ಸಿರುಗುಪ್ಪ

ಈದ್ ಉಲ್ ಅಜ್ ಹಾ ಬಕ್ರಿದ್ ಶಾಂತಿ ಸಭೆ

ಈದ್ ಉಲ್ ಅಜ್ ಹಾ ಬಕ್ರಿದ್ ಶಾಂತಿ ಸಭೆ

ಸಿರುಗುಪ್ಪ22 : ಸಂವಿಧಾನ ಯಾವುದೇ ಧರ್ಮವನ್ನು ರಾಷ್ಟ್ರೀಯ ಧರ್ಮ ಎಂದು ಸ್ವೀಕರಿಸದೆ ಭಾರತದಲ್ಲಿ ಇರುವ ಎಲ್ಲಾ ಧರ್ಮಿಯರನ್ನು ಸಮಭಾವದಿಂದ ಕಾಣುವದು ಭಾರತದಲ್ಲಿ ಹಿಂದುಗಳು ಬಹು ಸಂಖ್ಯಾತರಾಗಿದ್ದರೂ ಹಿಂದೂ ಧರ್ಮವೂ ಭಾರತದ ರಾಷ್ಟ್ರೀಯ ಧರ್ಮವಲ್ಲ ಹಿಂದುಗಳಂತೆಯೇ ಮುಸ್ಲಿಮರು ಕ್ರಿಶ್ಚನರು ಜೈನರು ಬೌದ್ಧರು ಸಿಕ್ಕರು ಪಾರ್ಸಿಗಳು ಅವರವರ ಧರ್ಮದ  ಸಂಪ್ರದಾಯ ನಂಬಿಕೆ ಆಚರಣೆಗಳನ್ನು ಪಾಲಿಸುವ ಧಾರ್ಮಿಕ  ಸ್ವಾತಂತ್ರ್ಯವನ್ನು ಹೊಂದಿರುವುದೆ ಜಾತ್ಯಾತೀತ.ಭಾರತವು ಧಾರ್ಮಿಕ ವಿಷಯದಲ್ಲಿ  ಜಾತ್ಯಾತೀತ ಎಂದು ಸಿರುಗುಪ್ಪ ಡಿ ವೈ ಎಸ್ ಪಿ ವೆಂಕಟೇಶ್ ಅವರು ಹೇಳಿದರು.

ಸಿರುಗುಪ್ಪ ನಗರದ ಪೊಲೀಸ್ ಠಾಣಾ ಸಭಾಭವನದಲ್ಲಿ ಬಳ್ಳಾರಿ ಜಿಲ್ಲಾ ಪೊಲೀಸ್ ಸಿರುಗುಪ್ಪ ಉಪ ವಿಭಾಗ ಸಹಯೋಗದಲ್ಲಿ ಈದ್ ಉಲ್ ಅಜ್ ಹಾ ಬಕ್ರೀದ್  ಹಬ್ಬದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಾ ಸರ್ವರಿಗೂ ಬಕ್ರಿದ್ ಹಬ್ಬದ ಶುಭಾಶಯ ಕೋರಿದರು. ಸಿರುಗುಪ್ಪ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಯಶವಂತ್ ಬಿಸನಹಳ್ಳಿ ಸರ್ವರನ್ನು ಸ್ವಾಗತಿಸಿ ತ್ಯಾಗ ಮತ್ತು ಬಲಿದಾನದ ಪ್ರತೀಕವಾಗಿರುವ ಬಕ್ರೀದ್ ಹಬ್ಬವನ್ನು ನಾವೆಲ್ಲರೂ ಅಹಿತಕರ ಘಟನೆಗಳಾಗದಂತೆ  ಸುವ್ಯವಸ್ಥೆ ಕಾಪಾಡಿಕೊಂಡು ಸರ್ವರು ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸೋಣ ಬಕ್ರಿದ್ ಹಬ್ಬದ ಹಿನ್ನೆಲೆಯಲ್ಲಿ ಪ್ರಾಣಿ ದಯಾ ಕೋಮು ಸೌಹಾರ್ದತೆಗೆ ಧಕ್ಕೆಯಾಗದಂತೆ ಮಾರ್ಗಗಳ ಕುರಿತು ಮಾಹಿತಿ ನೀಡಿದರು.

