ಬಸವರಾಜ ಬೊಮ್ಮಾಯಿ ಗೆಲುವು ನಿಶ್ಚಿತ: ಪ್ರಕಾಶ ಮಹಾಜನಶೆಟ್ಟರ
ಶಿರಹಟ್ಟಿ 16: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಕೇವಲ ತಾತ್ಪೂರ್ತಿಕವಾಗಿದ್ದು, ತಾಯಂದಿರಿಗೆ ಗೊತ್ತಾಗಿದೆ. ದೇಶದ ಭದ್ರತೆಗೆ ನಾಡಿನ ಜನತೆ ಪಣ ತೊಟ್ಟು ನಿಂತಿದ್ದಾರೆ ಎಂದು ಮಾಜಿ ಜಿಪಂ ಸದಸ್ಯ ಪ್ರಕಾಶ ಮಹಾಜನ ಶೆಟ್ಟರ ಹೇಳಿದರು.
ಮತದಾನ ಮುಗಿದ ನಂತರ ಶಿರಹಟ್ಟಿ ಮತ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಗ್ರಾಮೀಣ ಪ್ರದೇಶಗಳಲ್ಲಿ ಸಂಚರಿಸಿ ರಣತೂರ ಗ್ರಾಮದಲ್ಲಿ ಭಾರತಿಯ ಜನತಾ ಪಕ್ಷದ ಕಾರ್ಯಕರ್ತರೂಂದಿಗೆ, ಮಾದ್ಯಮದವರ ಜೊತೆ ಮಾತಾನಾಡಿ, ಮತ್ತೆ ನರೇಂದ್ರ ಮೋದಿ ಪ್ರಧಾನಿಯಾಗುವದರಲ್ಲಿ ಯಾವ ಸಂದೇಹವಿಲ್ಲ, ಬಸವರಾಜ ಬೊಮ್ಮಾಯಿಯವರ ಗೆಲುವು ನಿಶ್ಚಿತ ಸುಮಾರು 1 ಲಕ್ಷಕ್ಕೂ ಅಧಿಕ ಮತಗಳಿಂದ ಅವರು ಗೆಲ್ಲುವುದು ಶತಸಿದ್ಧ ಎಂದು ವಿಶ್ವಾಸ ವ್ಯಕ್ತ ಪಡಿಸಿದರು,
ಈ ಸಂದರ್ಭದಲ್ಲಿ ರೈತ ಮೋರ್ಚಾ ಪ್ರದಾನ ಕಾರ್ಯದರ್ಶಿ ವೀರಣ್ಣ ಅಂಗಡಿ, ಗ್ರಾಮ ಪಂಚಾಯತ ಮಾಜಿ ಅದ್ಯಕ್ಷ ಅಶೋಕ ಬಳ್ಳಾರಿ, ಶೀವಯೋಗಿ ನಿರ್ವಾಣ ಶಟ್ಟರ, ಮಲ್ಲಿಕಾರ್ಜುನ ಪ್ಯಾಟಿ, ವಿಠೂಬ ಬಾರ್ಗವ ಗದಗಿನ, ಪರಶು ವಡವಿ, ನಿಂಗಪ್ಪ ಕಮ್ಮಾರ, ಬಸಪ್ಪ ಪ್ಯಾಟಿ, ಶಿವಯೋಗಿ ಬಳ್ಳಾರಿ, ಯಲ್ಲಪ್ಪ ಹೂಗಾರ, ಸಂಜು ಗೋಪಾಳಿ, ಅಜ್ಜಪ್ಪ ಛಬ್ಬಿ, ಮಲ್ಲನಗೌಡ ಪಾಟೀಲ, ಮುದಕಪ್ಪ ಕಮ್ಮಾರ, ಲಕ್ಷ್ಮಣ ಮರಾಠೆ, ವಿಶ್ವನಾಥ ಕಮ್ಮಾರ, ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.