ಕಥೆ ಮತ್ತು ವಿಶೇಷ ಲೇಖನಗಳು

ಬಾಗೇವಾಡಿಯ ಕೀರ್ತಿ ಹೆಚ್ಚಿಸಿದ ಬಸವಣ್ಣ

ಬಾಗೇವಾಡಿಯ  ಕೀರ್ತಿ   ಹೆಚ್ಚಿಸಿದ ಬಸವಣ್ಣ

ಡಾ. ನಿರ್ಮಲಾ ಬಟ್ಟಲ, ಬೆಳಗಾವಿ 

''ಕ್ಷೇತ್ರ ಪರಿಚಯ- ಬಸವನ ಬಾಗೇವಾಡಿ

ತಾ. ಬಸವನ ಬಾಗೇವಾಡಿ  ಜಿ. ವಿಜಯಪುರ

"ಕಲ್ಯಾಣವೆಂಬ ಪ್ರಣತೆಯಲ್ಲಿ

ಭಕ್ತಿರಸವೆಂಬ ತೈಲವನೆರೆದು 

ಆಚಾರವೆಂಬ ಬತ್ತಿಯಲ್ಲಿ

ಬಸವಣ್ಣನೆಂಬ ಜ್ಯೋತಿಯ ಮುಟ್ಟಿಸಲು

ತೊಳಗಿ ಬೆಳಗುತ್ತಿದರ್ುದಯ್ಯ ಶಿವನ ಪ್ರಕಾಶ"

ಅಲ್ಲಮಪ್ರಭು  ಕೂಡಲ ಸಂಗಮದಲ್ಲಿ ಕುಡಿಯೋಡೆದು , ಕಲ್ಯಾಣದಲ್ಲಿ ಹೂ ಹಣ್ಣುಗಳನ್ನು ನೀಡಿದ ಬಸವಣ್ಣನವರು ಜನಿಸಿದ ಬಾಗೇವಾಡಿಯಲ್ಲಿ ಶ್ರಾವಣ ಮೂರನೇ  ಸೋಮವಾರ ಭಕ್ತಿಭಾವದಿಂದ ಕೂಡಿದ ಅದ್ಧೂರಿಯಾದ ಜಾತ್ರೆ ನಡೆಯುತ್ತದೆ. ಮೂರು ದಿನಗಳವರೆಗೆ ನಡೆಯುವ ಜಾತ್ರೆಯ ಮೊದಲನೆಯ ದಿನ ಮುಂಜಾನೆ 10 ಘಂಟೆಗೆ ಬಸವೇಶ್ವರ ದೇವರ ಪಲ್ಲಕ್ಕಿಯು ದೇವಸ್ಥಾನದಿಂದ ವಾದ್ಯ ಮೇಳದೊಡನೆ ಹೊರಟು ಮಾದನಕೆರೆ, ಚೆಂಗಳವ್ವಾ, ಈ ಸ್ಥಳಗಳಿಗೆ ಹೋಗಿ 12 ಘಂಟೆಗೆ ಹೋರಿಮಟ್ಟಿ ಗುಡ್ಡಕ್ಕೆ ದರ್ಶನ ಕೊಡುವುದು. 

ಅಲ್ಲಿ ಹಾಡು ಭಜನೆಗಳು ನಡೆದು ನುಡಿ ಹೇಳಲಾಗುವುದು. ಬಳಿಕ ಆ ಪಲ್ಲಕ್ಕಿ ಉತ್ಸವವು ಬಸವನಹಟ್ಟಿ ಗುಡಿಗೆ ಬಂದು ಅಲ್ಲಿಂದ ಬುತ್ತಿ ಬಸವಣ್ಣನ ಗುಡಿಗೆ ಬರುವುದು. ಬುತ್ತಿ ಬಸವಣ್ಣನ ಗುಡಿಗೆ ಬಸವಣ್ಣನ ಕಳಸ ಕೊಟ್ಟರಶೇಟ್ಟಿ ಅವರ ಮನೆಯಿಂದ ಬರುವುದು ಕಳಸದೊಂದಿಗೆ ತಂದ ಬುತ್ತಿಯ ಪ್ರಸಾದವನ್ನು ಎಲ್ಲರಿಗೂ ವಿತರಿಸಲಾಗುವುದು. ಬಳಿಕ ಕಳಸ ಪಲ್ಲಕ್ಕಿ ಉತ್ಸವವು ಮರಳಿ ಸಂಜೆಯ 6 ಘಂಟೆಗೆ 'ಕಂಬಿಕಟ್ಟೆ'ಯನ್ನು ತಲುಪುವುದು. ಗ್ರಾಮ ಸೀಮೆಗಳಲ್ಲಿಯ ಈ ಉತ್ಸವ ಸಂಚಾರಕ್ಕೆ 'ಕ್ಷೇತ್ರಭಂದೋತ್ಸವ' ಎನ್ನುವರು. ಕಂಬಿಕಟ್ಟೆಯಿಂದ ದೇವರ ಪಲ್ಲಕ್ಕಿಯನ್ನು ವಿಶೇಷ ವಾದ್ಯ ವೈಭವದೂಡನೆ ಮೆರವಣಿಗೆಯಲ್ಲಿ ದೇವಸ್ಥಾನಕ್ಕೆ ಬರಮಾಡಿಕೊಳ್ಳುತ್ತಾರೆ. ರಾತ್ರಿ ಆಗಸದಲ್ಲಿ ಚಿತ್ತಾಕರ್ಷಕ ಮದ್ದು ಸುಡುವ ಕಾರ್ಯಕ್ರಮ ನಡೆಯುವುದು ರಾತ್ರಿ 9 ಘಂಟೆಯಿಂದ ಬೆಳಗಿನವರೆಗೆ ದೇವಾಲಯದಲ್ಲಿ ಭಜನೆಯೊಡನೆ ಪಲ್ಲಕ್ಕಿ ಸೇವೆ ನಡೆದು ಬೆಳಗಿನಲ್ಲಿ ಮಳೆ ಬೆಳೆಗಳ ನುಡಿ ಆಗುವುದು. 

