ಬನಶಂಕರಿ ದೇವಿಯ ಜಾತ್ರಾ ಮಹೋತ್ಸವ; ಹಾಸ್ಯ ರಸಮಂಜರಿ ಕಾರ್ಯಕ್ರಮ

ಬನಶಂಕರಿ ದೇವಿಯ ಜಾತ್ರಾ ಮಹೋತ್ಸವ; ಹಾಸ್ಯ ರಸಮಂಜರಿ ಕಾರ್ಯಕ್ರಮ

           ಕೊಲ್ಹಾರ 27 : ಪಟ್ಟಣದಲ್ಲಿ ದೇವಾಂಗ ಸಮಾಜದವರು ಕಡಿಮೆ ಜನಸಂಖ್ಯೆಯಲ್ಲಿದ್ದರು ಕೂಡಾ ಬನಶಂಕರಿ ದೇವಿಯ ಜಾತ್ರೆಯನ್ನು ಭಕ್ತಿ ಸಂಘಟನೆಯಲ್ಲಿ ಯಾವುದೇ ಸಮಾಜಕ್ಕೂ ಕಡಿಮೆ ಇಲ್ಲದಂತೆ ವಿಜ್ರಂಭಣೆಯಿಂದ ನಡೆಸಿಕೊಂಡು ಬರುತ್ತಿದ್ದಾರೆ ಎಂದು ಮಾಜಿ ಸಚಿವ ಎಸ್‌ಕೆ ಬೆಳ್ಳುಬ್ಬಿ ಹೇಳಿದರು. ಸೋಮವಾರ ಸಂಜೆ ಪಟ್ಟಣದಲ್ಲಿ ನಡೆದ ಬನಶಂಕರಿ ದೇವಿಯ ಜಾತ್ರಾ ಮಹೋತ್ಸವದಲ್ಲಿ ಹಾಸ್ಯ ರಸಮಂಜರಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪಟ್ಟಣದಲ್ಲಿರುವ ಎಲ್ಲ ದೇವಾನು ದೇವತೆಗಳು, ಮಸೀದಿ ದರ್ಗಾ ಗಳಲ್ಲಿ ನಡೆಯುವ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಹಿಂದೂ ಮುಸ್ಲಿಂ ಸೇರಿದಂತೆ ಸರ್ವ ಸಮಾಜದವರು ಭಾಗವಹಿಸಬೇಕಾಗಿರುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಯಾರು ನಮಗೆ ಜಾತ್ರೆಗೆ ಬನ್ನಿ ಎಂದು ಕರೆಯುವಂತಹದಲ್ಲಾ ಪ್ರತಿಯೊಬ್ಬರೂ ಇಂತಹ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜನ್ಮ ಕೊಟ್ಟ ತಾಯಿ ಹಾಗೂ ಜನ್ಮ ಭೂಮಿಯ ಋಣವನ್ನು ನಾವು ನೀವುಗಳು ತೀರಿಸಬೇಕಾಗಿದೆ ಎಂದರು.

           ಅಲ್ಹಾಜ್ ಅಯ್ಯೂಬಖಾನ್ ಭಕ್ತಿಯರಖಾನ್ ಪಠಾಣ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಹಾಸ್ಯ ರಸಮಂಜರಿ ಕಾರ್ಯಕ್ರಮಗಳಿಂದ ನಮಗೆ ಜನಪದ ಸಾಹಿತ್ಯ ಜನಪದ ಕಲೆ ನಮಗೆ ಪರಿಚಯ ಆಗುವುದರೊಂದಿಗೆ ಕಲಾವಿದರ ಪ್ರತಿಭೆಯನ್ನು ಗುರುತಿಸಲು ಅವಕಾಶ ಸಿಗುತ್ತದೆ, ಅದರ ಜೊತೆಗೆ ಪ್ರತಿಯೊಬ್ಬರು ಮಾನವಿಯ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಮ್ಮ ಹೆತ್ತ ತಂದೆ ತಾಯಿ ,ಶಿಕ್ಷಣ ಕಲಿಸಿದ ಗುರುಗಳು ಸಮಾಜವನ್ನು ನಾವು ಗೌರವಿಸೋಣ ಅಂದಾಗ ನಮ್ಮ ಬಾಳು ಬೆಳಕಾಗುತ್ತದೆ ಎಂದರು ಕಾರ್ಯಕ್ರಮದಲ್ಲಿ ಕೈಲಾಸನಾಥ ಸ್ವಾಮೀಜಿ , ಜೆಡಿಎಸ್ ಮುಖಂಡ ಸೋಮನಗೌಡ ಪಾಟೀಲ ಮನಗೂಳಿ ,ಬಸಪ್ಪ ಗಾಜಿ, ದ್ಯಾವಪ್ಪ ತುಂಬರಮಟ್ಟಿ, ಶ್ರೀಶೈಲ ಅಥಣಿ , ಬಾಬು ಭಜಂತ್ರಿ,ಸುಭಾಸ ಭಜಂತ್ರಿ,ಕಲ್ಲು ಸೊನ್ನದ, ಗೂಳಪ್ಪ ವಾಲಿಕಾರ, ಹಣಮಂತ ಗೌರೋಜಿ, ಸಂತೋಷ ಹಡ್ರೋಳ್ಳಿ, ಹಣಮಂತ ಕೊಠಾರಿ, ಅಶೋಕ ಗಿಡ್ಡಪ್ಪಗೋಳ, ಮಲ್ಲಪ್ಪ ಗಣಿ ಸಿ ಎಮ್ ಗಣಕುಮಾರ ಇತರರಿದ್ದರು. ವರದಿ ರವಿಕುಮಾರ ತುಪ್ಪದ 


ಸುದ್ದಿ ಓದಿ