ಎಲಬುರ್ಗ

ಅಭಿವೃದ್ಧಿಯೇ ನನ್ನ ಮಾನದಂಡ ಜನರ ಆಶೀರ್ವಾದವೇ ಶ್ರೀರಕ್ಷೆಯಾಗಿದೆ : ಬಸವರಾಜ ರಾಯರೆಡ್ಡಿ

ಅಭಿವೃದ್ಧಿಯೇ ನನ್ನ ಮಾನದಂಡ ಜನರ ಆಶೀರ್ವಾದವೇ ಶ್ರೀರಕ್ಷೆಯಾಗಿದೆ : ಬಸವರಾಜ ರಾಯರೆಡ್ಡಿ

ಯಲಬುರ್ಗಾ ಮೇ 29 : ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ 135 ಶಾಸಕರ ಗೆಲುವಿನ ಹಿಂದೆ ಪಕ್ಷದ ಕಾರ್ಯಕರ್ತರ ಕೊಡುಗೆ ಅಪಾರ. ಯಲಬುರ್ಗಾ 63-ಯಲಬುರ್ಗಾ ವಿಧಾನ ಸಭೆ ಚುನಾವಣೆ ಅಭ್ಯರ್ಥಿಯಾಗಿ ನನ್ನನ್ನು ಅತ್ಯಂತ ಬಹುಮತಗಳಿಂದ ಗೆಲ್ಲಿಸುವ ಮೂಲಕ ಶಾಸಕರನಾಗಿ  ಸ್ಥಾನ ಅಲಂಕರಿಸಲು ದುಡಿದ ಎಲ್ಲಾ ಕಾರ್ಯಕರ್ತರು ಹಾಗೂ ಬೆಂಬಲಿಗರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಶಾಸಕ ಬಸವರಾಜ ರಾಯರೆಡ್ಡಿ ಹೇಳಿದರು.  

ಪಟ್ಟಣದ ಬ್ಲಾಕ್ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಸೋಮುವಾರ ನಡೆದ ಕಾರ್ಯಕರ್ತರ ಅಭಿನಂದನಾ ಸಭೆ ಉದ್ದೇಶಿಸಿ ಅವರು ಮಾತನಾಡಿದರು.  

ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ಅತೀ ಹೆಚ್ಚು ಚುನಾವಣೆಯಲ್ಲಿ ಮಲ್ಲಿಕಾರ್ಜುನ  ಖರ್ಗೆ ಅವರನ್ನು ಬಿಟ್ಟು ನಂತರ ನಾನೆ ಅತಿ ಹೆಚ್ಚು  ಚುನಾವಣೆಯಲ್ಲಿ ಸ್ಪರ್ಧಿಸಿ  ಗೆದ್ದಿದ್ದೇನೆ.  ನನಗೆ ಚುನಾವಣೆ ಏನು  ಹೊಸದಲ್ಲ. ಮಂತ್ರಿಗಿರಿ ಸಿಗಲಿಲ್ಲವೆಂದು ಯಾರು ನನ್ನ ಅಭಿಮಾನಿಗಳು ನಿರಾಸೆಯಾಗದ್ದಿರಿ. ಮಂತ್ರಿಗಿರಿ ಇಲ್ಲದಿದ್ದರು, ಈ ಕ್ಷೇತ್ರದಲ್ಲಿ ನೀರೀಕ್ಷೆ ಮೀರಿ ಕೆಲಸವನ್ನು ಮಾಡುತ್ತೇನೆ  ಎಂದು  ತಮ್ಮ ಅಭಿಮಾನಿಗಳಿಗೆ, ಬೆಂಬಲಿಗರಿಗೆ ವಿಶ್ವಾಸ ವ್ಯಕ್ತಪಡಿಸಿದರು.  

ಚುನಾವಣೆಯಲ್ಲಿ ಯಾರು ನನ್ನ ವಿರುದ್ಧವಾಗಿ   ಸ್ಪರ್ಧಿಸಿ ನಿಂತು  ಹಾರಿಸಿ ಬಂದಿದ್ದಾರೆ. ಅವರು ಮತ್ತೆ ನನ್ನ ವಿರುದ್ಧ ಚುನಾವಣೆಗೆ ಸ್ಪರ್ಧೆ ಮಾಡಿರುವುದು ಇತಿಹಾಸನೇ ಇಲ್ಲ ಎಂದು ವ್ಯಂಗ್ಯ ಮಾಡಿದರು.  

ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ್ ಉಳ್ಳಾಗಡ್ಡಿ, ಹನುಮಂತಗೌಡ ಪಾಟೀಲ್, ಎ.ಜಿ.ಭಾವಿಮಾನಿ, ವೀರನಗೌಡ ಪೋ.ಪಾಟೀಲ್, ಕೇರಬಸಪ್ಪ ನಡಗುಂದಿ, ಬಿ ಎಂ ಶಿರೂರ್, ಸಂಗಣ್ಣ ತೆಂಗಿನಕಾಯಿ, ಡಾ.ಶಿವನಗೌಡ ದಾನರೆಡ್ಡಿ, ಶರಣಪ್ಪ ಗಾಂಜಿ,  ಈಶ್ವರ್ ಅಟಮಾಳಗಿ, ಎಂ ಎನ್ ನದಾಫ್, ಡಾ. ಶರಣಪ್ಪ ಕೊಪ್ಪಳ, ರೈಮನಸಾಬ್ ನಾಯಕ್,  ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ಸಾವಿತ್ರಿ ಗೊಲ್ಲರ, ಡಾ. ನಂದಿತಾ ದಾನರೆಡ್ಡಿ, ಶರಣಮ್ಮ ಅರಕೇರಿ, ಜಯಶ್ರೀ ಕಂದಕೂರು  ಸೇರಿ ಪಕ್ಷದ ಕಾರ್ಯಕರ್ತರು ಇದ್ದರು. 


ಸುದ್ದಿ ಓದಿ