ಎರಡನೇ ದಿನ ಮಂಗಳವಾರ ಮುಂಜಾನೆ ಲಾವಣಿ ಹಾಡುಗಳು, ಮಧ್ಯಾನದಲ್ಲಿ ವಿಶೇಷ ಕುಸ್ತಿಗಳು ನಡೆಯುದು. ಮೂರನೇ ದಿನ ಬುಧವಾರ ಮುಂಜಾನೆ ಕಸರತ್ತಿನ ಕೆಲಸಗಳು, ಮಧ್ಯಾನ ಕುಸ್ತಿ ರಾತ್ರಿ ಬಯಲಾಟಗಳು ನಡೆಯುವುದು.

ಕ್ಷೇತ್ರದ ಇತಿಹಾಸ: ಈ ಕ್ಷೇತ್ರವು ಪುರಾಣ ಇತಿಹಾಸಗಳಿಂದ 1500 ವರ್ಷಗಳಿಗಿಂತ ಹಿಂದಿನದೆಂದು ತಿಳಿದು ಬರುತ್ತದೆ. ಬಾಗೇವಾಡಿಗೆ ಮೊದಲು 'ವೃತ್ತೇಂದ್ರಪುರ' ಎಂಬ ಹೆಸರಿತ್ತೆಂಬುದು ಇಲ್ಲಿ ಜನಜನಿತವಾದ ಚೆನ್ನಮ್ಮನ ಕಥೆಯಿಂದ  ತಿಳಿದುಬರುತ್ತದೆ. ಪ್ರೌಢರಾಯನ ಕಾವ್ಯದ 21ನೇಯ ಸಂಧಿಯಲ್ಲಿ ಚೆನ್ನಮ್ಮನ ಕಥೆ ಬರುತ್ತದೆ. ಚೆನ್ನಮ್ಮನಿಂದಾಗಿ   ವೃತ್ತೇಂದ್ರಪುರವು ಬಾಗೇವಾಡಿ ಎಂಬ ಹೆಸರಾಯಿತು. ಎಂಬುದು ಗೊತ್ತಾಗುತ್ತದೆ. "ಬಾಗೇವಾಡಿ ಎಂಬುದು ಬಾಲೆರ ಪಟ್ಟಣ ಮೇಲೆ ಚನ್ನಮ್ಮನ ಅರಮನೆ ಬಾಗಿಲದಾಗ ಬಾಗಿ ನಿಂದಾನ ಬಸವಣ್ಣ" ಎಂಬ ಜನಪದ ಹಾಡಿನಲ್ಲಿ ಬಾಗೋಡಿಯ ಮುಂದೆ  ಬಾಗೇವಾಡಿ ಎಂದು ಹೆಸರಾಗಿದೆ. ಪ್ರಾಚೀನ ಕಾಲಗಳಲ್ಲಿ ಶಾಸನಗಳಲ್ಲಿ "ಬಾಗವಾಡಿ" ಎಂಬ ಹೆಸರೆ ಉಪಯೋಗಿಸಲ್ಪಟ್ಟಿದ್ದೆ.               

ಹರಿಹರ ಕವಿ -'ಅಗ್ರಹಾರ ಬಾಗವಾಡಿ'

ಸೋಮನಾಥ  'ಸಣ್ಣ ಇಂಗಳೇಶ್ವರ ಬಾಗವಾಡಿ'

ಭೀಮ ಕವಿ-'ಇಂಗಳೇಶ್ವರ ಬಾಗವಾಡಿ'

ಷಡಕ್ಷರಿ ಕವಿ-' ತಿಂಗಳೇಶ್ವರ ಬಾಗವಾಡಿ'

