಿರ್ಮಾಣವಾಗಿ ಜಾತಿ-ಜಾತಿ ನಡುವೆ ಜಗಳಗಳು ನಡೆಯುತ್ತಿವೆ ಎಂದು ಯುವ ಮುಖಂಡ ಶಿವರಾಜಗೌಡ ಸಿ.ಪೋಲಿಸ್ ಪಾಟೀಲ್ ಹೇಳಿದರು.
ಅವರು ತಾಲೂಕಿನ ಕರಮುಡಿ ಗ್ರಾಮದಲ್ಲಿ ಯೋಗಾನಂದ ಟ್ರಸ್ಟ್ ಕಮೀಟಿಯವರು ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಇಂದು ನಾಡಿನಲ್ಲಿ ನಕಲಿ ಬಸವ ತತ್ವ ಅಭಿಮಾನಿಗಳು ಬಸವಣ್ಣ ಹೆಸರಿನಲ್ಲಿ ಉಸಿರಾಡಿ ಬಸವಣ್ಣನಿಗೆ ವಂಚನೆ ಮಾಡುತ್ತಿದ್ದಾರೆ ಇಂತರಿಗೆ ಸಮಾಜ ನಿಗಾ ಇಡಬೇಕು ಎಂದರು.
ಸಮಾಜ ಸೇವಕ ಶಾಮೀಬಸಾಬ ಮುಲ್ಲಾ ಮಾತನಾಡಿ ಬಸವಣ್ಣನವರು ತಮ್ಮ ಜೀವಿತಾ ಅವಧಿಯಲ್ಲಿ ಜಾತ್ಯಾತೀತ ವರ್ಣಭೇದ ಅಸ್ಪಶ್ಯತೆ ವಿರುದ್ಧ ಸಮರ ಸಾರಿದರು. ಅಂತಹ ಮಹಾನ್ ವ್ಯಕ್ತಿಗಳನ್ನು ಕೇವಲ ವರ್ಷಕ್ಕೊಮ್ಮೆ ನೆನೆದರೇ ಸಾಲದು. ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಸಾಗಿದರೇ ಮಾತ್ರ ಸ್ವಾಸ್ತ್ಯ ಸಮಾಜ ಸಾಧ್ಯ ಎಂದರು ಈ ಸಂದರ್ಭದಲ್ಲಿ ಯುವ ಮುಖಂಡ ಭಿಮಣ್ಣ ಹವಳೆ, ಶಾಮೀಬಸಾಬ ಮುಲ್ಲಾ, ರಂಗಪ್ಪ ಹವಳೆ, ಪರಸಪ್ಪ ಲಮಾಣಿ, ಭೀಮಣ್ಣ ಬಂಡಿ, ಲಿಂಗರಾಜ ಉಳ್ಳಾಗಡ್ಡಿ, ಗ್ರಾ.ಪಂ. ಸದಸ್ರಯ ಪರಸಪ್ಪ ಪಲ್ಲೇದ, ಯುವ ಮುಖಂಡ ಹುಚ್ಚೇರೇಶ ಲಮಾಣಿ, ಇನ್ನಿತರರು ಉಪಸ್ಥಿತರಿದ್ದರು.