ಮಹಿಳಾ ಡಿ ವೈ ಎಸ್ ಪಿ ಉಷಾರಾಣಿ, ಸಿರಿಗೇರಿ ಪಿಎಸ್‌ಐ ಭರತ್ ಪ್ರಕಾಶ್, ತೆಕ್ಕಲಕೋಟೆ ಪಿ ಎಸ್ ಐ  ಅರುಣಾ ಕುಮಾರ್ ರಾಠೋಡ್, ಸಿರುಗುಪ್ಪ ಪಿಎಸ್‌ಐ ವೀರನಗೌಡ  ಅವರು ಶಾಂತಿ ಸಭೆಯ ವ್ಯವಸ್ಥೆ ಗೊಳಿಸಿದ್ದರು ಖಾಜಿ ಹಾಫೀಜೆ ಖುರಾನ್ ನೂರುಲ್ ಹಖ್, ಖತೀಬ್ ಜಹೀರುದ್ದೀನ್ ಬಾಬು, ಜಿಲ್ಲಾ ವಕ್ಫ್‌ ಕಮಿಟಿ ಮಾಜಿ ಸದಸ್ಯರು ಸಮಾಜ ಸುಧಾರಕ ಹಾಜಿ ಅಬ್ದುಲ್ ನಬಿ, ಈದ್ಗಾ ಮತ್ತು ಖಬರ್ ಸ್ಥಾನ್ ಕಮಿಟಿಯ ಅಧ್ಯಕ್ಷ ಹಂಡಿ ಹಾಶಿಮ್, ಸೌದಾಗರ್ ಮಸೀದಿಯ ಮಾಜಿ ಅಧ್ಯಕ್ಷ ಹಾಜಿ  ಹಂಡಿ ಹುಸೇನ್ ಬಾಷಾ, ಚಿಟಿಕಿ ಎಸ್ ಹುಸೇನ್ ಸಾಬ್, ಹಾಜಿ ಕೆ ಬಾಬಾ ಸಾಬ್, ಅಡ್ವಕೇಟ್ ಎ ಎಸ್ ಅಮೀರ್ ಬಾಷಾಕಾಂಗ್ರೆಸ್ ಮುಖಂಡ ಮೋದಿನ್, ಮುಲ್ಲಾ ದಾದಾ ಖಲಂದರ್ ಮುಲ್ಲಾ ಬಾಬು ಗೌಸಿ ರಬ್ಬಾನಿ ಮೊಹಮ್ಮದ್ ಅಲಿ, ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ನೌಶಾದ್ ಅಲಿ, ತಾಲೂಕ ಮಟ್ಟದ ಮುಸ್ಲಿಂ ಸಮುದಾಯದ ಮುಖಂಡರು ಮತ್ತು ಎಲ್ಲಾ ಸಮಾಜದ ಮುಖಂಡರು ಭಾಗವಹಿಸಿ ಬಕ್ರೀದ್ ಹಬ್ಬವನ್ನು ಶಾಂತಿ ಸಹೋದರತೆಯಿಂದ ಆಚರಿಸಬೇಕು ಸಿರುಗುಪ್ಪ ತಾಲೂಕು ಹೆಸರುವಾಸಿಯಾಗಿದೆ ಸರಕಾರ ವಿಧಿಸಿರುವ ನಿಯಮಾವಳಿಯನ್ನು ಪಾಲನೆ ಮಾಡಬೇಕು. ಬಕ್ರೀದ್ ಹಬ್ಬ ತ್ಯಾಗ ಬಲಿದಾನದ ಸಂಕೇತವಾಗಿದೆ ಸರ್ವಧರ್ಮಿಯರು ಶ್ರದ್ದೆಯಿಂದ ಬಕ್ರಿದ್ ಹಬ್ಬ ಆಚರಿಸುವಂತೆ ಸಭೆಗೆ ಸಲಹೆ ಸೂಚನೆ ನೀಡಿದರು. 


ಸುದ್ದಿ ಓದಿ