ಬಜಾಜ್‌ ಆಟೋ ವಾಹನಗಳ ಮಾರಾಟ ಶೇ. 44ರಷ್ಟು ಹೆಚ್ಚಳ

ಬಜಾಜ್‌ ಆಟೋ ವಾಹನಗಳ ಮಾರಾಟ ಶೇ. 44ರಷ್ಟು ಹೆಚ್ಚಳ

ಮುಂಬೈ, ಜು 2 ಬಜಾಜ್ ಆಟೋ 2021ರ ಜುಲೈ ತಿಂಗಳಲ್ಲಿ ಒಟ್ಟು 369,116 ವಾಹನಗಳ ಮಾರಾಟವನ್ನು ವರದಿ ಮಾಡಿದೆ. ಇದು 2020ರ ಜುಲೈನಲ್ಲಿ 2,55,832 ರಷ್ಟಿತ್ತು. ಒಟ್ಟಾರೆ ಬಜಾಜ್‌ ಆಟೋ ಶೇ.44ರಷ್ಟು ಮಾರಾಟ ಬೆಳವಣಿಗೆಯನ್ನು ದಾಖಲಿಸಿದೆ.
 ಜುಲೈ ತಿಂಗಳಲ್ಲಿ 2,01,843 ವಾಹನಗಳು ರಫ್ತಾಗಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 108ರಷ್ಟು ಏರಿಕೆ ಕಂಡಿದೆ. 2020ರಲ್ಲಿ ಇದು 96,856ರಷ್ಟಿತ್ತು.
ಕಂಪನಿಯು 2021ರ ಜುಲೈನಲ್ಲಿ 330,569ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ. 2020ರ ಜುಲೈನಲ್ಲಿ ದಾಖಲಾಗಿದ್ದ 238,556ಗೆ ಹೋಲಿಸಿದರೆ  ಇದು ಶೇ.39ರಷ್ಟು ಹೆಚ್ಚಳವಾಗಿದೆ.

ಸುದ್ದಿ ಓದಿ