ಗ್ರಾ.ಪಂ ಸರ್ವಾಂಗೀಣ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಿ ಮಾಜಿ ಶಾಸಕ: ಬಸವರಾಜ ರಾಯರೆಡ್ಡಿ
ಯಲಬುರ್ಗಾ ಡಿಸೆಂಬರ್.೦೫: ತಾಲೂಕಿನ ಗ್ರಾಮ ಪಂಚಾಯಿತಿಯ ಸರ್ವಾಂಗೀಣ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಿ ಗ್ರಾ.ಪಂ. ಹಿಡಿಯಲ್ಲು ತಾವೆಲ್ಲರು ಶ್ರಮ ವಹಿಸಿ ದುಡಿಯ ಬೇಕು ಎಂದು ಮಾಜಿ ಸಚಿವ ಹಾಗೂ ಶಾಸಕ ಬಸವರಾಜ ರಾಯರೆಡ್ಡಿ ತಿಳಿಸಿದರು.
ಗ್ರಾಪಂ ಚುನಾವಣೆ ಹಿನ್ನಲೆ ಇಲ್ಲಿಯ ಬ್ಲಾಕ್ ಕಾಂಗ್ರೇಸ್ ಕಛೇರಿಯಲ್ಲಿ ಶನಿವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿ, ಈ ಹಿಂದೆ ಶಾಸಕರಾಗಿದ್ದ ಸಂದರ್ಭದಲ್ಲಿ ತಾಲೂಕಿನಲ್ಲಿ ಸಾಕಷ್ಟು ಅಭಿವೃದ್ದಿಪರ ಕೆಲಸಗಳು ಆಗಿದ್ದಾವೆ. ಆದರೆ ಮೂರು ವರ್ಷವಾದರೂ ತಾಲೂಕಿನಲ್ಲಿ ಅಭಿವೃದ್ದಿಗಳು ಕಂಡಿಲ್ಲ. ಬಿಜೆಪಿಯವರು ಸುಳ್ಳು ಹೇಳುವ ಮೂಲಕ ಜನರನ್ನು ದಾರಿ ತಪ್ಪಿಸುವಂತಾ ಕೆಲಸ ಮಾಡುತ್ತಿದ್ದಾರೆ. ಪಕ್ಷದ ಅಭಿಮಾನ ಇಟ್ಟುಕೊಂಡು ಗ್ರಾಮದ ಅಭಿವೃದ್ದಿಗಾಗಿ ಸ್ಪರ್ಧೆ ಮಾಡಿ, ಅವರ ಗೆಲುವಿಗಾಗಿ ಶ್ರಮಿಸುವ ಮೂಲಕ ಅಧಿಕಾರಕ್ಕೆ ಬನ್ನಿ ಎಂದರು.
ನಮ್ಮ ದೇಶದಲ್ಲಿ ಮತ್ತು ರಾಜ್ಯದಲ್ಲಿ ಇವತ್ತು ರಾಜಕೀಯ ವ್ಯವಸ್ಥೆ ಹದಗೆಟ್ಟು ಹೋಗಿದೆ. ಇದಕ್ಕೆ ರಾಜಕಾರಣಿ ಆದವರು ನಾವು ಕಾರಣ. ಒಂದು ಪಕ್ಷದಿಂದ ಚುನಾಯಿತಗೊಂಡ ಶಾಸಕರನ್ನು ಖರೀಸುವ ವ್ಯವಸ್ಥೆಗೆ ಬಂದು ನಿಂತಿದ್ದೆ ಎಂದರೆ, ನಿಜಕ್ಕೂ ನಾಚಿಕೆವಾಗುತ್ತಿದೆ. ಉತ್ತಮ ನಡತೆಯುಳ್ಳವ ವ್ಯಕ್ತಿಗಳನ್ನು ಗ್ರಾಪಂ ಚುನಾವಣೆಗೆ ನಿಲ್ಲಿಸುವ ಮೂಲಕ ಗೆಲುವಿಗೆ ಶ್ರಮಿಸುವಂತೆ ನಾವು ಮಾಡಬೇಕು ಎಂದು ಸಲಹೆ ನೀಡಿದರು.
ಬ್ಲಾಕ್ ಕಾಂಗ್ರೇಸ್ ಪಕ್ಷದ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಜಿಪಂ ಮಾಜಿ ಸದಸ್ಯರಾದ ಯಂಕಣ್ಣ ಯರಾಶಿ, ಕೆರಿಬಸಪ್ಪ ನಿಡಗುಂದಿ ಮಾತನಾಡಿದರು. ಇದೇ ಸಂದರ್ಭದಲ್ಲಿ ತಾಲೂಕಿನ ವಿವಿಧ ಗ್ರಾಮಗಳ ನೂರಾರು ಕಾರ್ಯಕರ್ತರು ಬಿಜೆಪಿ ಪಕ್ಷ ತೊರೆದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಅವರ ಸಮ್ಮುಖದಲ್ಲಿ ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಸಮಾರಂಭದಲ್ಲಿ ಕೂಕನೂರು ಬ್ಲಾಕ್ ಕಾಂಗ್ರೇಸ್ ಪಕ್ಷದ ಅಧ್ಯಕ್ಷ ಹನಮಂತಗೌಡ ಪಾಟೀಲ್, ಬಿ.ಎಂ.ಶಿರೂರು, ಮಹೇಶ ಹಳ್ಳಿ, ಜಯಶ್ರೀ ಕಂದಕೂರು, ಜಯಶ್ರೀ ಅರಕೇರಿ, ಮಹಾಂತೇಶ ಗಾಣಿಗೇರ, ರಾಮಣ್ಣ ಪ್ರಭಣ್ಣನವರ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.