ಎಲಬುರ್ಗ

ಬದಲಾಗುತ್ತಿರುವ ವಾತಾವರಣಕ್ಕೆ ತಕ್ಕಂತೆ ರೈತರು ಬದಲಾಗಬೇಕು: ಬಸವರಾಜ ಬೊಮ್ಮನಾಳ

ಬದಲಾಗುತ್ತಿರುವ ವಾತಾವರಣಕ್ಕೆ ತಕ್ಕಂತೆ ರೈತರು ಬದಲಾಗಬೇಕು: ಬಸವರಾಜ ಬೊಮ್ಮನಾಳ

ಯಲಬುರ್ಗಾ ಡಿ ೨೬ : ತಾಲೂಕು ರೈತರು ಬದಲಾವಣೆ ಬಯಸಬೇಕು ಬದಲಾಗುತ್ತಿರುವ ವಾತಾವರಣಕ್ಕೆ ತಕ್ಕಂತೆ ರೈತರು ಕೂಡ ತಮ್ಮ ವ್ಯವಸಾಯದ ರೀತಿ ನೀತಿಯು ಬದಲಾಗಬೇಕು ಇಲ್ಲಿನ ರೈತರು ಕೃಷಿ ಮಾಡುವ ಬಗ್ಗೆ ಸಂಪೂರ್ಣವಾಗಿ ತಿಳುವಳಿಕೆ ಇಲ್ಲದಿರುವುದರಿಂದ ನಷ್ಟಕ್ಕೊಳಗಾಗುತ್ತಿದ್ದಾರೆ ಎಂದು ಯುವ ಮುಖಂಡ ಬಸವರಾಜ ಬೊಮ್ಮನಾಳ ಹೇಳಿದರು.

ತಾಲೂಕಿನ ಕುಡಗುಂಟಿ ಗ್ರಾಮದಲ್ಲಿ ರೈತ ಸಂಘದ ಗ್ರಾಮ ಘಟಕದ ಆಶ್ರಯದಲ್ಲಿ ಹಮ್ಮಿಕೊಂಡ ಮಾಜಿ ಪ್ರಧಾನಿ ಚೌಧರಿ ಚರಣಸಿಂಗ್ ಜನ್ಮ ದಿನಾಚರಣೆ ಅಂಗವಾಗಿ ನಡೆದ ರಾಷ್ಟಿçÃಯ ರೈತ ದಿನಾಚರಣೆ ಕಾರ್ಯಕ್ರದಲ್ಲಿ ಭಾಗವಹಿಸಿ ಮಾತನಾಡಿ ತಾಲೂಕಿನ ರೈತರಿಗೆ ಕೃಷಿ ಆಧುನಿಕ ಚಟುವಟಿಕೆಗಳ ಬಗ್ಗೆ ಅರಿವು ಇಲ್ಲದೆ ನಷ್ಟಕ್ಕೊಳಗಾಗುತ್ತಿದ್ದಾರೆ ಅವರಿಗೆ ನೂತನ ಕೃಷಿ ತಂತ್ರಜ್ಷಾನದ ಬಗ್ಗೆ ಅರಿವು ಮೂಡಿಸುತ್ತಿರುವುದು ಒಂದು ಒಳ್ಳೆಯ ಸಂದೇಶವಾಗಲಿದೆ ಎಂದು ಹೇಳಿದರು.

ರೈತರು ದೇಶದ ಬೆನ್ನೆಲುಬು ದೇಶದ ಜನಸಂಖ್ಯೆಯಲ್ಲಿ ರೈತರು ಶೇ ೬೮ರಷ್ಟಿದ್ದಾರೆ. ರೈತರು ಆರ್ಥಿಕ ಪರಿಸ್ಥಿತಿ ಸುಧಾರಿಸಿದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಭಾರತ ಕೃಷಿ ಪ್ರಧಾನ ದೇಶವಾಗಿದ್ದು, ರೈತರು ಯಾವುದೇ ಫಲಾಪೇಕ್ಷೆ ಇಲ್ಲದೆ ಸೇವೆ ಸಲ್ಲಿಸುತ್ತಿದ್ದಾರೆ, ಎಂದು ಸ್ಮರಿಸಿದರು.

ದೇಶವು ಸಂಪೂರ್ಣವಾಗಿ ಕೃಷಿ ಅವಲಂಬಿಸಿದ್ದು, ಸರ್ಕಾರಗಳು ರೈತಪರ ಧೋರಣೆ ತಳೆಯಬೇಕು. ರೈತರ ಬದುಕು ಹಸನಾಗಬೇಕು. ಕೃಷಿ ಉತ್ಪನ್ನಗಳಿಗೆ ಸಮರ್ಪಕ ಬೆಲೆ ಸಿಗಬೇಕು. ದೇಶವು ಸಮಗ್ರವಾಗಿ ಬಡತನದಿಂದ ಹೊರ ಬಂದರೆ ರೈತರಿಗೆ ಲಾಭವಾಗುವುದೆಂದು  ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ರೈತ ಸಂಘದ ಗ್ರಾಮ ಘಟಕದ ಅಧ್ಯಕ್ಷ ಪ್ರಭುಗೌಡ ಪಾಟೀಲ್ ಅಧ್ಯಕ್ಷತೆ ವಹಿಸಿದರು. ರೈತ ಮುಖಂಡರಾದ ರಾಮಣ್ಣ ಚಿಲವಾಡಗಿ, ದೇವಪ್ಪ ಲಗಳೂರು, ದಳಪತಿ ಶಂಕರ ಪಾಟೀಲ್, ರುದ್ರಪ್ಪ ಚಲವಾದಿ, ಉಮೇಶ ಹರಿಜನ, ಶರಣಪ್ಪ ಮಡಿವಾಳರ, ಕರಿಬಸಯ್ಯ ಹಿರೇಮಠ, ನಾಗಯ್ಯ ಹಿರೇಮಠ ಸೇರಿ ಮತ್ತಿತರರು ಇದ್ದರು.

ಸುದ್ದಿ ಓದಿ