47 ವರ್ಷಗಳ ಸೇವೆಗೆ ಎ.ಎಸ್. ಪಾಟೀಲರಿಗೆ ಬಸವ ಪುರಸ್ಕಾರ
ವಿಜಯಪುರ 02: ಸಿಕ್ಯಾಬ್ ಶಿಕ್ಷಣ ಸಂಸ್ಥೆಯಲ್ಲಿ 47 ವರ್ಷಗಳ ಕಾಲ ಸಲ್ಲಿಸಿದ ಸೇವೆಯನ್ನು ಗುರುತಿಸಿ, ಸಂಸ್ಥೆಯ ಕಾರ್ಯದರ್ಶಿ ಎ.ಎಸ್. ಪಾಟೀಲ ಅವರಿಗೆ ಬೆಂಗಳೂರಿನ ಬಸವ ಪರಿಷತ್ ವತಿಯಿಂದ ‘ಬಸವ ಪುರಸ್ಕಾರ 2026’ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಎ.ಎಸ್. ಪಾಟೀಲ, “ಈ ಪುರಸ್ಕಾರವನ್ನು ವೈಯಕ್ತಿಕ ಗೌರವವೆಂದು ಪರಿಗಣಿಸುವುದಿಲ್ಲ. ಸಿಕ್ಯಾಬ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ದಿ. ಡಾ. ಎಸ್.ಎ. ಪುಣೇಕರ್ ಅವರು ಶಿಕ್ಷಣ ಕ್ಷೇತ್ರದಲ್ಲಿ ಬಿತ್ತಿದ ಸೇವಾ ಆಶಯದ ಫಲವೇ ಈ ಗೌರವ. ಆದ್ದರಿಂದ ಈ ಪುರಸ್ಕಾರವನ್ನು ಅವರ ಸ್ಮರಣೆಗೆ ಹಾಗೂ ಸೇವಾ ಪರಂಪರೆಗೆ ಅರ್ಿಸುತ್ತೇನೆ,” ಎಂದರು.
ಸಿಕ್ಯಾಬ್ ಸಂಸ್ಥೆಯಲ್ಲಿ 47 ವರ್ಷಗಳ ಸೇವೆ ಸಲ್ಲಿಸಿರುವುದು ತಮ್ಮ ಪಾಲಿನ ಜವಾಬ್ದಾರಿ ಮತ್ತು ಗೌರವವಾಗಿದ್ದು, ಸಂಸ್ಥಾಪಕರ ಶೈಕ್ಷಣಿಕ ದೃಷ್ಟಿಕೋನ ಹಾಗೂ ಸಮಾಜಮುಖಿ ಆಶಯಗಳನ್ನು ಮುಂದುವರಿಸುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಹೇಳಿದರು. ಸಿಕ್ಯಾಬ್ ಶಿಕ್ಷಣ ಸಂಸ್ಥೆಯು ಶೈಕ್ಷಣಿಕವಾಗಿ ಹಿಂದುಳಿದ ಹಾಗೂ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣದ ಅವಕಾಶ ಕಲ್ಪಿಸುವುದರೊಂದಿಗೆ ಗುಣಮಟ್ಟದ ಶಿಕ್ಷಣ ಮತ್ತು ವಿವಿಧ ಶೈಕ್ಷಣಿಕ ಚಟುವಟಿಕೆಗಳ ಮೂಲಕ ಸಮಾಜಮುಖಿ ಸೇವೆ ಸಲ್ಲಿಸುತ್ತಿದೆ. ಸಂಸ್ಥೆಯ ಅಧ್ಯಕ್ಷ ಸಲಾವುದ್ದಿನ್ ಪುಣೆಕರ್ ಮಾತನಾಡಿ, “ಸಂಸ್ಥೆಯ ಕಾರ್ಯದರ್ಶಿ ಎ.ಎಸ್. ಪಾಟೀಲ ಅವರಿಗೆ ಬಸವ ಪುರಸ್ಕಾರ ದೊರೆತಿರುವುದು ಸಂಸ್ಥೆಗೆ ಹೆಮ್ಮೆಯ ಸಂಗತಿ,” ಎಂದು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಡಾ. ಇರ್ಷಾದ ಪುಣೇಕರ್, ಎನ್.ಎಸ್. ಭೂಸನೂರ, ಡಾ. ಎಚ್.ಕೆ. ಯಡಹಳ್ಳಿ, ಲೋಕಾಯುಕ್ತ ಡಿವೈಎಸ್ಪಿ ಬಸವರಾಜ ಯಲಿಗಾರ, ಮಹೆಬೂಬ ಪುಣೆಕರ್ ಸೇರಿದಂತೆ ಸಂಸ್ಥೆಯ ವಿಭಾಗಗಳ ಮುಖ್ಯಸ್ಥರು ಹಾಗೂ ಇತರರು ಉಪಸ್ಥಿತರಿದ್ದರು.