ಎಂದು ಕರೆದು ತಮ್ಮ ಕಾವ್ಯಗಳಲ್ಲಿ ಉಲ್ಲೇಖಿಸಿದ್ದಾರೆ. ಬಾಗವಾಡಿ ಕ್ರಮೇಣ ಬಾಗೇವಾಡಿಯಾಗಿ ಬಳಕೆಯಲ್ಲಿ ಬಂದಿದೆ ಪುರಾಣ ಕಾಲದಲ್ಲಿ ಬಾಗೇವಾಡಿಯು "ತದರ್ೆವಾಡಿ ನಾಡಿನಲ್ಲಿ ಪಾಶುಪತ ಬ್ರಾಹ್ಮಣರ ಹೆಸರಾಂತ ಅಗ್ರಹಾರವಾಗಿತ್ತು. ಕನರ್ಾಟಕ ಕಾಶಿಪುರಂ" ಜನಿಸಿದ ಇಂಗಳೇಶ್ವರ ಮಹಿಸುರಪುರಂ" ಮಣಿಂಗವಳಿ (ಮನಗೂಳಿ)  'ಜಗದ್ವಿನಿತ' ಎನಿಸಿದ ಮುತ್ತಗಿ ಇವುಗಳ ಮಧ್ಯದಲ್ಲಿ ಬಾಗವಾಡಿಯು ಅಗ್ರಹಾರ ಚೂಡಾಮಣಿ ಎಂಬ ಕೀತರ್ಿಗೆ ಪಾತ್ರವಾಗಿತ್ತು ಅದರಲ್ಲಿ 500 ಜನ ವಿದ್ಯಾವಂತ ಪಂಡಿತ ಬ್ರಾಹ್ಮಣರು ಇದ್ದರು. ಪಾಶುಪತ ಯೋಗಾಚಾರ್ಯರೆಸಿದ. 'ಚ್ಖುನರಾಶಿ' 'ಸುಧಾಂಭೋ ರಾಶಿ  ಸುಧಾಂಶ' ಎನಿಸಿದ ಲಕುಳಿಶ 'ಕಾಳಾಮುಕ ನೈಷ್ಠಿಕಂ' ಎನಿಸಿದ ಸದ್ಯೋಜಾತ ಮುಂತಾದ ಮಹಾ ಪಂಡಿತರಾದ ಶೈವ ಗುರುಗಳು ಬಾಗವಾಡಿಯ ಪ್ರದೇಶದಲ್ಲಿ ಇದ್ದರು ಇಲ್ಲಿನ ಶಾಸನಗಳಲ್ಲಿ ಬಾಗವಾಡಿಯಲ್ಲಿ ಮಲ್ಲಿಕಾಜರ್ುನ ದೇವಾಲಯವಿದೆ. ಚಾಲುಕ್ಯರ ಕಾಲದಲ್ಲಿ ನಿಮರ್ಾಣಗೊಂಡ ದೇವಾಲಯವು ಮುಖ್ಯ ಗರ್ಭಗುಡಿ ಅದರ ಮುಂದಿನ ಅವಿನಾಶಿ ಮಂಟಪ ಪೂರ್ವ, ಉತ್ತರ ದಕ್ಷಿಣ ದಿಕ್ಕುಗಳಿಗೆ ದ್ವಾರವನ್ನು ಬಿಟ್ಟು ನವರಂಗ ಮಂಟಪವನ್ನು ಕಟ್ಟಲಾಗಿದೆ. ಪೂರ್ವದ ಬಾಗಿಲದ ಮುಂದೆ ನಂದಿಗೆ ಮೇಲೆ ಪ್ರತ್ಯಕ್ಷವಾಗಿ ಸುಂದರವಾದ ವಿಶಾಲವಾದ ಶಿಲಾಮಂಟಪವನ್ನು ರಚಿಸಲಾಗಿದೆ ದೇವಾಲಯದ ಮುಖ್ಯ ದೇವರು ಸಂಗಮನಾಥ ಮಲ್ಲಿಕಾಜರ್ುನ ವಾದರು ಇದನ್ನು "ಬಸವೇಶ್ವರ ದೇವಾಲಯ ಬವಸಣ್ಣನಗುಡಿ "ಎಂದು ಕರೆಯುತ್ತಾರೆ ಮಾದಲಾಂಬಿಕೆಯು ನಂದಿವೃತವನ್ನು ಆಚರಿ ಬಸವಣ್ಣನವರಿಗೆ ಜನ್ಮ ನೀಡಿದಳು. ಬಸವಣ್ಣನವರು ನಂದಿಯ ಅವತಾರ ಎಂಬ ನಂಬಿಕೆ ಇದೆ. ಆದ್ದರಿಂದ ಇಲ್ಲಿ ನಂದೀಶ್ವರನಿಗೆ ಅಂದರೆ ಬಸವಣ್ಣನವರಿಗೆ ಪ್ರಾಧಾನ್ಯವಿದೆ. 1968ರಲ್ಲಿ ಬಸವೇಶ್ವರ ಅಷ್ಟ ಶತಮಾನೋತ್ಸವ ಸ್ಮಾರಕವಾಗಿ ಇದಕ್ಕೆ "ಬಸವನ ಬಾಗೇವಾಡಿ"ಎಂದು ಅಧಿಕೃತ ಹೆಸರು ಬಂದಿದೆ.  ಬಸವಣ್ಣನವರಿಂದ ಬಾಗೇವಾಡಿಯು ಕೀತರ್ಿ ಹೆಚ್ಚಿದೆ.                                           


ಸುದ್ದಿ ಓದಿ