ಮಹಲಿಂಗಪುರ

ಬಸವರಾಜ ರಾಯರ ಜನ್ಮದಿನ; ಉಚಿತ ಆರೋಗ್ಯ ತಪಾಸಣಾ ಶಿಬಿರ

ಬಸವರಾಜ ರಾಯರ ಜನ್ಮದಿನ; ಉಚಿತ ಆರೋಗ್ಯ ತಪಾಸಣಾ ಶಿಬಿರ

ಲೋಕದರ್ಶನ ವರದಿ 

ಮಹಾಲಿಂಗಪುರ 15: ಸ್ಥಳೀಯ ಪುರಸಭಾ ಮಾಜಿ ಅಧ್ಯಕ್ಷ ಬಸವರಾಜ ರಾಯರ ಅವರ ಜನ್ಮ ದಿನದ ಅಂಗವಾಗಿ ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಅವರ ನೇತೃತ್ವದಲ್ಲಿ ಸ್ಥಳೀಯ ಸಾಧು ನಿರಂಜನ ಸಮುದಾಯ ಭವನದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಜರುಗಿತು. 

ಜಯಸಿಂಗಪುರದ ಪಯೋಸ್ ಆಸ್ಪತ್ರೆ ಮತ್ತು ಅಥಣಿಯ ಐ ಕೇರ್ ಆಸ್ಪತ್ರೆಯ ವೈದ್ಯರು ಬಿಪಿಎಲ್ ಕಾರ್ಡ್‌ ಹೊಂದಿದ ನೂರಾರು ರೋಗಿಗಳಿಗೆ ಹೃದಯ, ಬೆನ್ನು, ಮೊಣಕಾಲು, ಮೂತ್ರ ಮತ್ತು ಕಣ್ಣು ಮುಂತಾದ ಖಾಯಿಲೆಗಳ ಉಚಿತ ತಪಾಸಣೆ ಮತ್ತು ಉಚಿತ ಓಷಧಿ ವಿತರಣೆ ಮಾಡಿದರು. 

ಬಸವರಾಜ ರಾಯರ ಓಷಧ ವಿತರಿಸುವ ಮೂಲಕ ಶಿಬಿರ ಉದ್ಘಾಟಿಸಿದರು. ಅರ್ಬನ್ ಬ್ಯಾಂಕ್ ನಿರ್ದೇಶಕ ಅಶೋಕ ಅಂಗಡಿ, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಮಹಾಲಿಂಗ ಮಾಳಿ, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನುಮಂತ ಬಂಡಿವಡ್ಡರ, ಮುಖಂಡರಾದ ಮಹಾದೇವ ಕಡಬಲ್ಲವರ, ಲಕ್ಕಪ್ಪ ಭಜಂತ್ರಿ, ಡಾ.ಸಾರಿಕಾ ಪಾಟೀಲ, ಡಾ.ಕುಲಕರ್ಣಿ ಇತರರಿದ್ದರು. 


ಸುದ್ದಿ ಓದಿ